ಕುರುವಳ್ಳಿಯಲ್ಲಿ ಹಿಟ್ & ರನ್ - ಮಹಿಳೆಗೆ ಗಾಯ!
ತೀರ್ಥಹಳ್ಳಿ : ಸ್ಕೂಟಿಗೆ ಕಾರೊಂದು ಹಿಂಭಾಗದಿಂದ ಹೊಡೆದು ನಿಲ್ಲಿಸದೆ ಹೋದ ಘಟನೆ ಪಟ್ಟಣದ ಕುರುವಳ್ಳಿ ತಿರುವು ಬಳಿ ನಡೆದಿದೆ.
ಬುಧವಾರ ಸಂಜೆ ಕುರುವಳ್ಳಿಯ ದುರ್ಗಾ ವೈನ್ ಸ್ಟೋರ್ ಬಳಿ ಸ್ಕೂಟಿಯೊಂದಕ್ಕೆ ಕೆಂಪು ಬಣ್ಣದ ಕಾರೊಂದು ಡಿಕ್ಕಿ ಹೊಡೆದು ನಿಲ್ಲಿಸದೆ ಹೋಗಿದೆ. ಸ್ಕೂಟಿಯಲ್ಲಿದ್ದ ಮಹಿಳೆಯ ಕಾಲಿಗೆ ಪೆಟ್ಟಾಗಿದ್ದು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಸಿಸಿ ಕ್ಯಾಮರಾದಲ್ಲಿ ವಿದ್ಯುತ್ ದೀಪದ ಬೆಳಕಿನಿಂದಾಗಿ ಕಾರಿನ ನಂಬರ್ ಕಾಣಿಸುತ್ತಿಲ್ಲ. ಪೊಲೀಸರಿಗೆ ಮಾಹಿತಿ ತಿಳಿಸಲಾಗಿದ್ದು ಹಿಟ್ & ರನ್ ಮಾಡಿದ ವ್ಯಕ್ತಿ ಯಾರೆಂದು ತಿಳಿಯುತ್ತದೆಯೋ ಕಾದು ನೋಡಬೇಕಿದೆ
Tags:
ಅಪಘಾತ ಸುದ್ದಿ
