ಆಗುಂಬೆ ಬಳಿ ವಿದ್ಯುತ್ ಕಂಬದ ತಂತಿ ಬಿದ್ದು ಯಕ್ಷಗಾನ ಕಲಾವಿದ ಸಾವು..! Agumbe

 ಆಗುಂಬೆ ಬಳಿ ವಿದ್ಯುತ್ ಕಂಬದ ತಂತಿ ಬಿದ್ದು ಯಕ್ಷಗಾನ ಕಲಾವಿದ ಸಾವು..!



ತೀರ್ಥಹಳ್ಳಿ : ವಿದ್ಯುತ್ ಕಂಬದ ತಂತಿಯೊಂದು ದ್ವಿಚಕ್ರ ವಾಹನದ ಮೇಲೆ ಬಿದ್ದ ಪರಿಣಾಮ ಬೈಕ್ ನಲ್ಲಿದ್ದ ಯಕ್ಷಗಾನ ಕಲಾವಿದನೊಬ್ಬ ಸಾವನ್ನಪ್ಪಿರುವ ಘಟನೆ ಆಗುಂಬೆ ಸಮೀಪ ನಡೆದಿದೆ.


ತೀರ್ಥಹಳ್ಳಿಯ ಕೊಪ್ಪ ಸಮೀಪದ ಕವಡೆಕಟ್ಟೆ ಬಳಿ ಸೂರಾಲು ಮೇಳದ ಯಕ್ಷಗಾನ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ರದ್ದು ಆಗಿದ್ದರಿಂದ ಯಕ್ಷಗಾನ ಕಲಾವಿದರಾದ ರಂಜಿತ್ ಬನ್ನಾಡಿ ಹಾಗೂ ವಿನೋದ್ ರಾಜ್ ಬೈಕ್ ನಲ್ಲಿ ಹೋಗುತ್ತಿದ್ದರು. ದ್ವಿಚಕ್ರ ವಾಹನದ ಮೇಲೆ ವಿದ್ಯುತ್ ಕಂಬದ ತಂತಿಯೊಂದು ಬಿದ್ದು ರಂಜಿತ್ ಬನ್ನಾಡಿ ಸಾವನ್ನಪ್ಪಿದರೆ ವಿನೋದ್ ರಾಜ್ ಅವರಿಗೆ ಪೆಟ್ಟಾಗಿದೆ.


ವಿನೋದ್ ರಾಜ್ ಅವರನ್ನು ಮಣಿಪಾಲ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.


Previous Post Next Post