ವಿದ್ಯುತ್ ಟ್ರಾನ್ಸ್ಫಾರ್ಮರ್ ನಲ್ಲಿ ಎಡವಟ್ಟು! ಸ್ವಿಚ್ ಬೋರ್ಡ್ ನ ಎರಡು ಬದಿಯಲ್ಲಿ ಬರ್ತಿದೆ ಕರೆಂಟ್ ! Mescom

ವಿದ್ಯುತ್ ಟ್ರಾನ್ಸ್ಫಾರ್ಮರ್ ನಲ್ಲಿ ಎಡವಟ್ಟು! ಸ್ವಿಚ್ ಬೋರ್ಡ್ ನ ಎರಡು ಬದಿಯಲ್ಲಿ ಬರ್ತಿದೆ ಕರೆಂಟ್ !



ತೀರ್ಥಹಳ್ಳಿ : ವಿದ್ಯುತ್ ಕಂಬದ ಟ್ರಾನ್ಸ್ಫಾರ್ಮರ್ ನಲ್ಲಿ ಆಗಿರುವ ಎಡವಟ್ಟಿನಿಂದ ಮನೆಗಳ ಸ್ವಿಚ್ ಬೋರ್ಡ್ ಗಳಲ್ಲಿ ಎರಡು ಬದಿಯಲ್ಲಿ ಕರೆಂಟ್ ಬರುತ್ತಿದ್ದು ಇದರಿಂದ ಕರೆಂಟ್ ಹೊಡೆಯುವ ಸಾಧ್ಯತೆ ಹೆಚ್ಚಿದೆ. ಇದರ ಬಗ್ಗೆ ಮೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಯಾವುದೇ ರೀತಿ ಸ್ಪಂದನೆ ಮಾಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತೀರ್ಥಹಳ್ಳಿ ತಾಲೂಕಿನ ಬಸವಾನಿ ವ್ಯಾಪ್ತಿಯ ಹಲವು ಮನೆಗಳಲ್ಲಿ TC ( ಟ್ರಾನ್ಸ್ಫಾರ್ಮರ್ ) ನಲ್ಲಿ ಆಗಿರುವ ಎಡವಟ್ಟಿನಿಂದ ಈ ರೀತಿ ಆಗಿದೆ. ಸ್ವಿಚ್ ಬೋರ್ಡ್ ನ ಒಂದು ಭಾಗದಲ್ಲಿ ಮಾತ್ರ ಕರೆಂಟ್ ಇರಬೇಕು ಆದರೆ ಈ ಭಾಗದಲ್ಲಿ ಎರಡು ಕಡೆ ಕರೆಂಟ್ ಬರುತ್ತಿದೆ. ಇದರಿಂದ ಮನೆಗಳಲ್ಲಿರುವ ವಿದ್ಯುತ್ ಉಪಕರಣ ಹಾಳಾಗುವ ಹಾಗೂ ಕೆಲಸ ನಿರ್ವಹಿಸುವಾಗ ವಿದ್ಯುತ್ ಶಾಕ್ ಹೊಡೆಯುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಲೈನ್ ಮ್ಯಾನ್ ಹಾಗೂ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದರು ಸರಿಯಾದ ಸ್ಪಂದನೆ ಮಾಡಿಲ್ಲ ಎಂದು ಹೇಳಿದ್ದಾರೆ.

ವಿದ್ಯುತ್ ಉಪಕರಣ ಅಥವಾ ಯಾರದ್ದೋ ಜೀವ ಹೋಗುವ ಮುನ್ನ ಮೆಸ್ಕಾಂ ಇಲಾಖೆ ಗಮನ ಹರಿಸುವುದು ಒಳ್ಳೆಯದು ಎಂಬ ಅಭಿಪ್ರಾಯ ಸ್ಥಳೀಯರದ್ದಾಗಿದೆ.





Previous Post Next Post