ಎಸ್ಎಸ್ಎಲ್ "ಸಿ ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಎರಡನೇ ರ‌್ಯಾಂಕ್ ಪಡೆದ ವಾಗ್ದೇವಿ ಶಾಲೆಯ ವಿದ್ಯಾರ್ಥಿನಿ
ತೀರ್ಥಹಳ್ಳಿ : ವಾಗ್ದೇವಿ ಶಿಕ್ಷಣ ಸಂಸ್ಥೆಯ ಎಸ್ಎಸ್ಎಲ್ "ಸಿ ವಿದ್ಯಾರ್ಥಿನಿ ಕನ್ನಿಕಾ ಜಿ ಶೆಟ್ಟಿ ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಎರಡನೇ ರ‌್ಯಾಂಕ್ ಪಡೆದಿದ್ದಾರೆ.
ಹೌದು ಈ ಮೊದಲು 625 ಅಂಕಗಳಿಗೆ 621 ಅಂಕ ಪಡೆದು ರಾಜ್ಯಕ್ಕೆ ಐದನೇ ರ‌್ಯಾಂಕ್ ಪಡೆದಿದ್ದ ಕನ್ನಿಕಾ ವಿಜ್ಞಾನದಲ್ಲಿ ಮತ್ತೆ ಮೂರು ಅಂಕ ಪಡೆಯುವ ಮೂಲಕ ಒಟ್ಟು 625 ಅಂಕಗಳಿಗೆ 624 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಎರಡನೇ ರ‌್ಯಾಂಕ್ ಪಡೆದಿದ್ದಾರೆ.
ಗಿರೀಶ್ ಹಾಗೂ ಪವಿತ್ರಾ ದಂಪತಿಗಳ ಪುತ್ರಿಯಾಗಿರುವ ಕನ್ನಿಕಾ ರಾಜ್ಯಕ್ಕೆ ಎರಡನೇ ರ‌್ಯಾಂಕ್ ಪಡೆದಿದ್ದಾರೆ. ಕನ್ನಿಕಾಳಿಗೆ ವಾಗ್ದೇವಿ ಶಿಕ್ಷಣ ಸಂಸ್ಥೆ ಹಾಗೂ ಸ್ನೇಹಿತರು ಶುಭಹಾರೈಸಿದ್ದಾರೆ.
Tags:
ವಾಗ್ದೇವಿ ಶಾಲೆ