ಹಾರೋಗೋಳಿಗೆ ವ್ಯಾಪ್ತಿಯಲ್ಲಿ ಚಿರತೆ ಪತ್ತೆ..!
ತೀರ್ಥಹಳ್ಳಿ: ಹಾರೋಗೊಳಿಗೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಅಂದಗೆರೆ ಗ್ರಾಮದ ತುಂಬೆಸರದಲ್ಲಿ
ಚಿರತೆ ಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಡಂಕಣ್ಣ ಆಚಾರರ್ ಎಂಬುವರ ಮನೆಯಲ್ಲಿ
ಬುಧವಾರ ರಾತ್ರಿ ಸುಮಾರು 1 ಗಂಟೆ ಸುಮಾರಿಗೆ
ನಾಯಿ ಬೊಗಳಿದಾಗ ಎದ್ದು ಮನೆಯವರು ಹೊರ
ಬಂದು ನೋಡಿದಾಗ ನಾಯಿಯನ್ನು ಚಿರತೆ ಹೊತ್ತು ಹೋಗಿದೆ.
ಚಿರತೆ ಹಿಡಿಯಲು ಅರಣ್ಯ ಇಲಾಖೆಯವರಿಗೆ ಕಾಲ್
ಮಾಡಿ ಹೇಳಿದಾಗ ಇಲಾಖೆ ಅಧಿಕಾರಿಗಳು
ಬೇಜವಾಬ್ದಾರಿತನ ತೋರಿಸಿದ್ದಾರೆ, ಚಿರತೆ ತಪ್ಪಿಸಿಕೊಂಡಿದ್ದು ಗ್ರಾಮಸ್ಥರು ಭಯಪಡುವಂತಾಗಿದೆ. ತಕ್ಷಣ ಚಿರತೆ ಹಿಡಿದು ದಟ್ಟ ಅರಣ್ಯಕ್ಕೆ ಬಿಡಬೇಕು ಎಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ.
Tags:
ತೀರ್ಥಹಳ್ಳಿ ಸುದ್ದಿ