ಅಭಿವೃದ್ಧಿಗಾಗಿ ಪಕ್ಷ ಪಂಗಡ ಎಂದು ನೋಡದೆ ಕೆಲಸ ಮಾಡುತ್ತೇವೆ - ಆರಗ ಜ್ಞಾನೇಂದ್ರ Araga jnanendra

ಅಭಿವೃದ್ಧಿಗಾಗಿ ಪಕ್ಷ ಪಂಗಡ ಎಂದು ನೋಡದೆ ಕೆಲಸ ಮಾಡುತ್ತೇವೆ - ಆರಗ ಜ್ಞಾನೇಂದ್ರ 



ತೀರ್ಥಹಳ್ಳಿ : ಅಭಿವೃದ್ಧಿ ಮಾಡುತ್ತೇವೆ ಎಂದು ಭರವಸೆ ನೀಡಿ ಚುನಾವಣೆಯಲ್ಲಿ ಗೆದ್ದಿರುತ್ತೇವೆ. ಗೆದ್ದ ಮೇಲೆ ಅಥವಾ ಸೋತರೆ ಕೆಲಸ ಮಾಡುವ ಅಥವಾ ಮಾಡಿಸುವ ಸಾಮರ್ಥ್ಯ ಇರಬೇಕು ಅಭಿವೃದ್ಧಿ ನಿಂತ ನೀರು ಆಗಬಾರದು ಎಂದು ಶಾಸಕರಾದ ಆರಗ ಜ್ಞಾನೇಂದ್ರ ಹೇಳಿದರು.

ಮಂಗಳವಾರ ಪಟ್ಟಣದ ಕುರುವಳ್ಳಿಯಲ್ಲಿ ಪಟ್ಟಣ ಪಂಚಾಯತ್ ವತಿಯಿಂದ ನಡೆದ 1 ಕೋಟಿ 70 ಲಕ್ಷದ ಕಾಮಗಾರಿಗೆ ಚಾಲನೆ ನೀಡಿದ ಅವರು ಈ ಭಾಗದಲ್ಲಿ ರಸ್ತೆ ಇರಲಿಲ್ಲ. ಅಗ್ರಹಾರಕ್ಕೆ ರಸ್ತೆ ಮಾಡುವ ಸಲುವಾಗಿ ನರಸಿಂಹ ನಾಯಕ್ ಸೇರಿ ಕೆಲವರಿಗೆ ನಿವೇಶನ ಕೊಡುತ್ತೇವೆ ಎಂದು ಹೇಳಿದ್ದೇವು ಆದರೆ ಇಷ್ಟು ವರ್ಷವಾದರೂ ನಿವೇಶನ ಕೊಡಲು ಆಗಿಲ್ಲ. ಪ ಪಂ ವತಿಯಿಂದ ಆದರೆ ನಿವೇಶನ ಕೊಡಿ ಎಂದು ತಿಳಿಸಿದರು.

ಜಯಚಾಮರಾಜೇಂದ್ರ ಸೇತುವೆಗೆ ಈಗಾಗಲೇ 85 ವರ್ಷ ಆಗುತ್ತಿರುವುದರಿಂದ ಪರ್ಯಾಯವಾಗಿ 56 ಕೋಟಿ ವೆಚ್ಚದಲ್ಲಿ ಮತ್ತೊಂದು ಸೇತುವೆ ಮಾಡಲಾಗಿದೆ. ಬೈಪಾಸ್ ರಸ್ತೆ ನಿರ್ಮಿಸಲಾಗಿದೆ. ಇನ್ನೊಂದು ಬೈಪಾಸ್ ರಸ್ತೆ ಕಾಮಗಾರಿ ನಡೆಯುತ್ತಿದೆ. ಭಾರತೀಪುರ ತಿರುವಿನಲ್ಲಿ ಈಗಾಗಲೇ ರಸ್ತೆ ಕಾಮಗಾರಿ ನಡೆದಿದೆ. ತೀರ್ಥಹಳ್ಳಿಯಲ್ಲಿ ಅಭಿವೃದ್ಧಿಗಾಗಿ ಪಕ್ಷ ಪಂಗಡ ಎಂದು ನೋಡದೆ ಕೆಲಸ ಮಾಡುತ್ತೇವೆ ಎಂದರು.

