ಬೇಟೆಯಾಡುವ ಹುಚ್ಚಿಗೆ ಬಲಿಯಾಗ್ತಿದ್ದಾರಾ ಯುವಕರು..!? Shikari craze

ಬೇಟೆಯಾಡುವ ಹುಚ್ಚಿಗೆ ಬಲಿಯಾಗ್ತಿದ್ದಾರಾ ಯುವಕರು..!?



ತೀರ್ಥಹಳ್ಳಿ : ಜೀವ ಇದ್ದರೆ ಸಾಕು ಜೀವನ ನೆಡೆಸಬಹುದು ಎಂಬ ಮಾತಿದೆ. ಆದರೆ ಅಂತಹ ಜೀವನವನ್ನು ಇತ್ತೀಚಿನ ಯುವಕರು ತಮ್ಮ ಕ್ರೇಜ್ ಗಾಗಿ ಕಳೆದುಕೊಳ್ಳುತ್ತಿದ್ದಾರಾ ಎಂಬ ಅನುಮಾನಕ್ಕೆ ತೀರ್ಥಹಳ್ಳಿಯ ಘಟನೆ ಸಾಕ್ಷಿಯಾಗಿದೆ.
ಕಾಡು ಪ್ರಾಣಿಗಳನ್ನು ಬೇಟೆಯಾಡಲು ಹೋದ ಯುವಕ ಈಗ ಮಿಸ್ ಫೈರ್ ಆಗಿ ಸಾವನ್ನಪ್ಪಿದ್ದಾನೆ.  ಏನಪ್ಪಾ ಈ ಶಿಕಾರಿ ಕಥೆ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ!


ಮಲೆನಾಡು ಭಾಗದಲ್ಲಿ ಕೆರೆ ಬೇಟೆಯ ಜೊತೆಗೆ ಶಿಕಾರಿ ಕೂಡ  ಕ್ರೇಜ್ ಆಗಿ ಮಾರ್ಪಟ್ಟಿದ್ದೆ . ಶಿಕಾರಿ ಮಾಡುವುದಕ್ಕೆ ಹಲವಾರು ಕಾನೂನು ಕಟ್ಟಲೆಗಳು ಇದ್ದರೂ ಸಹ ಕೆಲವರು ಬಂಡ ಧೈರ್ಯ ಮಾಡಿ ಶಿಕಾರಿಗೆ ಹೋಗುವುದು ಸಾಮಾನ್ಯವಾಗಿದೆ. ಪೊಲೀಸರು ಹಾಗೂ ಅರಣ್ಯ ಇಲಾಖೆಯ ಕಣ್ತಪ್ಪಿಸಿ ಕಾಡು ಪ್ರಾಣಿಗಳ ಬೇಟೆಗಾಗಿ ಶಿಕಾರಿಗೆ ಹೋಗುವರ ಸಂಖ್ಯೆ ಹೆಚ್ಚಾಗಿದೆ.


ಶಿಕಾರಿಗಾಗಿ ಹೋಗಿ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುವ
ದುರಂತಗಳು ದಿನದಿಂದ ದಿನ ಹೆಚ್ಚುತಲೆ ಇದೆ. ಅದಕ್ಕೆ ಉದಾಹರಣೆ ಎಂಬಂತೆ ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಲು ಗ್ರಾಮದಲ್ಲಿ ನಡೆದ ಘಟನೆ ಮಲೆನಾಡಿನಲ್ಲಿ ಬೆಚ್ಚಿ ಬೀಳಿಸಿದೆ.  ಬಾಳಿ ಬದುಕಬೇಕಾಗಿದ್ದ ಯುವಕ ತಾನು ತೆಗೆದುಕೊಂಡು ಹೋಗಿದ್ದ ಕೋವಿಯಿಂದಲೇ ಸಾವನ್ನಪ್ಪಿದ್ದಾನೆ. 

ಹೌದು.... ಬೇಟೆಗೆಂದು ಹೋಗಿದ್ದ ತೀರ್ಥಹಳ್ಳಿಯ ಬಸವಾನಿ ಸಮೀಪದ ಕೊಳವಾರ ಗ್ರಾಮದ ಗೌತಮ್ (25) ಎಂಬ ಯುವಕ ಮಿಸ್ ಫೈಯರ್ ನಿಂದ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ. ಪ್ರಾಣಿಗಳನ್ನು ಬೇಟೆಯಾಡಲು ತೆಗೆದುಕೊಂಡು ಹೋಗಿದ್ದ ಗನ್ ನಿಂದಲೇ ಇಹಲೋಕ ತ್ಯಜಿಸಿದಾನೆ. ಶಿಕಾರಿಗಾಗಿ ತನ್ನ ಸ್ನೇಹಿತರೊಡನೆ ಹೋಗಿದ್ದ ಗೌತಮ್ ಮೃತಪಟ್ಟಿದ್ದು ಕುಟುಂಬದಲ್ಲಿ ಈಗ ನೀರವ ಮೌನ  ತುಂಬಿದೆ..

