ಪವರ್ ಹೌಸ್ ಮೂಲಕ ತುಂಗಾ ನದಿಗೆ ನೀರು ಬಿಡುಗಡೆ..! power house Gajnuru Dam

ಪವರ್ ಹೌಸ್ ಮೂಲಕ ತುಂಗಾ ನದಿಗೆ ನೀರು ಬಿಡುಗಡೆ..!
ಶಿವಮೊಗ್ಗ : ತುಂಗಾ ಜಲಾನಯನ ಪ್ರದೇಶದಲ್ಲಿ ರಾತ್ರಿಯಿಡಿ ಸುರಿದ ಮಳೆಗೆ ತುಂಗಾ ನದಿಗೆ ಕಟ್ಟಲಾಗಿರುವ ಗಾಜನೂರು ಜಲಾಶಯ ಭರ್ತಿಯಾಗಿದೆ. ಈಗಾಗಲೇ ಯಾವುದೇ ಕ್ಷಣದಲ್ಲಾದರೂ ಜಲಾಶಯದ ನೀರು ನದಿಗೆ ಹರಿಸುವುದಾಗಿ ಪ್ರಕಟಣೆ ತಿಳಿಸಿದ್ದ ನೀರಾವರಿ ಇಲಾಖೆ, ಈಗ ಪವರ್ ಹೌಸ್ ಮೂಲಕ ನದಿಗೆ ನೀರು ಹರಿಸಲು ನಿರ್ಧರಿಸಿದೆ.

588.24 ಸಾಮರ್ಥ್ಯದ ಜಲಾಶಯ ಮುಂಗಾರು ಪೂರ್ವದಲ್ಲಿಯೇ ಭರ್ತಿಯಾಗಿದೆ. 3.71 ಟಿಎಂಸಿ ನೀರಿನ ಸಾಮರ್ಥ್ಯದ ಜಲಾಶಯಕ್ಕೆ 2000 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಮಧ್ಯಾಹ್ನದ ವೇಳೆಗೆ 800 ಕ್ಯೂಸೆಕ್ ನೀರನ್ನ ಪವರ್ ಹೌಸ್ ನಿಂದ ಹರಿಬಿಡಲಾಗುತ್ತದೆ ಎಂದು ತಿಳಿಸಿದ್ದಾರೆ.‌ 800 ರಿಂದ 5000 ಕ್ಯೂಸೆಕ್ ವರೆಗೂ ಪವರ್ ಹೌಸ್ ಮೂಲಕವೇ ನದಿಗೆ ನೀರು ಹರಿಸಲಾಗುತ್ತದೆ.

ಒಂದು ವೇಳೆ ಒಳ ಹರಿವು ಹೆಚ್ಚಾದಲ್ಲಿ ಜಲಾಶಯದ ಮುಖ್ಯ ಗೇಟ್ ಗಳನ್ನ ತೆರೆದು ಜಲಾಶಯದಿಂದ ನದಿಗೆ ನೀರು ಹರಿಸಲಾಗುವುದು ಎಂದು ಹೇಳಿದ್ದಾರೆ. ತುಂಗಾ ಜಲಾಶಯ ರಾಜ್ಯದಲ್ಲಿಯೇ ಅತಿ ಸಣ್ಣ ಜಲಾಶಯವಾಗಿದ್ದು ಮುಂಗಾರು ಪೂರ್ವ ಮಳೆಗೆ ಭರ್ತಿಯಾಗಿದೆ.

Previous Post Next Post