ಎಳ್ಳಮಾವಾಸ್ಯೆ ಜಾತ್ರೆಗೆ ಸಾರಥ್ಯ ವಹಿಸಿದ್ದು ಇಬ್ಬರು ಆದರೆ ಸಾರಥಿಗಳು ಮತ್ತಿಬ್ಬರು - ಹಾಗಾದ್ರೆ ಅವರ್ಯಾರು!!?
ತೀರ್ಥಹಳ್ಳಿ : ಪುರಾಣ ಪ್ರಸಿದ್ಧ ಎಳ್ಳಮ್ಮಾವಾಸ್ಯೆ ಜಾತ್ರೆಗೆ ದಿನಗಣನೆ ಆರಂಭವಾಗಿದ್ದು ಆದರೆ ರಥೋತ್ಸವ ಮತ್ತು ತೆಪ್ಪೋತ್ಸವಕ್ಕೆ ಸಂಚಾಲಕರು ಯಾರು ಎಂಬ ಪ್ರೆಶ್ನೆಗೆ ಹಲವಾರು ವಿಚಾರಗಳು ಚರ್ಚೆಯಾದ ನಂತರ ಗೊಂದಲಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಜಂಟಿ ಸಾರಥ್ಯವನ್ನು ಇಬ್ಬರು ನಾಯಕರು ವಹಿಸಿಕೊಂಡಿದ್ದರು.
ಇದನ್ನು ಓದಿ - ತೆಪ್ಪೋತ್ಸವ ಸಂಚಾಲಕರು ಯಾರಾಗ್ತಾರೆ!? ಇಬ್ಬರು ರಾಘವೇಂದ್ರರ ಮಧ್ಯೆ ಪೈಪೋಟಿ!
ಹೌದು ಕಳೆದ ಶನಿವಾರ ಗ್ರಾಮೀಣಾಭಿವೃದ್ಧಿ ಭವನದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಂಚಾಲಕರ ಸ್ಥಾನದ ವಿಷಯವಾಗಿ ಹಲವು ರೀತಿಯಲ್ಲಿ ಚರ್ಚೆ ನಡೆದು ನಂತರ ಗೊಂದಲಕ್ಕೆ ತಿರುಗಿದ ಹಿನ್ನಲೆಯಲ್ಲಿ ಸಂಚಾಲಕರು ಇರುವುದಿಲ್ಲ ನಮ್ಮ ( ಆರಗ ಜ್ಞಾನೇಂದ್ರ, ಆರ್ ಎಂ ಮಂಜುನಾಥಗೌಡರ ) ಸಾರಥ್ಯದಲ್ಲಿ ರಥೋತ್ಸವ ಹಾಗೂ ತೆಪ್ಪೋತ್ಸವ ನಡೆಯಲಿದೆ ಎಂದು ಶಾಸಕರು ಹೇಳಿಕೆ ನೀಡಿದ್ದರು.
ಇದನ್ನು ಓದಿ - ಆರಗ - ಆರ್'ಎಂಎಂ ನೇತೃತ್ವದಲ್ಲಿ ಅದ್ದೂರಿ ತೆಪ್ಪೋತ್ಸವ
ಆದರೆ ಜಾತ್ರೆಗೆ ಸಂಬಂಧಪಟ್ಟ ಕೆಲವೊಂದು ವಿಚಾರಗಳು, ಹಾಗೂ ಮಹತ್ವದ ಕೆಲಸಗಳನ್ನು ಮಾಡಲು ಸಂಚಾಲಕ ಎಂಬ ಸ್ಥಾನವೇ ಅರ್ಥ ಪೂರ್ಣ. ಆರಗ ಅಥವಾ ಆರ್'ಎಂಎಂ ಖರ್ಚಿನ ವ್ಯವಹಾರ ಅಥವಾ ಇನ್ನಿತರ ಹೇಳಿಕೆ ನೀಡಬಹುದೇ ಹೊರತು ಧಾರ್ಮಿಕ ಕೆಲಸಕ್ಕೆ ಮತ್ತೊಬ್ಬರ ಸಾರಥಿ ಅಗತ್ಯ ಇದ್ದದ್ದು ಸತ್ಯ. ಅಂದಿನ ಪೂರ್ವಭಾವಿ ಸಭೆಯಲ್ಲಿ ಗೊಂದಲದ ವಾತಾವರಣವನ್ನು ಶಾಂತಿಗೊಳಿಸುವ ನಿಟ್ಟಿನಲ್ಲಿ ಕೆಲವು ಹೇಳಿಕೆ ಬಂದಿದ್ದರೂ ಸಹ ಸಾರಥಿ ಅಗತ್ಯ ಇರುವುದು ಸತ್ಯ.
