ಗಾಜನೂರಿನ ತುಂಗಾ ಡ್ಯಾಮ್‌ನಿಂದ ಯಾವುದೇ ಸಂದರ್ಭ ನೀರು ಹೊರಕ್ಕೆ ಬಿಡುವ ಸಾಧ್ಯತೆ
ಶಿವಮೊಗ್ಗ: ಜಲಾನಯನ ಪ್ರದೇಶದಲ್ಲಿ ಕಳೆದ ಎರಡು ದಿನದಿಂದ ಜೋರು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಒಳ ಹರಿವು ಹೆಚ್ಚಳವಾಗುತ್ತಿರುವುದರಿಂದ ಯಾವುದೇ ಸಂದರ್ಭ ತುಂಗಾ ಜಲಾಶಯದಿಂದ ನೀರು ಹೊರಗೆ ಬಿಡಬಹುದು ಎಂದು ತುಂಗಾ ಮೇಲ್ದಂಡೆ ಯೋಜನೆ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುಂಗಾ ಜಲಾಶಯದ ಕೆಳ ಭಾಗದ ನದಿ ಪಾತ್ರದಲ್ಲಿ ವಾಸಿಸುವವರು, ದನಕರುಗಳನ್ನು ಮೇಯಲು ಬಿಡಬಾರದು, ಯಾವುದೇ ಚಟುವಟಿಕೆ ಮಾಡಬಾರದು, ನದಿ ಪಾತ್ರದಲ್ಲಿ ವಾಸಿಸುವವರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಲಾಗಿದೆ.
Tags:
ಗಾಜನೂರು ಡ್ಯಾಮ್