ಗೌತಮ್ ತನ್ನ ನಾಲ್ಕು ಜನ ಸ್ನೇಹಿತರ ಜೊತೆಗೆ ಶಿಕಾರಿಕಾಗಿ ಅರಣ್ಯದಲ್ಲಿ ಸುತ್ತಾಡುವ ವೇಳೆ ಒಂದು ಗುಡ್ಡವನ್ನು ಇಳಿಯಬೇಕಾಗಿರುತ್ತದೆ. ಆ ಸಮಯದಲ್ಲಿ ಗೌತಮ್ ಬಳಿ ಇದ್ದಂತಹ ಗನ್ನು ಜಾರಿಗೆ ಬೀಳುತ್ತೆ ಆಗ ಗೌತಮ್ ಕೈಯಲ್ಲಿದ್ದ ಗನ್ ಫೈಯರ್ ಆಗಿ ಗುಂಡು ಗೌತಮ್ ಎದೆ ಹಾಗೂ ಕೆನ್ನೆ ಭಾಗಕ್ಕೆ ಹಾರಿ ಹೋಗುತ್ತದೆ. ಅದಾದ ಬಳಿಕ ಗೌತಮ್ ಗುಡ್ಡದಿಂದ ಜಾರಿ ಬಿದ್ದಿದ್ದಾನೆ.  ಆತನ ಜೊತೆಗಿದ್ದ ಸ್ನೇಹಿತರು ಆಸ್ಪತ್ರೆಗೆ ಕರೆತಂದರು, ಆ ಹೊತ್ತಿಗೆ ಗೌತಮ್ ಪ್ರಾಣಪಕ್ಷಿ ಹಾರಿ ಹೋಗಿರುತ್ತದೆ.  ಶಿಕಾರಿ ಯ ಕ್ರೇಜ್ ಗಾಗಿ ತನ್ನ ಪ್ರಾಣವನ್ನು ಯುವಕ ಕಳೆದುಕೊಂಡಿದ್ದಾನೆ.


ತೀರ್ಥಹಳ್ಳಿ ಭಾಗದಲ್ಲಿ ಇದು ಮೊದಲಲ್ಲ...

ತೀರ್ಥಹಳ್ಳಿಯ ಭಾಗದಲ್ಲಿ ಈ ರೀತಿ ಆ ಘಟನೆಗಳು ಇದೇ ಮೊದಲೇನಲ್ಲ. ಹಲವಾರು ಬಾರಿ ಈ ರೀತಿಯ ಘಟನೆಗಳು ನಡೆದಿದೆ. ಕೆಲವರು ಪ್ರಾಣವನ್ನ ಕಳೆದುಕೊಂಡರೆ ಕೆಲವರು ಶಾಶ್ವತವಾಗಿ ಅಂಗವಿಕಲರಾಗಿರುವ ಘಟನೆಗಳು ಇವೆ.. ಕಳೆದ ಎರಡು ವರ್ಷಗಳ ಹಿಂದೆ ತೀರ್ಥಹಳ್ಳಿ ತಾಲೂಕಿನ ನೊಣಬೂರು ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಕಾಂತರಾಜ್ ಶಿಕಾರಿ ವೇಳೆ ಹಾರಿಸಿದ್ದ ಗುಂಡಿಗೆ ಬಲಿಯಾಗಿದ್ದರು.  ಅರಳಸುರಳಿ ಸಮೀಪದ ಅರಣ್ಯ ಪ್ರದೇಶದಲ್ಲಿ 12 ಜನರ ಗುಂಪು ಕಾಡಿಗೆ ಬೇಟೆಯಾಡುವುದಕ್ಕೆ ಹೋದಾಗ ಮಿಸ್​ ಫೈರ್​ ಆಗಿ ಗುಂಡು ತಗುಲಿ ಕಾಂತರಾಜ್​ ಸಾವನ್ನಪ್ಪಿದ್ದರು.

ಒಟ್ಟಿನಲ್ಲಿ ಮಲೆನಾಡು ಭಾಗದಲ್ಲಿ ನಡೆಯುತ್ತಿರುವ ಶಿಕಾರಿಯ ಈ ಕ್ರೇಜ್ ಗೆ ಸಂಬಂಧ ಪಟ್ಟ ಇಲಾಖೆ ಕಡಿವಾಣ ಹಾಕಬೇಕಾಗಿದೆ. ಇದರಿಂದ ಹಲವರ ಜೀವ ಉಳಿಯುತ್ತದೆ.

Previous Post Next Post