ತನ್ನ ಭಾಷೆಯ ಬಗ್ಗೆ ಪ್ರೇಮ ವ್ಯಕ್ತಪಡಿಸುವುದು ತಪ್ಪಲ್ಲ - ಆದರೆ ಇನ್ನೊಂದು ಭಾಷೆಯನ್ನು ಹೀಗಳಿಯುವ ಅಧಿಕಾರ ಯಾರಿಗೂ ಇಲ್ಲ - ಆರಗ ಜ್ಞಾನೇಂದ್ರ Araga jnanendra

ತನ್ನ ಭಾಷೆಯ ಬಗ್ಗೆ ಪ್ರೇಮ ವ್ಯಕ್ತಪಡಿಸುವುದು ತಪ್ಪಲ್ಲ - ಆದರೆ ಇನ್ನೊಂದು ಭಾಷೆಯನ್ನು ಹೀಗಳಿಯುವ ಅಧಿಕಾರ ಯಾರಿಗೂ ಇಲ್ಲ - ಆರಗ ಜ್ಞಾನೇಂದ್ರ

ತೀರ್ಥಹಳ್ಳಿ: ಕಮಲ್ ಹಾಸನ್ ನಟ ಎನ್ನುವುದಕ್ಕಿಂತ ಒಬ್ಬ ರಾಜಕಾರಣಿ, ಆ ಮನುಷ್ಯನಿಗೆ ತಮಿಳು ಜನರ ಮತ ಬೇಕಾಗಿದೆ. ಅದಕ್ಕಾಗಿ ಆತ ಕನ್ನಡ ವಿರೋಧಿ ಹೇಳಿಕೆಯನ್ನು ನೀಡಿದ್ದಾನೆ. ತನಗೆ ಮತ ಬೇಕೆಂದು ಮತ್ತೊಂದು ಭಾಷೆಯ ಬಗ್ಗೆ ಹಗುರವಾಗಿ ಮಾತಾಡುವುದು ಸರಿಯಲ್ಲ ಎಂದು       ಆರಗ ಜ್ಞಾನೇಂದ್ರ ಹೇಳಿದರು. 

 ಶನಿವಾರ  ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ತನ್ನ ಭಾಷೆಯ ಬಗ್ಗೆ ಪ್ರೇಮ ವ್ಯಕ್ತಪಡಿಸುವುದು ತಪ್ಪಲ್ಲ ಅದಕ್ಕೆ ಎಲ್ಲಾ ರೀತಿಯ ಅಧಿಕಾರ ಆತನಿಗೆ ಇದೆ. ಆದರೆ ಹೀಗಳಿಯುವ ಅಧಿಕಾರ ಆತನಿಗಿಲ್ಲ ಈ ಕೂಡಲೇ ಆತ ಕನ್ನಡದವರಿಗೆ ಕ್ಷಮೆ ಕೇಳಬೇಕು  ನಟ ಎಂಬ ಕಾರಣದಿಂದ ನಾವೆಲ್ಲರೂ ಗೌರವ ನೀಡುತ್ತಿದ್ದೆವು  ಹುಚ್ಚು ಹುಚ್ಚುತನದಿಂದ ಮಾತನಾಡಿದರೆ ನಟ ಎಂದು ಪರಿಗಣಿಸಲು ಅವಶ್ಯಕತೆ ಇಲ್ಲ ಎಂದರು.



Previous Post Next Post