ತಾಯಂದಿರ ಸಿಂಧೂರ ಉಳಿಸುವ ಚಿಂತನೆಯಲ್ಲಿ ದಾಳಿ - ಬಿ ವೈ ರಾಘವೇಂದ್ರ
ಶಿವಮೊಗ್ಗ : ಪೆಹಲ್ಗಾಮ್ ಮೇಲೆ ದಾಳಿ ನಡೆಸಿದ ಉಗ್ರರ ಮೇಲೆ ಭಾರತ ದೇಶ ಆಪರೇಷನ್ ಸಿಂಧೂರ್ ಎಂಬ ಹೆಸರಿನಲ್ಲಿ ದಾಳಿ ನಡೆಸಿ 9 ಉಗ್ರರ ತಾಣದ ಮೇಲೆ ದಾಳಿ ನಡೆಸಿರುವುದು ಬಹಳ ಸಂತೋಷ ತಂದಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪಾಕ್ ನಲ್ಲಿ ಎಮೆರ್ಜೆನ್ಸಿ ಹೇರಲಾಗಿದೆ. ಭಾರತ ಇಷ್ಟು ಬೇಗ ಪ್ರತಿಕಾರ ಹೇಳುತ್ತೆ ಎಂದು ಅಂದುಕೊಂಡಿರಲಿಲ್ಲ. ಇದೊಂದು ಭಾರತೀಯ ವಾಯುದಳದ ದಿಟ್ಟ ಹೆಜ್ಜೆ ಎಂದು ತಿಳಿಸಿದ್ದಾರೆ.
ಯುದ್ದಕ್ಕೆ ಪ್ರಚೋದನೆಯನ್ನ ಪಾಕ್ ಮಾಡಿತ್ತು. ಆದರೆ ಪಾಕ್ ನ ಪ್ರಜೆಗಳ ಮೇಲೆ ಆಗಲಿ ಅಥವಾ ಸೇನೆಯ ಮೇಲೆ ದಾಳಿ ನಡೆಸಿಲ್ಲ. ಮಸೀದಿ ಅಥವಾ ನಾಗರೀಕರ ಮೇಲೆ ನಡೆದಿಲ್ಲ. ಉಗ್ರರ ತಾಣದ ಮೇಲೆ ದಾಳಿ ನಡೆದಿದೆ. ಇದು ಗಮನಿಸಬೇಕಾದ ವಿಷಯವಾಗಿದೆ. ಕಳೆದ ಎರಡು ಮೂರು ವರ್ಷದಿಂದ ಚರ್ಚೆ ನಡೆದಿತ್ತು ಆದರೆ ಪಿಒಕೆಯನ್ನ ವಶಪಡಿಸಿಕೊಳ್ಳಲು ಇದು ಸದಾವಕಾಶವಾಗಿದೆ. ಎಂದರು.
ಹಿಂದೂಗಳ ತಾಯಂದಿರ ಮೇಲೆ ಸಿಂಧೂರ ಇಡುವ ಹೆಸರಿನಲ್ಲಿ ಆಪರೇಷನ್ ಸಿಂಧೂರ ಎಂದು ಹೆಸರಿಸಲಾಗಿದೆ. ತಾಯಂದಿರ ಸಿಂಧೂರ ಉಳಿಸುವ ಚಿಂತನೆಯನ್ನ ಇಟ್ಟುಕೊಂಡು ದಾಳಿ ನಡೆಸಲಾಗಿದೆ. ರಕ್ಷಣೆ ವಿಚಾರದಲ್ಲಿ ಎಲ್ಲರೂ ಪ್ರಧಾನಿ ಮತ್ತು ದೇಶದ ಜೊತೆ ಇರುವಂತೆ ಮನವಿ ಮಾಡಿದರು.
