ಗೌಡರ ಬೆನ್ನಿಗೆ ಚೂರಿ ಹಾಕಿದ್ಯಾರು ?
ತೀರ್ಥಹಳ್ಳಿ : ಇತ್ತೀಚಿಗೆ ತೀರ್ಥಹಳ್ಳಿಯಲ್ಲಿ ನಡೆದ ಸೊಸೈಟಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 19ರ ಪೈಕಿ 13 ಪ್ಯಾಕ್ಸ್‌ಗಳಲ್ಲಿ ಸ್ಪಷ್ಟ ಬಹುಮತ ಪಡೆದಿದ್ದರು. ಯಾವುದೆ ಪಕ್ಷದಲ್ಲಿದ್ದರು ಸಹಕಾರ ಸಂಘಗಳ ಚುನಾವಣೆ ಮೇಲೆ ಹಿಡಿತ ಸಾಧಿಸಿದ್ದ ಗೌಡರಿಗೆ ಮುಖಭಂಗ ಎಂಬಂತೆ ಬಿಂಬಿಸಲಾಗಿತ್ತು.
ನಿಜ ಅದಕ್ಕೆ ಕಾರಣವೂ ಇದೆ. ಅದು ಚುನಾವಣ ಸೋಲಿನ ಪ್ರತಿಕಾರ. 2023ರ ಚುನಾವಣೆಯ ಸೋಲಿನ ಪ್ರತೀಕಾರಕ್ಕಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಸೋಲಿಸುವುದಕ್ಕೆ ಬಿಜೆಪಿಗೆ ಸಹಾಯ ಮಾಡಿದ್ದಾರೆ ಎಂಬ ಅನುಮಾನ ಕಾಂಗ್ರೆಸ್ನ ಒಂದು ಪಾಳಯದಲ್ಲಿ ಶುರುವಾಗಿದೆಯಂತೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಗೌಡರೆ ಕಾರಣ ಎಂಬಂತೆ ನಂಬಿಸಿದ್ದಾರೆ. ಶತಾಯಗತಾಯ ಗೌಡರನ್ನು ತೀರ್ಥಹಳ್ಳಿ ತಾಲೂಕು ಕಾಂಗ್ರೆಸ್ ನಿಂದ ದೂರ ಇಡುವ ಯೋಚನೆ ಆ ವ್ಯಕ್ತಿಯದಂತೆ . ಇತ್ತೀಚೆಗೆ ನಡೆದ ಸಹಕಾರಿ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವಂತೆ ಮಾಡಿ ಗೌಡರ ಪ್ರಭಾವ ತೆಗೆಸುವಂತೆ ಮಾಡಿದ್ದಾರೆ ಎಂಬುದು ಕೆಲವು ಕಾಂಗ್ರೆಸ್ ಪಕ್ಷದ ನಾಯಕರ ಮಾತು.
ಸದ್ಯಕ್ಕೆ ತೀರ್ಥಹಳ್ಳಿ ಕಾಂಗ್ರೆಸ್ನಲ್ಲಿ ಎಲ್ಲವೂ ಬೂದಿ ಮುಚ್ಚಿದ ಕೆಂಡದಂತೆ ಇದ್ದು ಸದ್ಯದಲ್ಲೇ ನಡೆಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಎರಡು ಬಣ ಎಂಬಂತಾಗಿದೆ. ತಾಲೂಕು ಕಾಂಗ್ರೆಸ್ ನಲ್ಲಿ ಗೌಡರ ಬಣದ ಹಿಡಿತವನ್ನು ಕಡಿಮೆ ಮಾಡುವುದಕ್ಕೆ ಎಲ್ಲಾ ರೀತಿಯ ಹಿಂಬಾಗಿಲ ಕೆಲಸಗಳು ನಡೆಯುತ್ತಿದೆ ಎಂಬುದು ಕೆಲವರ ಅನಿಸಿಕೆ.
ರಾಜಕೀಯ ಜೀವನದಿಂದ ವಿರಾಮ ತೆಗೆದುಕೊಂಡಿರುವ ಹಾಗೆ ಇರುವ ವ್ಯಕ್ತಿಗಳು ಸಹ ತೆರೆಮರೆಯಲ್ಲಿ ತನ್ನ ರಾಜಕೀಯ ವೈರಿಯನ್ನು ಮೂಲೆಗುಂಪಾಗಿಸುವ ಕೆಲಸವನ್ನು ಕೂಡ ಮಾಡುತ್ತಿದ್ದಾರಂತೆ. ತನ್ನ ಬೆಂಬಲಿಗರಿಗೆ ಪಕ್ಷದ ವೇದಿಕೆಯಲ್ಲಿ ಜವಾಬ್ದಾರಿತ ಪ್ರಮುಖ ನೇಮಿಸುವುದಕ್ಕಾಗಿ ರಾಜ್ಯ ಸರ್ಕಾರ ಜೊತೆ ಸಂಪರ್ಕದಲ್ಲಿದ್ದಾರಂತೆ. ಪಕ್ಷದಲ್ಲಿ ತನ್ನ ಹಿಡಿತ ಕಡಿಮೆಯಾಗದಂತೆ ನೋಡಿಕೊಳ್ಳುತ್ತಿದ್ದಾರಂತೆ.
ಅದೇನೇ ಆಗಲಿ ತೀರ್ಥಹಳ್ಳಿಯಲ್ಲಿ ಬಣ ರಾಜಕೀಯ ಇದೆ ಎನ್ನುವುದು ರಾಜಕೀಯದ ಬಗ್ಗೆ ಅರೆದು ಕುಡಿದು ಅದರ ಬಗ್ಗೆ ತಿಳಿದಿರುವವರ ಮಾತು.
