ಪೌರ ಕಾರ್ಮಿಕರ ವಿಷಯದಲ್ಲಿ ಅಸಂಘಟಿತ ಸಂಘ ಎಂಬ ಲಘು ಭಾವನೆ ಸರ್ಕಾರಕ್ಕೆ ಇದೆ - ಆರಗ ಜ್ಞಾನೇಂದ್ರ Araga jnanendra

ಪೌರ ಕಾರ್ಮಿಕರ ವಿಷಯದಲ್ಲಿ ಅಸಂಘಟಿತ ಸಂಘ ಎಂಬ  ಲಘು ಭಾವನೆ ಸರ್ಕಾರಕ್ಕೆ ಇದೆ - ಆರಗ ಜ್ಞಾನೇಂದ್ರ

ತೀರ್ಥಹಳ್ಳಿ : ಪೌರಕಾರ್ಮಿಕರು ಪ್ರತಿಭಟನೆ ಮಾಡಲು ಕುಳಿತು ಎರಡು ದಿನ ಕಳೆದಿದೆ.  ಬೇರೆ ಯಾರೇ ಪ್ರತಿಭಟನೆ ನಡೆಸಿದರು ಸಹ ಅವರ ಬಳಿ ಹೋಗದಿದ್ದರೂ ಸಹ ನಡೆಯುತ್ತದೆ, ಆದರೆ ಪೌರಕಾರ್ಮಿಕರು ಮುಷ್ಕರ ನಡೆಸಿದರೆ ಸಾರ್ವಜನಿಕರಿಗೂ ಇದರಿಂದಾಗಿ ತೊಂದರೆ ಉಂಟಾಗುತ್ತದೆ ಹಾಗಾಗಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಶನಿವಾರ ಪಟ್ಟಣ ಪಂಚಾಯಿತಿ ಆವರಣದಲ್ಲಿ ಪೌರಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಅವರೊಂದಿಗೆ ಚರ್ಚಿಸಿ ಮಾತನಾಡಿದರು 

ಪೌರಕಾರ್ಮಿಕರು ಒಂದು ದಿನ ಬೆಳಗ್ಗೆ ಕಸ ಗುಡಿಸದೆ, ನೀರು ಹಾಕದೆ ಇದ್ದರೆ ಸಾರ್ವಜನಿಕರಿಗೆ ಅದರಿಂದಾಗಿ ತೊಂದರೆ ಉಂಟಾಗುತ್ತದೆ. ಹಾಗಾಗಿ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ನಮ್ಮ ನಾಗರಿಕರ ಕರ್ತವ್ಯವಾಗಿದೆ.
ಈ ಸರ್ಕಾರ ಬಂದು ಎರಡು ವರ್ಷವಾಯಿತು, ಸುಮ್ಮನೆ ಆಶ್ವಾಸನೆ ಕೊಡುವುದನ್ನು ಬಿಟ್ಟರೆ ಬೇರೆ ಏನು ಮಾಡುವುದಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ತುಂಬಾ ಜನ ಪೌರಕಾರ್ಮಿಕರಿಗೆ ಶಾಶ್ವತ ಕೆಲಸ ಮಾಡಿಕೊಟ್ಟಿದ್ದೆವು. ಅವರಿಗೆ ಸಂಬಳ ಕೂಡ ನಾವು ಹೆಚ್ಚಳ ಮಾಡಿಕೊಟ್ಟಿದ್ದೆವು. ಎಂದರು.

ಇಂದು ಸಂಜೆಯೇ ಸಿದ್ದರಾಮಯ್ಯನವರ ಸರ್ಕಾರ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದರೆ ಇದರಿಂದಾಗುವ ದುಷ್ಪರಿಣಾಮ ಎದುರಿಸಬೇಕಾಗುತ್ತದೆ.  ಕೋವಿಡ್, ಡೆಂಗ್ಯೂ ನಂತಹ ಮಾರಕ ಕಾಯಿಲೆಗಳು ಹೆಚ್ಚಾಗುತ್ತಿದ್ದು ಮಳೆಗಾಲ ಬೇರೆ ಶುರುವಾಗಿದೆ ಇಂತಹ ಸಮಯದಲ್ಲಿ ಪೌರಕಾರ್ಮಿಕರು ಕೆಲಸ ಮಾಡದೇ ಹೋದರೆ ನಾಗರೀಕರ ಆರೋಗ್ಯದ ಮೇಲೆ ತೊಂದರೆ ಉಂಟಾಗುತ್ತದೆ ಎಂದರು 

 ಪೌರಕಾರ್ಮಿಕರಿಗೆ ಯಾವುದೇ ನಾಯಕತ್ವವಿಲ್ಲ, ಬಡವರೇ ಇಲ್ಲಿ ಕೆಲಸ ಮಾಡುವುದು, ಅವರಿಗೆ ಯಾವುದೇ ವಿಚಾರದಲ್ಲಿ ತಕಾರರು ಮಾಡಲು ಬರುವುದಿಲ್ಲ, ಇದೊಂದು ಅಸಂಘಟಿತ ಸಂಘವಾದ್ದರಿಂದ ಇವರ ಮೇಲೆ ಸರ್ಕಾರಕ್ಕೆ ಲಘು ಭಾವನೆ ಬಂದಿದೆ.  ಕೂಡಲೇ ಪೌರಕಾರ್ಮಿಕರ ಪ್ರತಿಯೊಂದು ಬೇಡಿಕೆಗಳನ್ನ ಸರ್ಕಾರ ಇಂದೇ ಬಗೆಹರಿಸಬೇಕೆಂದು ಅಗ್ರಹಿಸಿದರು





Previous Post Next Post