ಶ್ರೀ ರಾಮೇಶ್ವರ ದೇವಸ್ಥಾನದ ಹೊರೆ ಕಾಣಿಕೆಗಾಗಿ ನಾಳೆ ಹೋಗುವ ಮಾರ್ಗಗಳು ಯಾವುದು!?
ತೀರ್ಥಹಳ್ಳಿ : ಶ್ರೀ ರಾಮೇಶ್ವರ ಅನ್ನದಾಸೋಹ ಮಿತ್ರವೃಂದದ ವತಿಯಿಂದ ಹದಿನೈದು ವರ್ಷಗಳಿಂದ ನಿರಂತರವಾಗಿ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಮೂರು ದಿನಗಳ ಅನ್ನದಾಸೋಹಕ್ಕೆ ತಾಲೂಕಿನ ಎಲ್ಲಾ ಸದ್ಭಕ್ತರು ಪಾಲ್ಗೊಳ್ಳಲು ರಾಮೇಶ್ವರ ದೇವಸ್ಥಾನ ವತಿಯಿಂದ ಹೊರಕಾಣಿಕೆ ವಾಹನ ಈಗಾಗಲೇ ಸಂಚಾರ ಆರಂಭಿಸಿದೆ
ನಾಳೆ (25-12-24) ರಂದು ಗಡಿಕಲ್ಲು, ಕುಪ್ಪಳ್ಳಿ, ಕಲ್ಲುಕೊಡಿಗೆ, ಗುರುವಳ್ಳಿ, ಹೊಳೆಕೊಪ್ಪ, ಕೊಳವಾರ, ತೋರಳಿ, ಶುಂಠಿಕಟ್ಟೆ, ಹೊಸಅಗ್ರಹಾರ, ಮಸರೂರು, ಬಸವಾನಿ, ಹಳುವಾನಿ, ಮಳೂರು, ಅಮ್ಮ್ತಿ, ಅಂದಗೆರೆ, ತುಂಬೆಕೋಡಿಗೆ, ದೇವಂಗಿ, ಜಟ್ಟಿನಮಕ್ಕಿ, ಹಿಲಿಕೆರೆ, ವಾಟಗಾರ್, ಹೊಸತೋಟ, ವೈದ್ಯರಕೊಪ್ಪ, ಇಂಗ್ಲಾದಿ, ಬಾಣಾಂಕಿ, ಬಳಗಟ್ಟೆ ಹಾಗೂ ಸಂಕದಹೊಳೆ, ಸರಳ, ನೆರಟೂರು, ಬೋರ್ಡ್ ಗಲ್, ಹಾಗು ಪಟ್ಟಣದ ಯಡೇಹಳ್ಳಿಕೆರೆ, ಇಂದಿರಾನಗರ, ಗಾಂಧಿನಗರ, ಸಿದ್ದೇಶ್ವರ ಬಡಾವಣೆ, ಬಾಳೆಬೈಲು, ಸುರುಳಿ ಬಾಳೆಬೈಲು, ಮೀನು ಮಾರ್ಕೆಟ್ ಸುತ್ತಮುತ್ತ, ಛತ್ರಕೇರಿ, ರಥಬೀದಿ, ಮಿಲ್ಕೇರಿ ಭಾಗದಲ್ಲಿ ಹಸಿರು ಹೊರೆಕಾಣಿಕೆ ಸಂಗ್ರಹಿಸಲಿದೆ.
ಸದ್ಭಕ್ತರು ತಮ್ಮ ಮನೆಯಲ್ಲಿ ಬೆಳೆದ ದವಸ ಧಾನ್ಯ ತರಕಾರಿ ಅಕ್ಕಿ, ಕಾಯಿ ಇನ್ನಿತರ ವಸ್ತುಗಳನ್ನು ಹಸಿರು ಹೊರೆ ಕಾಣಿಕೆ ರೂಪದಲ್ಲಿ ಕೊಡುವುದರ ಮೂಲಕ ರಾಮೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅನ್ನ ದಾಸೋಹ ಮಿತ್ರ ವೃಂದ ಸಮಿತಿಯವರು ವಿನಂತಿಸಿದ್ದಾರೆ.
