ಹಣಕ್ಕೆ ಕೈ ಕೊಟ್ಟು ಸಹಕಾರ ಭಾರತಿಗೆ ಜೈ ಎಂದ ಮತದಾರ
ತೀರ್ಥಹಳ್ಳಿ : ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಲ್ಲಿ ಒಂದಾದ ಕಸಬಾ ಪ್ರಾಥಮಿಕ ಕೃಷಿ ಸೌಹಾರ್ದ ಸಹಕಾರಿ ಬ್ಯಾಂಕ್ ನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು ಚುನಾವಣೆಯಲ್ಲಿ ತೀವ್ರ ಪೈಪೋಟಿ ನಡೆದು ಕೊನೆಯ ಹಂತದಲ್ಲಿ ಸಹಕಾರ ಭಾರತಿ ವಿಜಯಶಾಲಿಯಾಗಿದೆ.
ಕಸಬಾ ಪ್ರಾಥಮಿಕ ಕೃಷಿ ಸೌಹಾರ್ದ ಸಹಕಾರಿ ಬ್ಯಾಂಕ್ ನ ಆಡಳಿತ ಮಂಡಳಿಗೆ 12 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಅಷ್ಟು ನಿರ್ದೇಶಕರ ಸ್ಥಾನಕ್ಕೆ ಸಹಕಾರ ಭಾರತಿ ಪರವಾಗಿ ಸ್ಪರ್ಧಿಸಿದ್ದ ಆಕಾಂಕ್ಷಿಗಳು ವಿಜಯಶಾಲಿಯಾಗಿದ್ದಾರೆ.
ವಿಧಾನಸಭಾ ಚುನಾವಣೆಯ ರೀತಿಯಲ್ಲಿ ಈ ಚುನಾವಣೆ ನಡೆದಿದ್ದು ಹಲವು ಸೊಸೈಟಿಗಳಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಹಲವು ದೇವಸ್ಥಾನಗಳಲ್ಲಿ ನಾವು ಆಮಿಷ ಒಡ್ದುವುದಿಲ್ಲ, ಹಣ, ಹೆಂಡ ಹಂಚುವುದಿಲ್ಲ ಎಂದು ಆಣೆ ಪ್ರಮಾಣ ಸಹ ಮಾಡಿದ್ದರು. ಆದರೆ ಕಸಬಾ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಅದರ ತದ್ವಿರುದ್ದದಂತೆ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಒಂದು ಮತಕ್ಕೆ ಹದಿನೈದು ಸಾವಿರದಂತೆ ಹಣ ಹಂಚಿದ್ದು ಹಣಕ್ಕೆ ಬೆಲೆ ಕೊಡದ ರೀತಿಯಲ್ಲಿ ಸಹಕಾರಿ ಭಾರತಿ ತಂಡದವರನ್ನು ವಿಜಯಶಾಲಿಯಾಗಿ ಮಾಡಿ ಜನರು ತೀರ್ಪು ನೀಡಿದ್ದಾರೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.
ಸಾಲ ಪಡೆದ ಕ್ಷೇತ್ರದ ಅಭ್ಯರ್ಥಿಗಳು
ಹೊನ್ನಾನಿ ರಾಜ್ ಕಮಲ್ - 297
ಸತೀಶ್ ಟಿ ಎಚ್ ತಿರಳೇಬೈಲು - 238
ಸುಬ್ಬಯ್ಯ ಗೌಡ - 239
ಪ್ರವೀಣ್ - 214
ಮಂಜುನಾಥ್ ಆರ್ - 205
ಪವಿತ್ರ ಕೆ ಟಿ - 236
ದೇವದಾಸ್ - 214
ಅಂಬಾಪ್ರಸಾದ್ - 271
ಯು ಆರ್ ಅರುಣ - 244
ಬಾಬು ಹೊಸಕೊಪ್ಪ - ಅವಿರೋಧ ಆಯ್ಕೆ
ಸಾಲ ಪಡೆಯದ ಕ್ಷೇತ್ರದ ಅಭ್ಯರ್ಥಿ
ವಿಠಲ ಕಮ್ಕಾರು - 12 ಮತಗಳು
