ಎಸ್ಎಸ್ಎಲ್ "ಸಿ ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಏಳನೇ ರ‌್ಯಾಂಕ್ ಪಡೆದ ವಾಗ್ದೇವಿ ಶಾಲೆಯ ವಿದ್ಯಾರ್ಥಿ
ತೀರ್ಥಹಳ್ಳಿ : ವಾಗ್ದೇವಿ ಶಿಕ್ಷಣ ಸಂಸ್ಥೆಯ ಎಸ್ಎಸ್ಎಲ್ "ಸಿ ವಿದ್ಯಾರ್ಥಿ ಪೃಥ್ವಿ ರಾಜ್ ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಏಳನೇ ರ‌್ಯಾಂಕ್ ಪಡೆದಿದ್ದಾರೆ.
ಹೌದು ಈ ಮೊದಲು ರಾಜ್ಯದ ರ‌್ಯಾಂಕ್ ನಲ್ಲಿ ಇರದ ಪೃಥ್ವಿ 625 ಅಂಕಗಳಿಗೆ 610 ಅಂಕ ಪಡೆದಿದ್ದರು. ಮರುಮೌಲ್ಯಮಾಪನದಲ್ಲಿ ಪೃಥ್ವಿ ರಾಜ್ ಕನ್ನಡ, ಗಣಿತ, ಸಮಾಜ ವಿಜ್ಞಾನದಲ್ಲಿ ಮತ್ತೆ ಒಂಭತ್ತು ಅಂಕ ಪಡೆಯುವ ಮೂಲಕ ಒಟ್ಟು 625 ಅಂಕಗಳಿಗೆ 619 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಏಳನೇ ರ‌್ಯಾಂಕ್ ಪಡೆದಿದ್ದಾರೆ.
ಪ್ರಕಾಶ್ ಶೆಟ್ಟಿ ಹಾಗೂ ರಂಜಿತಾ ದಂಪತಿಗಳ ಪುತ್ರನಾಗಿರುವ ಪೃಥ್ವಿ ರಾಜ್ ರಾಜ್ಯಕ್ಕೆ ಏಳನೇ ರ‌್ಯಾಂಕ್ ಪಡೆದಿದ್ದಾರೆ. ಪೃಥ್ವಿ ರಾಜ್ ವಾಗ್ದೇವಿ ಶಿಕ್ಷಣ ಸಂಸ್ಥೆ ಹಾಗೂ ಸ್ನೇಹಿತರು ಶುಭಹಾರೈಸಿದ್ದಾರೆ.
Tags:
ವಾಗ್ದೇವಿ ಶಾಲೆ