ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಗುಂಡಿ - ಗ್ರಾಮಸ್ಥರ ಆಕ್ರೋಶ..!
ತೀರ್ಥಹಳ್ಳಿ :ರಾಷ್ಟ್ರೀಯ ಹೆದ್ದಾರಿ 169 ರ ತೀರ್ಥಹಳ್ಳಿ - ಕೊಪ್ಪ ರಸ್ತೆಯ ಮೇಲಿನಕುರುವಳ್ಳಿ ಸಮೀಪ ಮುತ್ತುಗುಂಡಿ ಕಾಂಪ್ಲೆಕ್ಸ್ ಎದುರು ಪೈಪ್ ಲೈನ್ ಒಡೆದು ಬಾರಿ ಗಾತ್ರದ ಗುಂಡಿ ಬಿದ್ದು ಒಂದುವರೆ ತಿಂಗಳಿಂದ ರಸ್ತೆ ಮದ್ಯೆ ಕುಡಿಯುವ ನೀರು ನಿತ್ಯ ಪೊಲಾಗುತ್ತಿದೆ. ಸಂಬಂಧ ಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಂಡರೂ ಕಾಣದಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.
ಇದನ್ನು ಓದಿ - ತೀರ್ಥಹಳ್ಳಿಯಲ್ಲಿ ಬೇಜವಾಬ್ದಾರಿ ಲೋಕೋಪಯೋಗಿ ಅಧಿಕಾರಿಗಳು!? ತುಂಗಾ ಕಮಾನು ಸೇತುವೆಗೆ ಸುಣ್ಣ ಬಣ್ಣ ಹೊಡೆಯಲು ಮೀನಾ ಮೇಷ!?
ಇತ್ತೀಚಿನ ದಿನಗಳಲ್ಲಿ ಈ ಹೊಂಡ ಗುಂಡಿ ಬಿದ್ದ ರಸ್ತೆಯಲ್ಲಿ ಅಪಘಾತಗಳು ಪ್ರತಿ ನಿತ್ಯ ಸಂಭವಿಸಿದ್ದರು ಹಾಗೂ ಕುಡಿಯುವ ನೀರು ಪೊಲಾಗುತ್ತಿದ್ದರು ಹೊಂಡ ಗುಂಡಿ ಸರಿಪಡಿಸುವಲ್ಲಿ ಹೆದ್ದಾರಿ ಅದಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರಿಂದ ಮಾತು ಕೂಡ ಕೇಳಿ ಬರುತ್ತಿದೆ.
ಇದನ್ನು ಓದಿ - ಕಳೆದ ಬಾರಿ ಅರ್ಧಂಬರ್ಧ ಸುಣ್ಣ ಬಣ್ಣ ಕಂಡ ತುಂಗಾ ಸೇತುವೆ - ಈ ಬಾರಿ ಸಂಪೂರ್ಣ ಆಗುತ್ತಾ?
ರಾತ್ರಿ ವೇಳೆ ಸಂಚರಿಸುವಂತಹ ವಾಹನಗಳಿಗೆ ಈ ಬಾಯಿ ತೆರೆದ ಹೊಂಡ ಗುಂಡಿ ಕಾಣದೆ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ತಕ್ಷಣ ಸಂಬಂಧ ಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಗಮನಿಸಿ ರಸ್ತೆಯ ಹೊಂಡ ಗುಂಡಿ ಸರಿಪಡಿಸಿ ನೀರು ಪೊಲಾಗದಂತೆ ಕ್ರಮವಹಿಸಿ ಸರಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
