ಮೋದಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ - ಓರ್ವ ಪೊಲೀಸ್ ವಶಕ್ಕೆ..! Sagara

ಮೋದಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ - ಓರ್ವ ಪೊಲೀಸ್ ವಶಕ್ಕೆ..!


ಸಾಗರ :  ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಗರದ ಕಾರ್ಗಲ್ ನಿವಾಸಿಯೋರ್ವ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್  ಹರಿಬಿಟ್ಟಿದ್ದು ಆತನನ್ನು ಸಾಗರದ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

 ಭಾರತ ಪಾಕಿಸ್ತಾನ ಯುದ್ಧ ಶುರುವಾಗಿ ಕದನ ವಿರಾಮದ ಬೆನ್ನಲ್ಲೇ ನರೇಂದ್ರ ಮೋದಿ ವಿರುದ್ಧ ಸಾಕಷ್ಟು ಟೀಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.  ಪೊಲೀಸ್ ಇಲಾಖೆ ತೀವ್ರ ನಿಗಾವಹಿಸಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ.

ಕಾರ್ಗಲ್ ನ ವ್ಯಕ್ತಿಯೋರ್ವ ಪ್ರಧಾನಿ ಮೋದಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಫ್ ಎದುರು ಮಂಡಿಯೂರಿ ಕದನ ವಿರಮವೋ ಅಥವಾ ಅದಾನಿ ಬಂಧನವೋ ಎಂದು ಕೇಳುವ ಮತ್ತು ಮೋದಿ ಕದನವಿರಾಮವೇ ಇರಲಿ ಬಾಸ್ ಎಂಬ ಪೋಸ್ಟ್ ನ್ನ ವಾಟ್ಸಪ್ ಗ್ರೂಪ್ ನಲ್ಲಿ ಹರಿಬಿಟ್ಟಿದ್ದನು. 

ಈ ವಿಚಾರವಾಗಿ ಸಾಗರ ಪೊಲೀಸರು ಆತನನ್ನು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Previous Post Next Post