ಉಗ್ರರ ಗುಂಡಿನ ದಾಳಿಯಲ್ಲಿ ಹತರಾದ ಮಂಜುನಾಥ್ ಮನೆಗೆ ಅಸ್ಸಾಂ ರಾಜ್ಯದ ಸಚಿವರ ಭೇಟಿ - 5 ಲಕ್ಷ ರೂ. ಪರಿಹಾರ ನೀಡಿದ ಅಸ್ಸಾಂ ಸರ್ಕಾರ
ಶಿವಮೊಗ್ಗ : ಪೆಹಲ್ಗಾಮ್ ನಲ್ಲಿ ಉಗ್ರರ ಗುಂಡಿನ ದಾಳಿಯಲ್ಲಿ ಹತರಾದ ಶಿವಮೊಗ್ಗದ ಮಂಜುನಾಥ್ ಅವರ ಮನೆಗೆ ಅಸ್ಸಾಂ ರಾಜ್ಯದ ಬಿಜೆಪಿ ಸರ್ಕಾರದ ಕೈಗಾರಿಕ ಸಚಿವವರಾದ ಬಿಮಲ್ ಬೋರಾ ಇಂದು ಭೇಟಿ ನೀಡಿ ಸಾಂತ್ವಾನ ಹೇಳಿದರು. ಹಾಗೆಯೇ ಈ ವೇಳೆ ಮಂಜುನಾಥ್ ಪತ್ನಿ ಆರ್ ಪಲ್ಲವಿಗೆ ಅಸ್ಸಾಂ ಸರ್ಕಾರದ ವತಿಯಿಂದ 5 ಲಕ್ಷ ರೂ. ಪರಿಹಾರ ನೀಡಿದರು.
ಈ ವೇಳೆ ಕಷ್ಟದ ಕಾಲದಲ್ಲಿ ನನಗೆ ಎಲ್ಲರೂ ಸಹಾಯ ಮಾಡಿದರು. ದುಖದಲ್ಲಿ ನೀವೆಲ್ಲರೂ ಬಂದು ಸಾಂತ್ವಾನ ಹೇಳುತ್ತಿರುವುದು ನಮಗೆ ಮನಸ್ಸು ತುಂಬಿ ಬರುತ್ತಿದೆ ಎಂದು ಪಲ್ಲವಿ ಭಾವುಕರಾದರು. ಮಗ ಅಭಿಜೈ ವಿದ್ಯಾಭ್ಯಾಸದ ಬಗ್ಗೆ ಸಚಿವರು ಕೇಳಿ ಖುಷಿಪಟ್ಟರು. ಆರಂಭದಲ್ಲಿ ಮಂಜುನಾಥ್ ಅವರ ಭಾವ ಚಿತ್ರಕ್ಕೆ ಹೂವಿನ ಹಾರ ಹಾಕಿ ನಮನ ಸಲ್ಲಿಸಿದರು.
ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಬಿಮಲ್ ಬೋರಾ ಅಸ್ಸಾಂ ಸರ್ಕಾರ ನೊಂದವರ ಜೊತೆಯಿದೆ. ಮುಖ್ಯಮಂತ್ರಿ ಹಿಮಂತ್ ಕುಮಾರ್ ಬಿಶ್ವಾಸ್ ಅವರ ಆದೇಶದ ಮೇರೆಗೆ ಪೆಹಲ್ಗಾಮ್ ನಲ್ಲಿ ಹತ್ಯೆಯಾದ 26 ಜನರ ಕುಟುಂಬಕ್ಕೆ ಪರಿಹಾರ ನೀಡಲು ತೀರ್ಮಾನಿಸಿದ್ದು ಪರಿಹಾರ ಕೊಡಲಾಗುತ್ತಿದೆ. ಕುಟುಂಬದ ದುಖದಲ್ಲಿ ಅಸ್ಸಾಂ ಸರ್ಕಾರ ಭಾಗಿಯಾಗಿದೆ. ಮೃತರ ಕುಟುಂಬಕ್ಕೆ ದೇವರು ದುಖಭರಿಸುವ ಶಕ್ತಿ ನೀಡಲಿ ಎಂದರು.
Tags:
ಶಿವಮೊಗ್ಗ ಸುದ್ದಿ