ಇದನ್ನು ನೋಡಿ -ಸಜ್ಜನರ ನಡುವೆ ಹುಳಿ ಹಿಂಡುವವರು ಯಾರು ಗೊತ್ತಿದೆ
ಸಾರಥ್ಯವನ್ನು ವಹಿಸಿದವರೇ ಸಾರಥಿ ಆಗಬೇಕೆಂದಿಲ್ಲ. ಹಾಗಾಗಿ ಎಳ್ಳಮ್ಮಾವಾಸ್ಯೆಯ ರಥೋತ್ಸವ ಮತ್ತು ತೆಪ್ಪೋತ್ಸವಕ್ಕೆ ಈ ಬಾರಿ ಇಬ್ಬರನ್ನು ಸಾರಥಿಯನ್ನಾಗಿ ಮಾಡಲು ಎರಡು ಪಕ್ಷದ ಮುಖಂಡರು ಒಪ್ಪಿಗೆ ನೀಡಿದ್ದು ಅವರ ಹೆಸರನ್ನು ಶನಿವಾರ ನಡೆಯುವ ಸಭೆಯಲ್ಲಿ ತಿಳಿಸುವ ಸಾಧ್ಯತೆ ಇದೆ.
ಹಾಗಾದರೆ ರಥೋತ್ಸವ ಮತ್ತು ತೆಪ್ಪೋತ್ಸವಕ್ಕೆ ಸಾರಥಿ ಯಾರು?
ರಾಮೇಶ್ವರ ದೇವಸ್ಥಾನದ ಜೀರ್ಣೋದ್ದಾರ ಹಾಗೂ ಹಲವು ವರ್ಷಗಳಿಂದ ಜಾತ್ರೆ ಮತ್ತು ತೆಪ್ಪೋತ್ಸವದ ಸಂಚಾಲಕರಾಗಿರುವ ಸೊಪ್ಪುಗುಡ್ಡೆ ರಾಘವೇಂದ್ರ ಅವರೇ ಈ ಬಾರಿ ಮತ್ತೊಮ್ಮೆ ತೆಪ್ಪೋತ್ಸವದ ಸಾರಥಿಯಾಗಿ ಹಾಗೂ ಅವರ ಜೊತೆಗೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಡಾ. ಸುಂದರೇಶ್ ಅವರನ್ನು ಮತ್ತೊರ್ವ ಸಾರಥಿಯನ್ನಾಗಿ ಮಾಡಲು ಈಗಾಗಲೇ ತೀರ್ಮಾನಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ಶಿವಮೊಗ್ಗ ಸುದ್ದಿ ಮಾಧ್ಯಮಕ್ಕೆ ಮಾಹಿತಿ ಸಿಕ್ಕಿದ್ದು ಶನಿವಾರ ಇದಕ್ಕೆ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.
ಇದನ್ನು ನೋಡಿ - ಗಲಾಟೆ ಮಾಡಲು ಇದು ರಾಜಕಾರಣ ಸಭೆಯಲ್ಲ, ದೇವಸ್ಥಾನಕ್ಕೆ ಸಂಬಂಧಪಟ್ಟ ಸಭೆ - ಆರ್ ಎಂ ಎಂ
ದೇವಸ್ಥಾನದ ವಿಷಯದಲ್ಲಿ ರಾಜಕಾರಣದ ಅವಶ್ಯಕತೆ ಇತ್ತಾ..!?
ಹೌದು ಈ ಪ್ರೆಶ್ನೆ ಕೆಲವು ದಿನಗಳಿಂದ ತೀರ್ಥಹಳ್ಳಿಯ ಸಾರ್ವಜನಿಕರೇ ಮಾತನಾಡಿಕೊಳ್ಳುತ್ತಿದ್ದಾರೆ. ವರ್ಷಕ್ಕೊಮ್ಮೆ ಬರುವ ಜಾತ್ರೆಯನ್ನು ಅತ್ಯಂತ ವೈಭವದಿಂದ ಆಚರಣೆ ಮಾಡುವುದು ಬಿಟ್ಟು ಅದರಲ್ಲೂ ರಾಜಕೀಯ ಮಾಡುವುದು ಸರಿಯೇ ಎಂದು ಪ್ರೆಶ್ನೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಯಾರೋ ಕೆಲವು ವ್ಯಕ್ತಿಗಳಿಂದ ಇಂತಹ ಭಿನ್ನಾಭಿಪ್ರಾಯಗಳು ಬರುತ್ತಿದ್ದು ಅದಕ್ಕೆಲ್ಲಾ ಕಿವಿಗೊಡದೆ ಜಾತ್ರೆಯನ್ನು ವಿಜೃಂಭಣೆಯಿಂದ ಮಾಡಬೇಕು ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬಂದವು.
