ಲಾರಿ - ಬೈಕ್ ಡಿಕ್ಕಿ - ಬೈಕ್ ಸವಾರ ಸ್ಥಳದಲ್ಲೇ ಸಾವು!
ತೀರ್ಥಹಳ್ಳಿ : ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಣೇಶ್ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ನಾಲೂರು ಮುಖ್ಯ ರಸ್ತೆಯಲ್ಲಿ ನಡೆದಿದೆ.
ಗಣೇಶ್ ನಾಯ್ಕ್ (24) ಮೃತಪಟ್ಟ ದುರ್ದೈವಿ. ಗಣೇಶ್ ಹಗರಿಬೊಮ್ಮನಹಳ್ಳಿಯಾತ ಎಂದು ತಿಳಿದುಬಂದಿದೆ.ಲಾರಿ ಡಿಕ್ಕಿ ಹೊಡೆದು ನಿಲ್ಲಿಸದೆ ಹೋಗಿರುವುದಾಗಿ ತಿಳಿದು ಬಂದಿದೆ.
ಹಿಟ್ ಅಂಡ್ ರನ್ ಪ್ರಕರಣದಲ್ಲಿ ಅನುಮಾನಾಸ್ಪದ ಲಾರಿಯ ಚಹರೆ ಕಂಡು ಹಿಡಿಯುವಲ್ಲಿ ಸಿಸಿಟಿವಿ ಪರಿಶೀಲನೆ ನಡೆಸಲಾಗುತ್ತಿದ್ದು ಆಗುಂಬೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.
Tags:
ಅಪಘಾತ ಸುದ್ದಿ
