ಮದುವೆ ವಾರ್ಷಿಕೋತ್ಸವ - ಹಣವನ್ನು ದುಂದು ವೆಚ್ಚ ಮಾಡದೇ ಗಡಿ ಕಾಯುವ ಯೋಧರಿಗೆ ನೀಡಿದ ತೀರ್ಥಹಳ್ಳಿಯ ದಂಪತಿಗಳು Special News

ಮದುವೆ ವಾರ್ಷಿಕೋತ್ಸವ - ಹಣವನ್ನು ದುಂದು ವೆಚ್ಚ ಮಾಡದೇ ಗಡಿ ಕಾಯುವ ಯೋಧರಿಗೆ ನೀಡಿದ ತೀರ್ಥಹಳ್ಳಿಯ ದಂಪತಿಗಳು 
ತೀರ್ಥಹಳ್ಳಿ : ಈಗಿನ ಕಾಲದಲ್ಲಿ ಹಣವನ್ನು ಬೇಕಾ ಬಿಟ್ಟಿಯಾಗಿ ಖರ್ಚು ಮಾಡುವುದು ಸಹಜವಾಗಿದೆ. ಜನ್ಮದಿನ, ಮದುವೆ, ಮದುವೆ ವಾರ್ಷಿಕೋತ್ಸವ, ಹೀಗೆ ಹಲವಾರು ಕಾರ್ಯಕ್ರಮಗಳಲ್ಲಿ ಪಾರ್ಟಿ ಎಂಬ ಹೆಸರಿನಲ್ಲಿ ದುಂದು ವೆಚ್ಚ ಮಾಡುತ್ತಾರೆ. ಆದರೆ ತೀರ್ಥಹಳ್ಳಿಯ ಎರಡು ದಂಪತಿಗಳು ವಿಶೇಷವಾಗಿ ತಮ್ಮ ಮದುವೆ ವಾರ್ಷಿಕೋತ್ಸವದ ದಿನ ಪಾರ್ಟಿ ಎಂದು ದುಂದು ವೆಚ್ಚ ಮಾಡದೇ ಆ ಹಣವನ್ನು ಯೋಧರಿಗೆ ನೀಡಿದ್ದಾರೆ.


ಹೌದು ಮೇಲಿನಕುರುವಳ್ಳಿ ಗ್ರಾಮಪಂಚಾಯಿತಿ ಸದಸ್ಯರಾದ ಅಣ್ಣಪ್ಪ ಹಾಗೂ ಶ್ರುತಿ ದಂಪತಿ ಮತ್ತು ವಿಠಲನಗರದ ಪತ್ರಕರ್ತ ದಂಪತಿಗಳಾದ ಶ್ರೀಕಾಂತ್ ನಾಯಕ್ ಹಾಗೂ ರಶ್ಮಿ ಶ್ರೀಕಾಂತ್ ದಂಪತಿಗಳು ತಮ್ಮ ವಿವಾಹ ವಾರ್ಷಿಕೋತ್ಸವದ ದಿನವನ್ನು ವಿಶೇಷವಾಗಿಸುವ ಸಲುವಾಗಿ ಗಡಿ ಕಾಯುವ ಯೋಧರಿಗೆ ತಮ್ಮ ಕೃತಜ್ಞತೆ ಸಲ್ಲಿಸುವ ಸಲುವಾಗಿ ತಮ್ಮ ಕೈಯಲ್ಲಾದ ಹಣವನ್ನು ನೀಡಿದ್ದಾರೆ.

ಭಾರತ - ಪಾಕಿಸ್ತಾನ ನಡುವೆ ಈಗ ಕದನ ವಿರಾಮ ಆಗಿದ್ದರು ಅಲ್ಲಿ ಭಾರತದ ರಕ್ಷಣೆಗಾಗಿ ಪ್ರತಿನಿತ್ಯ ತಮ್ಮ ಕಷ್ಟವನ್ನು ನುಂಗಿ ಕಾಯುವ ವೀರ ಯೋಧರಿಗೆ ಈ ವಿಶೇಷ ರೀತಿಯಲ್ಲಿ ಸಹಾಯ ಮಾಡಿದ್ದು ಪಾರ್ಟಿ, ಎಂಬ ಹೆಸರಿನಲ್ಲಿ ನಾವು ಮಾಡುವ ಖರ್ಚು ದೇಶ ಕಾಯುವ ಯೋಧರಿಗೆ ನೀಡಿದರೆ ನಮಗೆ ಯೋಧರ ಜೊತೆಗೆ ನಾವೆಲ್ಲೋ ಇದ್ದಿವಿ ಎಂಬ ಭಾವನೆ ಬರುತ್ತದೆ ಎಂದು ದಂಪತಿಗಳು ಹೇಳಿದ್ದಾರೆ.

ಒಟ್ಟಿನಲ್ಲಿ ಹಣವನ್ನು ದುಂದು ಖರ್ಚು ಮಾಡುವ ಈಗಿನ ಕಾಲದಲ್ಲಿತಮ್ಮ ಕೈಯಲ್ಲಾದ ಹಣವನ್ನು ಯೋಧರಿಗೆ ನೀಡಿ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ವಿಶೇಷ ದಂಪತಿಗಳಿಗೆ ಶುಭವಾಗಲಿ ಎಂದು ಶಿವಮೊಗ್ಗ ಸುದ್ದಿ ಹಾರೈಸುತ್ತದೆ.


Previous Post Next Post