ತೀರ್ಥಹಳ್ಳಿಯಲ್ಲಿ ಮಿಸ್ ಫೈರಿಂಗ್ - ಯುವಕ ಸಾವು !
ತೀರ್ಥಹಳ್ಳಿ : ಬೇಟೆಗೆಂದು ಹೋಗಿದ್ದ ಸಂದರ್ಭದಲ್ಲಿ ಬೇಟೆಗೆ ಹೊಡೆಯಲು ಹೋಗಿ ಮಿಸ್ ಫೈರಿಂಗ್ ಆಗಿ ಯುವಕನೋರ್ವ ಸಾವನ್ನಪ್ಪಿದ್ದ ಘಟನೆ ತೀರ್ಥಹಳ್ಳಿಯ ಕಟ್ಟೆಹಕ್ಕಲಿನಲ್ಲಿ ನಡೆದಿದೆ.
ಗೌತಮ್ (25 ವರ್ಷ) ಮೃತಪಟ್ಟ ಯುವಕ. ತಾಲೂಕಿನ ಬಸವಾನಿ ಸಮೀಪದ ಕೊಳಾವರ ಗ್ರಾಮದ ಯುವಕ ಕತ್ತೆಹಕ್ಕಲಿಗೆ ಸ್ನೇಹಿತರ ಜೊತೆಗೆ ಬೇಟೆಗಾಗಿ ಹೋಗಿದ್ದ. ಈ ವೇಳೆ ಮಿಸ್ ಫೈರಿಂಗ್ ಆಗಿ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
Tags:
ತೀರ್ಥಹಳ್ಳಿ ಸುದ್ದಿ