ರಾಜಕುಮಾರನ ಆಸ್ಥಾನಕ್ಕೆ ಚಕ್ರವರ್ತಿ ಆಗಮನ! Kannadada kotyadhipati

ರಾಜಕುಮಾರನ ಆಸ್ಥಾನಕ್ಕೆ ಚಕ್ರವರ್ತಿ ಆಗಮನ!

ಕನ್ನಡದ ಕೋಟ್ಯಾಧಿಪತಿ ನಿರೂಪಕರಾಗ್ತಾರಾ ಬಿಗ್ ಸ್ಟಾರ್ !


ಕನ್ನಡ ರಿಯಾಲಿಟಿ ಶೋ ಗಳಲ್ಲಿ ಅತೀ ಹೆಚ್ಚಿನ ಜನಮನ್ನಣೆ ಪಡೆದ ಬಿಗ್ ಬಾಸ್ ಸೀಸನ್ 11 ಮುಗಿಯುತ್ತಿದ್ದಂತೆ ವಿದಾಯ ಹೇಳಲು ಈಗ ಕಿಚ್ಚ ಸುದೀಪ್ ನಿರ್ಧಾರ ಮಾಡಿದ್ದಾರೆ. ಈಗಾಗಲೇ ಆ ವಿಚಾರವನ್ನು ಸ್ವತಃ ಸುದೀಪ್ ಸ್ಪಷ್ಟವಾಗಿ ತಿಳಿಸಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ನೂತನ ನಿರೂಪಕರ ಆಗಮನವಾಗುವುದು ಖಚಿತ ಎಂಬ ಮಾಹಿತಿ ಹೊರ ಬಿದ್ದಿದೆ.

ಹಾಗಾದ್ರೆ ಕಲರ್ಸ್ ಕನ್ನಡ ಕಿಚ್ಚನನ್ನು ಕೈ ಬಿಡುತ್ತಾ!?

ಅತ್ಯಂತ ಜನಪ್ರಿಯವಾದ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್, ಇಂತಹ ಶೋ ಅನ್ನು ಅಲ್ಲಿನ ಸ್ಪರ್ಧಿಗಳಿಗಾಗಿ ಜನ ವೀಕ್ಷಣೆ ಮಾಡುತ್ತಾರೋ ಇಲ್ಲವೋ ಆದರೆ ಶನಿವಾರ ಮತ್ತು ಭಾನುವಾರ ನಿರೂಪಕ ಕಿಚ್ಚ ಸುದೀಪ್ ಗಾಗಿ ನೋಡುತ್ತಾರೆ. ಈ ವಿಚಾರದಲ್ಲಿ ಕಲರ್ಸ್ ಕನ್ನಡಕ್ಕೆ TRP ಬರುತ್ತಿರುವುದು ಸತ್ಯ. ಆದರೆ ಅದನ್ನು ಲೆಕ್ಕಿಸದೆ  ಕಲರ್ಸ್ ಕನ್ನಡ ಕಿಚ್ಚನನ್ನು ಕೈ ಬಿಡುತ್ತಾ !? ಎಂಬ ಪ್ರೆಶ್ನೆ ಹುಟ್ಟುವುದು ಸಹಜ. ಆದರೆ ಅದಕ್ಕೆ ಸಂಬಂಧಪಟ್ಟಂತೆ ಮಾಹಿತಿಯೊಂದು ಹೊರ ಬಿದ್ದಿದ್ದು ಜನರು ಮತ್ತೆ ಕಿಚ್ಚನನ್ನು ನೋಡಲಿದ್ದಾರೆ.



ರಾಜಕುಮಾರನ ಆಸ್ಥಾನಕ್ಕೆ ಚಕ್ರವರ್ತಿ ಆಗಮನ!

ಹೌದು ಬಿಗ್ ಬಾಸ್ ಹೇಗೆ ಕನ್ನಡದ ಅತೀ ದೊಡ್ಡ ಕಾರ್ಯಕ್ರಮವೋ ಹಾಗೆ ಕಲರ್ಸ್ ಕನ್ನಡದಲ್ಲೇ ಪ್ರಸಾರವಾಗುತ್ತಿದ್ದ ಕನ್ನಡದ ಕೋಟ್ಯಾಧಿಪತಿ ಕೂಡ ಜನ ಮನ್ನಣೆ ಪಡೆದ ಶೋ ಎಂದರೆ ತಪ್ಪಾಗಲ್ಲ. ಕನ್ನಡದ ರಾಜಕುಮಾರ ನಡೆಸಿಕೊಡುತ್ತಿದ್ದ ಈ ಕಾರ್ಯಕ್ರಮ 4 ಸೀಸನ್ ಮುಗಿಸಿತ್ತು. ಸೀಸನ್ 1,2 ಪುನೀತ್ ನಡೆಸಿದ್ದರೆ ಸೀಸನ್ 3 ರಮೇಶ್ ಅರವಿಂದ್ ನಡೆಸಿಕೊಟ್ಟಿದ್ರು. ಆದರೆ ಆ ಸೀಸನ್ ಅಷ್ಟೊಂದು ಜನಪ್ರಿಯತೆ ಪಡೆಯಲಿಲ್ಲ. ಈ ಕಾರಣಕ್ಕೆ ಸೀಸನ್ 4 ಮತ್ತೊಮ್ಮೆ ಪುನೀತ್ ನಡೆಸಿಕೊಟ್ಟರು. ಆ ನಂತರ ಕಾರ್ಯಕ್ರಮ ಅಲ್ಲಿಗೆ ನಿಂತಿತ್ತು.

ಈಗ ಮತ್ತೊಮ್ಮೆ ಆ ಕಾರ್ಯಕ್ರಮವನ್ನು ಪ್ರಾರಂಭ ಮಾಡಲು ಕಲರ್ಸ್ ಕನ್ನಡ ಯೋಚನೆ ಮಾಡಿದ್ದು ರಾಜಕುಮಾರನ ಆಸ್ಥಾನಕ್ಕೆ ಅಭಿನಯ ಚಕ್ರವರ್ತಿಯನ್ನು ತರಲು ಬಿಗ್ ಪ್ಲಾನ್ ಅನ್ನು ಕಲರ್ಸ್ ಕನ್ನಡ ರೂಪಿಸಿದೆ. ಬಿಗ್ ಬಾಸ್ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಬಗ್ಗೆ ಮಾಹಿತಿ ಹೊರ ಬರಲಿದೆ ಎಂದು ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಇರುವುದಿಲ್ಲ ಎಂದು ಬೇಸರಗೊಂಡಿದ್ದ ವೀಕ್ಷಕರಿಗೆ ಹಾಗೂ ಅಭಿಮಾನಿಗಳಿಗೆ ಈ ವಿಚಾರ ಮತ್ತಷ್ಟು ಖುಷಿಪಡಿಸಲಿದೆ.








Previous Post Next Post