ಆರ್ ಎಂ ಮಂಜುನಾಥ್ ಗೌಡ ಮಾತನಾಡಿ ಅಭಿವೃದ್ಧಿ ವಿಚಾರದಲ್ಲಿ ತೀರ್ಥಹಳ್ಳಿ ಯಾವತ್ತೂ ಹಿಂದೆ ಬಿದ್ದಿಲ್ಲ, ಆಶ್ರಯ ಯೋಜನೆ ಅಡಿಯಲ್ಲಿ ಬಡವರಿಗೆ ನಿವೇಶನ ಕೊಡುವ ಕೆಲಸ ಆಗಬೇಕಿದೆ. ಬೇರೆ ಜಿಲ್ಲೆಗೆ ಹೋಲಿಸಿಕೊಂಡರೆ ಶಿವಮೊಗ್ಗ ಅದರಲ್ಲೂ ತೀರ್ಥಹಳ್ಳಿಯ ರಸ್ತೆಗಳು ಚೆನ್ನಾಗಿವೆ. ಕೇಂದ್ರದ ಯೋಜನೆಯ ಅಡಿಯಲ್ಲಿ ತುಂಗಾ ನದಿಯ ತೀರದಲ್ಲಿ ವಾಕಿಂಗ್ ಪಾತ್ ಕೂಡ ಆಗುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಈಗಾಗಲೇ ಶಿವಮೊಗ್ಗದಲ್ಲಿ ವಾಕಿಂಗ್ ಪಾತ್ ಮಾಡಲಾಗಿದೆ.ಆರಗ ಜ್ಞಾನೇಂದ್ರ ಅದೃಷ್ಟವಂತರು ಐದು ಬಾರಿ ಶಾಸಕರು ಆಗಿದ್ದಾರೆ. ಅವರ ಜೊತೆಗೆ ನಾವು ಕೈ ಜೋಡಿಸುತ್ತೇವೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ  ಕೆಲಸ ಮಾಡೋಣ ಎಂದರು.

ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತ್ ಉಲ್ಲಾ ಅಸಾದಿ ಮಾತನಾಡಿ ನಾವು ಗೆದ್ದರೆ ಒಳ್ಳೆಯ ಆಡಳಿತ ಕೊಡುತ್ತೇವೆ ಎಂದು ಭರವಸೆ ನೀಡಿರುತ್ತೇವೆ. ಆದರೆ ಯಾರು ಗೆಲ್ಲುತ್ತಾರೆ ಸೋಲುತ್ತಾರೆ ಗೊತ್ತಿರುವುದಿಲ್ಲ. ಆದರೆ ಅಭಿವೃದ್ಧಿ ವಿಚಾರದಲ್ಲಿ ಪಕ್ಷವನ್ನು ನೋಡದೆ ಕೆಲಸ ಮಾಡಬೇಕು ಹಾಗೆ ಕೆಲಸ ಮಾಡಿಸಬೇಕು. ನಮ್ಮಲ್ಲಿ ಕಮಿಷನ್ ವ್ಯವಹಾರ ಇಲ್ಲ. ಕ್ವಾಲಿಟಿ ಇಲ್ಲದೆ ರಸ್ತೆಗಳು ಕಿತ್ತು ಹೋಗುತ್ತವೆ. ಆ ರೀತಿ ಆಗುವ ಕೆಲಸ ಆಗಬಾರದು. ಹಿಡಿದ ಕೆಲಸ ಯಾವುದನ್ನು ಬಿಡಬಾರದು ಕೆಲಸವನ್ನು ಕ್ವಾಲಿಟಿ ಕೊಡಬೇಕು  ಎಂದು ಹೇಳಿದ್ದೇವೆ ಎಂದರು.

ಇದೆ 29 ರಂದು ಕುವೆಂಪು ಹುಟ್ಟಿದ ದಿನವಾಗಿದೆ. ಹಾಗಾಗಿ ಪಟ್ಟಣ ಪಂಚಾಯತ್ ಬಳಿ ಇರುವ ಜಾಗವನ್ನು ಸಭಾಂಗಣ ಮಾಡಲು ಈಗಾಗಲೇ ಕಾಮಗಾರಿ ನಡೆಸುತ್ತಿದ್ದು ಅದಕ್ಕೆ ಕುವೆಂಪು ಹೆಸರು ಇಡಬೇಕು ಎಂದು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ ಪಂ ಮುಖ್ಯಾಧಿಕಾರಿ ನಾಗರಾಜ್, ಉಪಾಧ್ಯಕ್ಷರಾದ ಗೀತಾ ರಮೇಶ್,  ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ ಮಂಜುಳಾ ನಾಗೇಂದ್ರ, ಗಣಪತಿ, ಜ್ಯೋತಿ ಮೋಹನ್, ಶಬನಮ್ ಸಂದೇಶ್ ಜವಳಿ, ಕಂಡಿಲ್ ರಾಘವೇಂದ್ರ, ಜಿಲ್ಲಾ ಧಾರ್ಮಿಕ ನಿರ್ದೇಶಕರಾದ ಲಕ್ಷ್ಮಿ ಸೇರಿ ಹಲವರು ಉಪಸ್ಥಿತರಿದ್ದರು.







Previous Post Next Post