ಶಿಕ್ಷಣ ಇಲಾಖೆಯ ಆಟ - ವಿದ್ಯಾರ್ಥಿಗಳಿಗೆ ಪರದಾಟ - ಇಲಾಖೆ ಅಧಿಕಾರಿಗಳ ಎಡವಟ್ಟಿಗೆ ಪೋಷಕರ ಆಕ್ರೋಶ..! tth

ಶಿಕ್ಷಣ ಇಲಾಖೆಯ ಆಟ - ವಿದ್ಯಾರ್ಥಿಗಳಿಗೆ ಪರದಾಟ - ಇಲಾಖೆ ಅಧಿಕಾರಿಗಳ ಎಡವಟ್ಟಿಗೆ ಪೋಷಕರ ಆಕ್ರೋಶ..!

ತೀರ್ಥಹಳ್ಳಿ : ವಿದ್ಯಾರ್ಥಿಗಳು ಪರೀಕ್ಷೆ ಬರೆದು ನಮಗೆ ಇಂತಹದೊಂದು ಅಂಕ ಬರಬಹುದು ಎಂಬ ನಂಬಿಕೆ ಇಟ್ಟುಕೊಂಡಿರುತ್ತಾರೆ. ಆದರೆ ಕೆಲವು ಅಧಿಕಾರಿಗಳು ಮಾಡುವ ಎಡವಟ್ಟಿಗೆ ವಿದ್ಯಾರ್ಥಿಗಳು ಪರದಾಟ ನಡೆಸುವಂತಾಗಿದೆ.

ಹೌದು ಅದರಲ್ಲೂ ಎಸ್ಎಸ್ಎಲ್'ಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಬಹು ಮುಖ್ಯ ಘಟ್ಟ. ಅಂತಹ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಜೊತೆಗೆ ಚೆಲ್ಲಾಟ ಆಡುವುದು ಯಾವ ಮಟ್ಟಿಗೆ ಸರಿ ಎಂಬ ಮಾತು ಪೋಷಕರಿಂದ ಕೇಳಿ ಬರುತ್ತಿದೆ. ಅದರಲ್ಲೂ ಶೇ 90% ಮೇಲೆ ಬರುವ ವಿದ್ಯಾರ್ಥಿಗಳ ಅಂಕಗಳನ್ನು ಬೇಕಂತಲೇ ಏನಾದರು ಕಡಿಮೆ ಮಾಡುತ್ತಾರ? ಮರುಮೌಲ್ಯಮಾಪನಕ್ಕೆ ವಿದ್ಯಾರ್ಥಿಗಳು ಹಾಕಬೇಕು ಎಂಬ ಆಲೋಚನೆ ಏನಾದರು ಶಿಕ್ಷಣ ಇಲಾಖೆಗೆ ಇದೆಯೇ? ಎಂಬೆಲ್ಲಾ ಅನುಮಾನಗಳನ್ನು ಪೋಷಕರು ವ್ಯಕ್ತಪಡಿಸಿದ್ದಾರೆ 

ಅದಕ್ಕೆ ಪುಷ್ಟಿ ನೀಡುವಂತೆ ತೀರ್ಥಹಳ್ಳಿಯ ವಿದ್ಯಾರ್ಥಿಯೋರ್ವನ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿ ಲಭ್ಯವಾಗಿದ್ದು ಅದರಲ್ಲಿ ಉತ್ತರವನ್ನು ಸರಿಪಡಿಸಿ ನಾಲ್ಕು ಅಂಕ ನೀಡಲಾಗಿದೆ ಆದರೆ ಕೆಳಗಡೆ ಒಟ್ಟು ಅಂಕ ನೀಡುವಾಗ ಆ ಪ್ರೆಶ್ನೆಗೆ ಸೊನ್ನೆ ಸುತ್ತಲಾಗಿದೆ. ಇಂತಹ ತಪ್ಪುಗಳನ್ನು ಅಧಿಕಾರಿಗಳು ಮಾಡುವುದು ಸರಿಯೇ? ಅಥವಾ ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಹಾಕಬೇಕು ಎಂಬ ಉದ್ದೇಶದಿಂದ ಹೀಗೆ ಮಾಡುತ್ತಾರ?
ಒಂದು ಪತ್ರಿಕೆ ಪಡೆಯಲು 400 ಹಾಗೂ ಮರುಮೌಲ್ಯಮಾಪನಕ್ಕೆ ಹಾಕಲು 800 ನೀಡಬೇಕು, 
ಲಕ್ಷಗಟ್ಟಲೆ ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಹಾಕಿದ್ದಾರೆ. ಹಾಗಾದರೆ ಅಷ್ಟೊಂದು ತಪ್ಪು ಮಾಡುವ ಅಧಿಕಾರಿಗಳಿಗೆ ಇಲಾಖೆ ಏನು ಹೇಳುವುದಿಲ್ಲವೇ ಎಂಬ ಪ್ರೆಶ್ನೆಗಳನ್ನು ಪೋಷಕರು ಕೇಳಿದ್ದಾರೆ.

ಕಣ್ತಪ್ಪಿನಿಂದ ಆಗಿದೆ ಎಂದು ಉಡಾಫೆ ಉತ್ತರ ನೀಡುವ ಬದಲು ಇಂತಹ ಎಡವಟ್ಟುಗಳಿಗೆ ಶಿಕ್ಷಣ ಇಲಾಖೆ ಸೂಕ್ತ ಉತ್ತರ ನೀಡಬೇಕಿದೆ ಎಂದು ಪೋಷಕರು ಆಗ್ರಹಿಸಿದ್ದಾರೆ
Previous Post Next Post