ಜ. 10 ಕ್ಕೆ ತೀರ್ಥಹಳ್ಳಿ ತಿರುಮಲ ಶ್ರೀಲಕ್ಷ್ಮೀವೆಂಕಟರಮಣ ದೇಗುಲದಲ್ಲಿ ವೈಕುಂಠ ಏಕಾದಶಿ
ತೀರ್ಥಹಳ್ಳಿ: ತಿರುಮಲ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ, ರಥಬೀದಿ ತೀರ್ಥಹಳ್ಳಿಯಲ್ಲಿ ಜನವರಿ 10 ಶುಕ್ರವಾರದಂದು ಬೆಳಿಗ್ಗೆ 6-00 ರಿಂದ ರಾತ್ರಿ 8-00ರ ತನಕ ತಿರುಪತಿ ವೈಕುಂಠ ಏಕಾದಶಿ ವಿಶೇಷ ಆಚರಣೆಯನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ವಿಶೇಷತೆಯಾಗಿ ದೇವಸ್ಥಾನದ ಉತ್ತರ ದ್ವಾರದಿಂದ ಪ್ರವೇಶಿಸಿ ಶ್ರೀ ದೇವರ ದರ್ಶನ ಪಡೆಯುವ ಭಕ್ತರ ಸಕಲ ಇಷ್ಟಾರ್ಥಗಳು ಫಲಿಸುವುದು ಎಂಬ ಪ್ರತೀತಿ ಹೊಂದಿದೆ ಹಾಗೂ ಕಾರ್ಯಕ್ರಮದಲ್ಲಿ ಪರಮಾತ್ಮನಿಗೆ ಪ್ರಿಯವಾದ ಲಡ್ಡುಪ್ರಸಾದ ವಿತರಿಸಲಾಗುತ್ತದೆ.
ಕಳೆದ ಬಾರಿ ಹೇಗಿತ್ತು ಇಲ್ಲಿದೆ ನೋಡಿ 👇🏻https://www.facebook.com/share/v/1WRoFSkaZr/
ವೆಂಕಟರಮಣ ದೇವಸ್ಥಾನ ತಿರುಪತಿ ವೈಕುಂಠ ಏಕಾದಶಿಯು ಧನು ಸಂಕ್ರಾಂತಿಯ ನಂತರ ಶುಕ್ಲ ಪಕ್ಷದ ಏಕಾದಶಿಯಂದು ಆಚರಣೆ ಮಾಡಲಾಗುತ್ತದೆ. ಈ ಒಂದು ದಿನ ಸ್ವರ್ಗದ ಬಾಗಿಲು ತೆರೆದಿರುತ್ತದೆ ಹಾಗೂ ಉತ್ತರ ದ್ವಾರದಿಂದ ಪ್ರವೇಶಿಸಿ ದೇವರ ದರ್ಶನ ಪಡೆಯುವವರೆಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಹಾಗೆಯೇ ತಿರುಪತಿಯಲ್ಲೂ ಈ ದಿನ ಬಹಳ ಶ್ರೇಷ್ಠವಾದ ದಿನವಾಗಿದ್ದು, ವೆಂಕಟರಮಣ ದೇವಸ್ಥಾನ ರಥಬೀದಿ ತೀರ್ಥಹಳ್ಳಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವೈಕುಂಠ ಏಕಾದಶಿಯನ್ನು ಹಮ್ಮಿಕೊಳ್ಳಲಾಗಿದೆ ದೇವಸ್ಥಾನದಲ್ಲಿ ವಿವಿಧ ವಿಶೇಷ ಸೇವೆಗಳನ್ನು ಆಯೋಜಿಸಲಾಗಿದೆ. ಏಕಾದಶಿಯಂದು ಯಾರು ಉಪವಾಸ ಮತ್ತು ದೇವರ ದರ್ಶನ ಮಾಡುತ್ತಾರೋ ಅವರಿಗೆ 23 ಏಕಾದಶಿಗಳ ಪುಣ್ಯಫಲ ಆ ಒಂದೇ ಏಕಾದಶಿಯಲ್ಲಿ ಸಿಗುತ್ತದೆ ಎಂದು ಹೇಳಲಾಗಿದೆ.
ಜೊತೆಗೆ ದೇವಸ್ಥಾನದಲ್ಲಿ “ಉತ್ತರ ದ್ವಾರ”ದ ಮೂಲಕ ಶ್ರೀ ದೇವರ ದರ್ಶನಕ್ಕೆ ವಿಶೇಷ ಅವಕಾಶ ಕಲ್ಪಿಸಲಾಗುತ್ತದೆ. ಭಕ್ತಾದಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ದರ್ಶನ ಪಡೆದು, ಶ್ರೀದೇವರ ಕೃಪೆಗೆ ಪಾತ್ರರಾಗಬೇಕಾಗಿ ಈ ಮೂಲಕ ಕೋರಿಲಾಗಿದೆ.
