ಬೀದಿನಾಯಿಗಳು ಹಾಗೂ ಮಂಗಗಳ ಕಾಟಕ್ಕೆ ಮುಕ್ತಿ ನೀಡಲು ಮುಂದಾದ ಪಟ್ಟಣ ಪಂಚಾಯತ್
ತೀರ್ಥಹಳ್ಳಿ : ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ, ಮಂಗಗಳ ಹಾಗೂ ಗೂಳಿಗಳ ಕಾಟ ಹೆಚ್ಚಾಗಿದೆ ಎಂಬ ದೂರಿನ ಹಿನ್ನಲೆಯಲ್ಲಿ ಮಾಸಿಕ ಸಭೆಯಲ್ಲಿ ಈ ವಿಚಾರದ ಬಗ್ಗೆ ನಿರ್ಣಯವೊಂದನ್ನು ಮಾಡಿದ್ದು ಈ ತಿಂಗಳ 16 ರಂದು ಬೀದಿನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಡೆಯಲಿದೆ ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತ್ ಉಲ್ಲಾ ಅಸಾದಿ ತಿಳಿಸಿದ್ದಾರೆ.
ಮಾರ್ಚ್ 13 ರಿಂದ ಮಾರ್ಚ್ 20 ರವರೆಗೆ ಒಂದು ವಾರಗಳ ಕಾಲ ಯಾವೆಲ್ಲಾ ವಾರ್ಡ್ ಗಳಲ್ಲಿ ಮಂಗಗಳ ಕಾಟ ಹೆಚ್ಚಾಗಿದೆಯೋ ಅಲ್ಲಿಗೆ ಹೋಗಿ ಮಂಗಗನ್ನು ಹಿಡಿಯುವ ಕೆಲಸ ಆಗುತ್ತದೆ. ನಿಮ್ಮ ವಾರ್ಡ್ ಗಳಲ್ಲಿ ಯಾವ ಭಾಗದಲ್ಲಿ ಮಂಗಗಳ ಕಾಟ ಹೆಚ್ಚಾಗಿದೆ ಎಂದು ಪಟ್ಟಣ ಪಂಚಾಯತ್ ಗೆ ತಿಳಿಸಲು ಕೋರಲಾಗಿದೆ. ಇನ್ನು ಬೀದಿ ನಾಯಿಗಳನ್ನು 14 ಹಾಗೂ 15 ರಂದು ಹಿಡಿದು ಆ ನಂತರ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಸಂಬಂಧಪಟ್ಟಂತೆ ಪಟ್ಟಣದಲ್ಲಿ ವೈದ್ಯರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಇಲ್ಲಿ ಸಾಕು ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
%20(4)%20(10)%20(3).jpg)