ತಿರುಮಲ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ 16ನೇ ವರ್ಧಂತಿ ಮಹೋತ್ಸವ
ತೀರ್ಥಹಳ್ಳಿ : ರಥಬೀದಿಯಲ್ಲಿರುವ ಸಪರಿವಾರ ತಿರುಮಲ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಷೋಡಶ (16ನೇ) ಪ್ರತಿಷ್ಠಾ ವರ್ಧಂತಿ ಮಹೋತ್ಸವ ನಾಳೆ ಮೇ 31 ನೇ ತಾರೀಖಿನ ಶನಿವಾರ ಜರುಗಲಿರುವುದು.
ಈ ಪ್ರಯುಕ್ತ ಶ್ರೀ ದೇವರಿಗೆ ಶತ ಕಲಶಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿರುವುದು. ಮಧ್ಯಾಹ್ನ 12:30ಕ್ಕೆ ಶ್ರೀದೇವರ ಮಹಾಪೂಜೆಯ ನಂತರ ಎಲ್ಲ ಸದ್ಭಕ್ತ ಬಾಂಧವರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ ಶ್ರೀ ದೇವರ ಪ್ರಾಕಾರೋತ್ಸವ ಮತ್ತು ವಸಂತೋತ್ಸವ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಎಲ್ಲ ದೇವತಾ ಮಹತ್ಕಾರ್ಯದಲ್ಲಿ ಪಾಲ್ಗೊಂಡು ಸಾಕ್ಷಾತ್ ಭೂ ವೈಕುಂಠ ತಿರುಪತಿಯಿಂದ ಆಗಮಿಸಿ ತೀರ್ಥಹಳ್ಳಿಯಲ್ಲಿ ಪ್ರತಿಷ್ಠಾಪಿತನಾಗಿರುವ ಸಪರಿವಾರ ತಿರುಮಲ ಶ್ರೀ ಲಕ್ಷ್ಮೀ ವೆಂಕಟರಮಣ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ವಿನಂತಿಸಿದೆ
Tags:
ತೀರ್ಥಹಳ್ಳಿ ಸುದ್ದಿ