ತೀರ್ಥಹಳ್ಳಿಯಲ್ಲಿ ಮಳೆಯಲ್ಲೂ ಸಾಗಿದ ತಿರಂಗ ಯಾತ್ರೆ..! tth

ತೀರ್ಥಹಳ್ಳಿಯಲ್ಲಿ ಮಳೆಯಲ್ಲೂ ಸಾಗಿದ ತಿರಂಗ ಯಾತ್ರೆ..! 

ತೀರ್ಥಹಳ್ಳಿ:  ಮಳೆಯಲ್ಲೂ ತಿರಂಗ ಯಾತ್ರೆಯನ್ನ ಬಿಜೆಪಿ ನಡೆಸಿದೆ. ಆಗುಂಬೆ ಬಸ್ ನಿಲ್ದಾಣ ದಿಂದ ಆರಂಭಗೊಂಡ ತಿರಂಗ ಯಾತ್ರೆ ಮುಖ್ಯ ಬಸ್ ನಿಲ್ದಾಣವರೆಗೂ ಯಾತ್ರೆ ಅದ್ದೂರಿಯಾಗಿ ಸಾಗಿ ನಂತರ ಗೋಪಾಲಗೌಡ ರಂಗಮಂದಿರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ಮಳೆಯನ್ನು ಲೆಕ್ಕಿಸದೆ ಬಿಜೆಪಿ ತಿರಂಗ ಯಾತ್ರೆಯನ್ನ ನಡೆಸಿದೆ.

ಆಪರೇಷನ್ ಸಿಂದೂರ ಯಶಸ್ವಿಯಾದ ಬೆನ್ನಲ್ಲೇ ತಿರಂಗ ಯಾತ್ರೆ ನಡೆದಿತ್ತು. ಆದರೆ ವರುಣ ಕೃಪಾಕಟಾಕ್ಷ ಬಿಜೆಪಿ ತಿರಂಗ ಯಾತ್ರೆಗೆ ಅಡ್ಡಿ ಎನಿಸಿದರೂ ಮಳೆಯಲ್ಲೇ ಯಾತ್ರೆಯನ್ನ ಪಕ್ಷ ಯಶಸ್ವಿಗೊಳಿಸಿದೆ. ರಾಷ್ಟ್ರಧ್ವಜವನ್ನ ಹಿಡಿದುಕೊಂಡು ಯಾತ್ರೆ ನಡೆಸಲಾಯಿತು. 


ರಾಷ್ಡ್ರಾಭಿಮಾನಿಗಳು ಜೈಕಾರ ಘೋಷಣೆಯನ್ನ ಕೂಗಿದರು. ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂದೂರ ಎಂಬ ಘೋಷಣೆ ಮಳೆಯಲ್ಲೂ ಗಮನಸೆಳೆಯಿತು. ರಾಷ್ಟ್ರಧ್ವಜ ಹಿಡಿದು ಕಾರ್ಯಕರ್ತರು ಕುಣಿದಿದ್ದಾರೆ. ಶಾಸಕ ಆರಗ ಜ್ಞಾನೇಂದ್ರ  ಈ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಅನೇಕ ನಿವೃತ್ತ ಯೋಧರೂ ಭಾಗಿಯಾಗಿದ್ದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. 



Previous Post Next Post