ಶಿವಮೊಗ್ಗದಲ್ಲಿ ಲವ್ಜಿಹಾದ್ ಪುಸ್ತಕ ಬಿಡುಗಡೆ - ಹಿಂದೂ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣದ ಬಗ್ಗೆ ಪ್ರಮೋದ್ ಮುತಾಲಿಕ್ ಹೇಳಿದ್ದೇನು ?
ಶಿವಮೊಗ್ಗ : ಇಸ್ಲಾಂ ತನ್ನ ಜನಸಂಖ್ಯೆ ಹೆಚ್ಚಿಸಿಕೊಳ್ಳಲು, ಹಿಂದೂಗಳ ನೈತಿಕತೆ ಕುಸಿಯಲು ಮಾತೃದೇವೋಭವ ವಾಕ್ಯವನ್ನು ವಿಕೃತಿಗೊಳಿಸಲು ವೇಶ್ಯಾವಾಟಿಕೆಗಾಗಿ, ಭಯೋತ್ಪಾದನೆಗಾಗಿ, ಮಾದಕ ವಸ್ತು ಸಾಗಾಣಿಕೆಗಾಗಿ, ಹನಿಟ್ರ್ಯಾಪ್ ಗಾಗಿ ಸುಳ್ಳು ಪ್ರೀತಿ, ಮೋಸ, ಷಡ್ಯಂತ್ರ ಮಾಡಿ ತಮ್ಮ ಹೆಸರನ್ನು ಬದಲಾಯಿಸಿಕೊಂಡು ಹಿಂದೂ ಹೆಣ್ಣುಮಕ್ಕಳಿಗೆ ಮೋಸ ಮಾಡುತ್ತಿದ್ದಾರೆ. ಈ ಮೂಲಕ ಲವ್ ಜಿಹಾದ್ ಮಾಡುತ್ತಿದ್ದಾರೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಬುಧವಾರ ಪತ್ರಿಕಾ ಭವನದಲ್ಲಿ ’ಲವ್ ಜಿಹಾದ್’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಹಿಂದೂ ಹೆಸರಿನಲ್ಲಿ ಶೇ. 62ರಷ್ಟು ಲವ್ ಜಿಹಾದ್ ಗಳು ಆಗಿದ್ದು, ಬುರ್ಖಾ ಹಾಕದೇ ಇರುವುದಕ್ಕೆ, ನಮಾಜ್ ಮಾಡದೇ ಇರುವುದಕ್ಕೆ, ಗೋಮಾಂಸ ತಿನ್ನದೇ ಇರುವುದಕ್ಕೆ ಶೇ. 81ರಷ್ಟು ಕೊಲೆಗಳಾಗಿವೆ. 2022-23ರಲ್ಲಿ 153 ಬರ್ಬರ ಕೊಲೆಗಳಾಗಿದ್ದು, 436 ಲವ್ ಜಿಹಾದ್ ಕೇಸ್ ಗಳಾಗಿವೆ ಎಂದರು.
ಫೆ. 28ರಂದು ’ಲವ್ ಜಿಹಾದ್’ ಪುಸ್ತಕ ಬಿಡುಗಡೆಗೆ ಬಂದ ನನ್ನನ್ನು ರಾತ್ರಿ ಹೊತ್ತೇ ಪೊಲೀಸರು ತಡೆದು ನಿಲ್ಲಿಸಿ ಬಳಿಕ ಗಡಿಪಾರು ಆದೇಶವನ್ನು ತಂದು ತೋರಿಸುತ್ತಾರೆ. ಈಗಾಗಲೇ ಈ ಪುಸ್ತಕ 5 ಜಿಲ್ಲೆಯಲ್ಲಿ ಬಿಡುಗಡೆಗೊಂಡಿದೆ. ಒಂದು ಲಕ್ಷ ಪ್ರತಿ ಮುದ್ರಣ ಕಂಡಿದೆ. ನನ್ನ ಮೇಲೆ ಜೈಲು ವಾಸ ಅನುಭವಿಸುವ ಯಾವುದೇ ಕೇಸ್ ಗಳು ಉಳಿದಿಲ್ಲ. ನಾನು ಅಪರಾಧಿಯಲ್ಲ, ಭಯೋತ್ಪಾದಕನಲ್ಲ, ಆದರೂ, ನನ್ನನ್ನು ಪೊಲೀಸರು ನಗರ ಪ್ರವೇಶಿಸದಂತೆ ತಡೆ ಹಿಡಿದು ಅನಾಗರಿಕವಾಗಿ ವರ್ತಿಸಿದ್ದಾರೆ. ಅಂಬೇಡ್ಕರ್ ರವರ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ ಎಂದರು.
