ಬಿಗ್ ಬಾಸ್ ಕೊನೆಯ ಪಂಚಾಯಿತಿ; ಕಿಚ್ಚ ಸುದೀಪ್ ಭಾವುಕ ಪೋಸ್ಟ್! Bigg Boss

 ಬಿಗ್ ಬಾಸ್ ಕೊನೆಯ ಪಂಚಾಯಿತಿ; ಕಿಚ್ಚ ಸುದೀಪ್ ಭಾವುಕ ಪೋಸ್ಟ್!


ಬಾದ್ ಶಾ ಕಿಚ್ಚ ಸುದೀಪ್  ಇನ್ಮುಂದೆ ಬಿಗ್ ಬಾಸ್ ಹೋಸ್ಟ್ ಮಾಡೋದಿಲ್ವೇ? ಸೀಸನ್‌-11ಕ್ಕೇನೆ ಸುದೀಪ್ ಜರ್ನಿ ಎಂಡ್ ಆಗುತ್ತಿದೆಯೇ ? ಗೊತ್ತಿಲ್ಲ ಆದರೆ, ಕಿಚ್ಚನ ಈಗೀನ ಪೋಸ್ಟ್  ಆ ಒಂದು ಫೀಲ್ ಕೊಡುತ್ತಿದೆ. 

ಹೌದು, ಸುದೀಪ್ ಕಟ್ಟಕಡೆಯ ಪಂಚಾಯಿತಿ ಮುಗಿಸಿ ಟ್ವಿಟರ್ ಮೂಲಕ ಈ ವಿಚಾರವನ್ನ ಮತ್ತೆ ಬರೆದು ಕೊಂಡಿದ್ದಾರೆ. 11 ಸೀಸನ್‌ಗಳನ್ನ ಮಾಡಿದ್ದೇನೆ. ಅದರಿಂದ ನಿಮಗೆ ಎಂಟರ್ ಟೈನ್ ಮಾಡಿದ್ದೇನೆ ಅನ್ನುವ ನಂಬಿಕೆ ನನ್ನದಾಗಿದೆ. ನೀವು ತೋರಿದ ಪ್ರೀತಿ ಮತ್ತು ಬೆಂಬಲಕ್ಕೆ ನನ್ನ ಧನ್ಯವಾದಗಳನ್ನ ತಿಳಿಸುತ್ತೇನೆ. ಹೋಸ್ಟ್ ಮಾಡಲು ಅವಕಾಶ ಕೊಟ್ಟ ಕಲರ್ಸ್ ಕನ್ನಡಕ್ಕೂ ಧನ್ಯವಾದಗಳು..ಹೀಗೆ ಕಿಚ್ಚ ಸುದೀಪ್ ಬರೆದುಕೊಂಡಿದ್ದಾರೆ.

 

ಬಿಗ್ ಬಾಸ್ ಹೋಸ್ಟ್ ಮಾಡಲು ಅವಕಾಶ ಕೊಟ್ಟ ಕಲರ್ಸ್ ಕನ್ನಡಕ್ಕೆ ಧನ್ಯವಾದಗಳು ತಿಳಿಸುತ್ತೇನೆ. ಈ ಒಂದು ಜರ್ನಿ ನಿಜಕ್ಕೂ ವಿಶೇಷವಾಗಿಯೇ ಇದೆ. ಎಂದೂ ಮರೆಯದ ಪಯಣವೇ ಆಗಿದೆ. ಈ ಒಂದು ಪಯಣದಲ್ಲಿ ನನಗೆ ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನ ತಿಳಿಸುತ್ತೇನೆ. ಇದು ನಿಜಕ್ಕೂ ಸೂಪರ್ ಜರ್ನಿ ಅಂತಲೇ ಸುದೀಪ್ ಬರೆದುಕೊಂಡಿದ್ದಾರೆ.

ಸುದೀಪ್ ತಮ್ಮ ಟ್ವಿಟರ್ ಖಾತೆಯ ಪೇಜ್ ಅಲ್ಲಿಯೇ ಇದನ್ನ ಬರೆದುಕೊಂಡಿದ್ದಾರೆ. ಜನವರಿ 20 ರಂದು ಅಂದ್ರೆ ಇಂದು ಬೆಳಗ್ಗೇನೆ ಸುದೀಪ್ ಈ ಒಂದು ಪೋಸ್ಟ್ ಹಾಕಿದ್ದಾರೆ. ಈ ಮೂಲಕ ತಮ್ಮ ಬಿಗ್ ಬಾಸ್ ನಿರೂಪಣೆಯ ಕೊನೆ ಪಂಚಾಯಿತಿ ಕೊನೆ ಆಗಿದೆ ಅಂತಲೇ ಹೇಳಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಕಳೆದ 10 ಸೀಸನ್‌ಗಳಿಂದಲೂ ಬಿಗ್ ಬಾಸ್ ನಡೆಸಿಕೊಂಡು ಬಂದಿದ್ದಾರೆ. ಇವರಿಗೆ ಇವರೇ ಸಾಟಿ. ಈ ಶೋಗೆ ಬೇರೆ ಯಾರೂ ಸೂಟ್ ಆಗೊದೇ ಇಲ್ಲ. ಹೀಗೆ ಹೇಳುವ ಮಟ್ಟಿಗೆ ಇಡೀ ಶೋ ನಡೆಸಿಕೊಂಡು ಬಂದಿದ್ದಾರೆ. ಪ್ರತಿ ವಾರಾಂತ್ಯದಲ್ಲಿ ಪಂಚಾಯಿತಿ ಮಾಡುತ್ತಲೇ ಎಲ್ಲರಿಗೂ ಬುದ್ಧಿ ಹೇಳಿದ್ದಾರೆ. ಜನರಿಗೆ ರಂಜನೆಯನ್ನೂ ಕೊಟ್ಟಿದ್ದಾರೆ.

ಆದರೆ, ಸೀಸನ್-10 ರ ಹೊತ್ತಿಗೆ ಇವರಿಗೆ ಶೋ ಸಾಕು ಅನಿಸಿದೆ. ಆ ಒಂದು ರಾತ್ರಿನೇ ಒಂದು ಟ್ವೀಟ್ ಕೂಡ ಮಾಡಿದ್ದರು. ಬಿಗ್ ಬಾಸ್ ಸೀಸನ್ ಇನ್ಮುಂದೆ ಮಾಡೋದೇ ಇಲ್ಲ. ಮುಂದಿನ ಸೀಸನ್ ನಾನು ಇರೋದಿಲ್ಲ. ಈ ಅರ್ಥದಲ್ಲಿಯೇ ಒಂದು ಟ್ವೀಟ್ ಕೂಡ ಮಾಡಿದ್ದರು. ಆದರೆ, ಕಲರ್ಸ್ ಕನ್ನಡ ಚಾನೆಲ್ ಇದನ್ನ ಒಪ್ಪಿಕೊಳ್ಳಲೇ ಇಲ್ಲ. ಸುದೀಪ್ ಮನೆಗೆ ಇಡೀ ಟೀಮ್ ಹೋಗಿತ್ತು. ಕನ್ವಿನ್ಸ್ ಮಾಡಿತ್ತು. ಈಗ ಈ ಬಾರಿ ಕಡೆಯ ಸೀಸನ್ ಆಗುವುದು ಖಚಿತ ಆಗುತ್ತಾ? ನೋಡಬೇಕಿದೆ.


Previous Post Next Post