ರೈಲು ಬಿಡುವುದರಲ್ಲಿ ಆರಗ ಜ್ಞಾನೇಂದ್ರ ಪರಿಣಿತರು - ಕಿಮ್ಮನೆ ರತ್ನಾಕರ್ Kimmane Ratnakar

ರೈಲು ಬಿಡುವುದರಲ್ಲಿ ಆರಗ ಜ್ಞಾನೇಂದ್ರ ಪರಿಣಿತರು - ಕಿಮ್ಮನೆ ರತ್ನಾಕರ್ 
ತೀರ್ಥಹಳ್ಳಿ : ಬಿಜೆಪಿ ಅವಧಿಯಲ್ಲಿ ಬಸವರಾಜ್ ಬೊಮ್ಮಾಯಿ ಹಾಗೂ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರಾಜ್ಯದ 25 ಕೋಟಿ ರೈತರಿಗೆ 25000 ಹಣ ನೀಡುವುದಾಗಿ ಹೇಳಿದ್ದರು, ಕೊಟ್ಟಿದ್ದು 800 ಕೋಟಿ, ನಮ್ಮ ಸರ್ಕಾರ ಬಂದ ನಂತರ 4,400 ಕೋಟಿ ಹಣ ತೀರಿಸಿದ್ದೇವೆ. ಸರ್ಕಾದ ವಿರುದ್ಧ ಮಾತನಾಡುವುದು ಸರಿಯಲ್ಲ,  ರೈಲು ಬಿಡುವುದರಲ್ಲಿ ಆರಗ ಜ್ಞಾನೇಂದ್ರ ಪರಿಣಿತರು ಎಂದು ಕಿಮ್ಮನೆ ರತ್ನಾಕರ್ ಹೇಳಿದರು.

ಶನಿವಾರ ಪಟ್ಟಣ ಪಂಚಾಯತ್ ಆವರಣದಲ್ಲಿ ಪೌರಕಾರ್ಮಿಕರು ನಡೆಸುತ್ತಿದ್ದ ಪ್ರತಿಭಟನಯಲ್ಲಿ ಭಾಗಿಯಾಗಿ ನಂತರ ಮಾಧ್ಯಮ ಗಳ ಜೊತೆಗೆ ಮಾತನಾಡಿದರು.

ಎಚ್ ಆಂಜನೇಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಸರ್ಕಾರ ತಮ್ಮ ಬಳಿಯ ಆರ್ಥಿಕ ಪರಿಸ್ಥಿತಿ ನೋಡಿಕೊಂಡು  ಬಗೆಹರಿಸುತ್ತಾರೆ. ಬಡವರ ಪರವಾಗಿ ಕಾನೂನು ಏನಾದರು ಆಗಿದ್ದರೆ ಅದು ಆರಗ ಜ್ಞಾನೇಂದ್ರ ಅವರ ಪಾರ್ಟಿಯಿಂದ ಆಗಿಲ್ಲ. ಇಡೀ ದೇಶದಲ್ಲಿ ಬಡವರಿಗೆ ಯಾವುದೇ ಸವಲತ್ತು ಸಿಕ್ಕಿಲ್ಲ. ಇವತ್ತು ಅಕ್ಕಿ ಕೊಡುತ್ತಿರುವುದಕ್ಕೂ ಕಾಂಗ್ರೆಸ್ ಸರ್ಕಾರದ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಮಾಡಿದ್ದು ಎಂದರು.

ಈಗ ರಾಜ್ಯದಲ್ಲಿ ಮಾಡಿರುವ ಗ್ಯಾರೆಂಟಿ ಯೋಜನೆ 99% ಬಡವರಿಗೆ ತಲುಪುತ್ತಿದೆ. ನಾವು ಕೇಂದ್ರ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುತ್ತಿದ್ದೇವೆ. ಆದರೆ ಅವರು ನಮಗೆ ವಾಪಾಸ್ ಕೊಟ್ಟರು ಅದು ಕಡಿಮೆ. ಇಂತಹ ವಿಷಯದಲ್ಲಿ ಕೇಂದ್ರ ಸರ್ಕಾರ ಕೂಡ ಹಣ ಬಿಡುಗಡೆ ಮಾಡಬೇಕು. ರಾಜ್ಯಸರ್ಕಾರಕ್ಕೆ ಮಾತ್ರ ಸೇರಿದ್ದಲ್ಲ.  ಪೆಟ್ರೋಲ್ ದರದಲ್ಲೂ ಕೇಂದ್ರ ಸರ್ಕಾರ ಹಣ ಮಾಡುತ್ತಿದೆ. ಇಂತಹ ವಿಷಯ ಆರಗ ಜ್ಞಾನೇಂದ್ರ ಅವರಿಗೆ ಗೊತ್ತಿಲ್ಲವೇ?  ಜ್ಞಾನೇಂದ್ರ ಅವರಿಗೆ ಅಧ್ಯಯನ ದ ಕೊರತೆಯಿದೆ. ಅವರಿಗೆ ಓದಲು ಹೇಳಿ ಎಂದರು.

ಪೌರಕಾರ್ಮಿಕರ ಬೇಡಿಕೆಯ ಮನವಿಯಲ್ಲಿ ನ್ಯಾಯ ಇದೆ. ಇದನ್ನು ಅನುಷ್ಠಾನ ಮಾಡುವುದು ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ. ರಾಜ್ಯದ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಅದನ್ನು ಪರಿಗಣಿಸಿ ನ್ಯಾಯ ಕೊಡಿಸುತ್ತಾರೆ 
ಸರ್ಕಾರ ಪೌರಕಾರ್ಮಿಕರಿಗೆ ನ್ಯಾಯ ದೊರಕಿಸಿ ಕೊಡುತ್ತದೆ ಎಂದರು.





Previous Post Next Post