ಹೈಕೋರ್ಟ್ ಪೊಲೀಸರ ಕ್ರಮವನ್ನು ಖಂಡಿಸಿ ಪುಸ್ತಕ ಬಿಡುಗಡೆಗೆ ಅವಕಾಶ ನೀಡಿದೆ. ಹಾಗಾಗಿ ಇಂದು ಶಿವಮೊಗ್ಗದಲ್ಲಿ ಪುಸ್ತಕ ಬಿಡುಗಡೆ ಗೊಳಿಸಿದ್ದೇನೆ ಎಂದರು. ರಾಜ್ಯದ 100 ಕಡೆಗಳಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗಾಗಿ ತ್ರಿಶೂಲ ದೀಕ್ಷಾ ಸಮಾರಂಭ ಏರ್ಪಡಿಸಿ ಅವರಿಗೆ ಅರಿವು ಮತ್ತು ಧೈರ್ಯ ತುಂಬಿಸುವ ಕಾರ್ಯ ಮಾಡುತ್ತಿದ್ದೇವೆ. ಈಗಾಗಲೇ 8 ಕಡೆ ಕಾರ್ಯಕ್ರಮ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಅನ್ಯ ಧರ್ಮೀಯರನ್ನು ಮದುವೆಯಾಗಿ ಎಂಬ ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ನನ್ನ ಬೆಂಬಲವಿದೆ. ಅವರು ಲವ್ ಜಿಹಾದ್ ಮಾಡಿ ಸೂಟ್ ಕೇಸ್ ನಲ್ಲಿ ಹೆಣ ತುಂಬಿ ಕಳಿಸುತ್ತಾರೆ. ಆದರೆ, ಹಿಂದೂ ಧರ್ಮೀಯರು ಮದುವೆಯಾಗಿ ಅವರನ್ನು ಸಗೃಹಿಣಿಯಾಗಿ ನೋಡಿಕೊಳ್ಳುತ್ತಾರೆ.
2019ರಿಂದ 21ರಲ್ಲಿ ದೇಶದಲ್ಲಿ ಮಹಿಳೆಯರ ಕೊಲೆ, ಅತ್ಯಾಚಾರ, ದೌರ್ಜನ್ಯ ಸೇರಿದಂತೆ ಒಟ್ಟು 13 ಲಕ್ಷದ 13 ಸಾವಿರ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 2,51,430 ಅಪ್ರಾಪ್ತರಿದ್ದಾರೆ ಎಂದು ಪಾರ್ಲಿಮೆಂಟ್ ನಲ್ಲಿ ಮಾಹಿತಿ ನೀಡಲಾಗಿದೆ. ಪೊಲೀಸ್ ಸ್ಟೇಷನ್ ಗಳನ್ನ ಧ್ವಂಸ ಮಾಡಿ, ಪೊಲೀಸರ ಮೇಲೆ ಹಲ್ಲೆ ಮಾಡಿದವರನ್ನು ಈ ಸರ್ಕಾರ ಕೈಬಿಟ್ಟಿದೆ. ಆದರೆ, ದೇಶಕ್ಕಾಗಿ ಹಿಂದೂ ಹೆಣ್ಣುಮಕ್ಕಳ ಮಾನ, ಪ್ರಾಣ ರಕ್ಷಣೆಗಾಗಿ ಹೋರಾಡುತ್ತಿರುವವರ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರ ದೇಶದ್ರೋಹಿ ರೀತಿ ನಡೆಸಿಕೊಳ್ಳುತ್ತಿದೆ ಎಂದರು.
ಸೌಜನ್ಯ ಪ್ರಕರಣ ಕುರಿತಂತೆ ಈಗಾಗಲೇ ಸ್ಪಷ್ಟೀಕರಣ ನೀಡಿದ್ದೇನೆ. ಸೌಜನ್ಯ ತಾಯಿ ಇರುವ ವೇದಿಕೆಯಲ್ಲೇ ನಿಂತು ಸೌಜನ್ಯ ಕೊಲೆಗಾರರು ಯಾರೇ ಆಗಿರಲಿ, ಅವರನ್ನು ದಂಡಿಸಬೇಕು ಎಂಬುದು ನನ್ನ ಇಚ್ಚೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ರಾಜ್ಯ ದಕ್ಷಿಣ ಪ್ರಾಂತ ಲವ್ ಜಿಹಾದ್ ಪ್ರಮುಖ್ ಸುಂದರೇಶ್ ನರೇಗಲ್, ಕೆ.ಇ. ಕಾಂತೇಶ್, ವಕೀಲರಾದ ಹಾಲಪ್ಪಗೌಡ, ವಾದಿರಾಜ್, ಪವಿತ್ರಾ, ಶೋಭಾ, ಗೀತಾ, ಅಂಬಿಕಾ, ಉಷಾ ಮತ್ತಿತರರು ಇದ್ದರು.
Tags:
ಶಿವಮೊಗ್ಗ ಸುದ್ದಿ
