ರಸಗೊಬ್ಬರದ ಬೆಲೆ ಹೆಚ್ಚಳದ ವಿರುದ್ಧ ತೀರ್ಥಹಳ್ಳಿ ಯುವ ಕಾಂಗ್ರೆಸ್ ಪ್ರತಿಭಟನೆ
ತೀರ್ಥಹಳ್ಳಿ : ತಾಲೂಕು ಯುವ ಕಾಂಗ್ರೆಸ್ ಘಟಕದ ವತಿಯಿಂದ ರಸ ಗೊಬ್ಬರಗಳ ಬೆಲೆಗಳನ್ನು ದಿಡೀರನೆ ಏರಿಕೆ ಮಾಡಿರುವ ಕೇಂದ್ರದ ಬಿಜೆಪಿ ಸರ್ಕಾರದ ನಡೆಯನ್ನ ಖಂಡಿಸಿ ಇಂದು ತೀರ್ಥಹಳ್ಳಿ ಯುವ ಕಾಂಗ್ರೆಸ್ ವತಿಯಿಂದ
ತಾಲೂಕು ಕಚೇರಿ ಮುಂಭಾಗ ಪ್ರತಿಭಟನಾ ಸಭೆ ನಡೆಸಲಾಯಿತು.
ಕೇಂದ್ರ ಬಿಜೆಪಿ ಸರ್ಕಾರ ಒಂದೆಡೆ ರೈತರಿಗೆ ಕಿಸಾನ್ ಸಮ್ಮಾನ್ ಎಂದು ವರ್ಷಕ್ಕೆ 4 ಸಾವಿರ ರೂ.ಗಳನ್ನು ನೀಡಿ, ಹಿಂಬಾಗಿಲಿನಿಂದ ಗೊಬ್ಬರ, ಔಷಧಿ, ಬಿತ್ತನೆ ಬೀಜಗಳ ಬೆಲೆ ಏರಿಕೆ ಮಾಡುವ ಮೂಲಕ ಅದಕ್ಕಿಂತ ದುಪ್ಪಟ್ಟು ಹಣವನ್ನು ರೈತರಿಂದ ವಸೂಲು ಮಾಡುತ್ತಿದೆ. ಮಳೆಯ ಅನಿಶ್ಚಿತತೆ, ಅತಿವೃಷ್ಟಿ, ಅನಾವೃಷ್ಟಿಗಳಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ, ಬೆಳೆಹಾನಿ ಮುಂತಾದ ಕಾರಣಗಳಿಗೆ ರೈತರ ಆತ್ಯಹತ್ಯೆಗಳೂ ನಡೆಯುತ್ತಿವೆ. ಇದರ ಮಧ್ಯೆ ಕೇಂದ್ರದ ಬಿಜೆಪಿ ಸರ್ಕಾರ ಏಕಾಏಕಿ ಅವೈಜ್ಞಾನಿಕವಾಗಿ ರಸಗೊಬ್ಬರಗಳ ಬೆಲೆ ಏರಿಕೆ ಮಾಡಿದರೆ, ಮೊದಲೇ ಸಂಕಷ್ಟದಲ್ಲಿರುವ ರೈತರು ಮತ್ತಷ್ಟು ಸಂಕಷ್ಟಕ್ಕೊಳಗಾಗಲಿದ್ದಾರೆ. ಕೇಂದ್ರ ಸರ್ಕಾರ ರಸಗೊಬ್ಬರಗಳ ಬೆಲೆ ಇಳಿಕೆ ಮಾಡದಿದ್ದಲ್ಲಿ ಯುವ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದರು.
ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಪೂರ್ಣೇಶ್ ಕೆಳಕೆರೆ, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರುಗಳಾದ ಶ್ರೇಯಸ್ ರಾವ್ ಸೀಬಿನಕೆರೆ ಹಾಗೂ ರವೀಶ್ ಹೊಸ್ಕೆರೆ ಅವರ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನಾ ಸಭೆ ನಡೆಸಿ ತಹಶೀಲ್ದಾರ್ ರವರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆಸ್ತೂರು ಮಂಜುನಾಥ್, ಬ್ಲಾಕ್ ಪ್ರಧಾನ ಕಾರ್ಯದರ್ಶಿಯಾದ ಅಶ್ವಲ್ ಗೌಡ ಸಾಲೂರು, ಗ್ರಾ.ಪಂ ಸದಸ್ಯರು ಹಾಗೂ ಯುವ ಕಾಂಗ್ರೆಸ್ ಮುಖಂಡರಾದ ಫಣಿರಾಜ್ ಕಟ್ಟೆಹಕ್ಲು, ಕಾಂಗ್ರೆಸ್ ಪ.ಜಾ/ ಪ.ಪಂ ತಾಲೂಕು ಅಧ್ಯಕ್ಷರಾದ ನವೀನ್ ಕುಮಾರ್ ಹಾಗೂ ಕಿಟ್ಟಪ್ಪ ಮಾಸ್ಟರ್, ಮುಳಬಾಗಿಲು ಗ್ರಾ.ಪಂ ಸದಸ್ಯರಾದ ಮಂಜುನಾಥ್ ಶೆಟ್ಟಿ, ಪಕ್ಷದ ಪ್ರಮುಖರಾದ ಮಹೇಂದ್ರ ಕೆಳಕೆರೆ, ಯುವ ಕಾಂಗ್ರೆಸ್ ಬ್ಲಾಕ್ ಉಪಾಧ್ಯಕ್ಷರಾದ ಪ್ರವೀಣ್ ಮೇಲಿನಕುರುವಳ್ಳಿ, ಯುವ ಕಾಂಗ್ರೆಸ್ ಮುಖಂಡರುಗಳಾದ ಸುಭಾಷ್ ಕುಲಾಲ್, ಆಸಿಫ್ ಸೀಬಿನಕೆರೆ, ಶ್ರೀಕಾಂತ್ ಬೆಟ್ಟಮಕ್ಕಿ, ಅಕ್ಷಯ್ ಕಟ್ಟೆಹಕ್ಲು, ರಂಜಿತ್ ಮೇಲಿನಕುರುವಳ್ಳಿ, ಶ್ರೀನಂದ ದಬ್ಬಣಗದ್ದೆ, ದೀಪಕ್, ಮಂಜು ಕೆಳಕೆರೆ, ರಾಜನಂದನ್ ಮೇಳಿಗೆ , ಭರತ್ ಹುಗಾರ್, ಸಂದೀಪ್ ರ್ಯಾವೆ ಹಾಗೂ ಪಕ್ಷದ ಮುಖಂಡರುಗಳು ಮತ್ತು ಯುವ ಕಾಂಗ್ರೆಸ್ ಮಿತ್ರರು ಉಪಸ್ಥಿತರಿದ್ದರು..
Tags:
ಕಾಂಗ್ರೆಸ್