ಮಂಡಗದ್ದೆ ಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ mandagadde

ಮಂಡಗದ್ದೆ ಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ  

ತೀರ್ಥಹಳ್ಳಿ: ತಾಲೂಕಿನ ಮಂಡಗದ್ದೆಯ   ಸಮೂಹ ಸಂಪನ್ಮೂಲ ಕೇಂದ್ರದಲ್ಲಿ 2024-- 25 ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ನಡೆಯಿತು. 

ಈ ಕಾರ್ಯಕ್ರಮವನ್ನು ಸಿ ಆರ್ ಸಿ ಮಂಡಗದ್ದೆಯಲ್ಲಿ ಮಂಡಗದ್ದೆ ಕ್ಲಸ್ಟರ್ ಮಟ್ಟದ  ಶಿಕ್ಷಕರು ಉತ್ತಮವಾಗಿ ಆಯೋಜಿಸಿ ಸಂಘಟಿಸಿದ್ದರು . ಈ  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಗದ್ದೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ  ಜ್ಯೋತಿ ಪ್ರಮೋದ್  ರವರು ವಹಿಸಿದ್ದರು. 

ಕಾರ್ಯಕ್ರಮದ ಉದ್ಘಾಟನೆಯನ್ನು ಸಿಂಗನ ಬಿದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ  ನವೀನ್ ಕುಮಾರ್ ರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ  ಗ್ರಾಮೀಣ ಮಕ್ಕಳ ಪ್ರತಿಭೆಯನ್ನ ಗುರುತಿಸಲು ಪ್ರತಿಭಾ ಕಾರಂಜಿ ಉತ್ತಮವಾದ ವೇದಿಕೆಯಾಗಿದೆ ಶಿಕ್ಷಕರು, ಪೋಷಕರು, ಎಸ್‌ ಡಿ ಎಂ ಸಿ ಯವರು, ಸ್ಥಳೀಯರು ಶಿಕ್ಷಣಾಸಕ್ತರು  ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಒಂದು ವೇದಿಕೆಯನ್ನು ಒದಗಿಸಿಕೊಡುವಂತಹ ಜವಾಬ್ದಾರಿ ಇದೆ  ಮಕ್ಕಳಲ್ಲಿ ಆರೋಗ್ಯಕರವಾದಂತಹ ಸ್ಪರ್ಧೆಯನ್ನು ಏರ್ಪಡಿಸಿ ಅವರಲ್ಲಿರುವ ಕಲೆಯನ್ನ ಪತ್ತೆ ಹಚ್ಚಲು ಪ್ರತಿಭಾ ಕಾರಂಜಿ ಒಂದು ಅತ್ಯುತ್ತಮ  ವೇದಿಕೆ   ಎಂದರು . 

ಇಲಾಖೆಯ ಆಶೋತ್ತರಗಳನ್ನು ಮತ್ತೆ ಸರ್ಕಾರದ ಯೋಜನೆಗಳ ಬಗ್ಗೆ  ಪ್ರತಿಭಾ ಕಾರಂಜಿ   ತಂಡೋಪಾದಿಯಲ್ಲಿ  ಕೆಲಸ ನಿರ್ವಹಿಸಿ ಯಶಸ್ವಿಗೆ ಕಾರಣರಾದ   ಪ್ರಕಾಶ್ ತಳಲೇ ..ಅಶೋಕ್,  ತಿಪ್ಪಣ್ಣ ,  ಶಿವಣ್ಣ  ,ಅನಿತಾ  ರವರ ಕೆಲಸಗಳನ್ನು ಸ್ಮರಿಸುತ್ತ, ಸಿ ರ್ ಪಿ. ಸರಸ್ವತಿ ಮಂಡಗದ್ದೆ ಕ್ಲಸ್ಟರ್ ಪ್ರಾಸ್ತಾವಿಕ ನುಡಿಯಲ್ಲಿ ವಿವರಿಸಿದರು..

ಮಂಡಗದ್ದೆ ಮತ್ತು ಸಿಂಗನ ಬಿದರೆ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರು  ಸದಸ್ಯರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು . ಸತೀಶ್ ರವರು ಮಂಡಗದ್ದೆ ಗ್ರಾಮ ಪಂಚಾಯಿತಿಯ ಸದಸ್ಯರು ಸಮಸ್ತ ಶಿಕ್ಷಕರು ಹಾಗು ಸಿ ರ್ ಪಿ ಕೇಂದ್ರ ಹಾಗು ಇಲಾಖೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ  ಮಕ್ಕಳಿಗೆ ಶುಭಾಶಯಗಳು ಕೋರಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ರವರು   ಕಾರ್ಯಕ್ರಮದ ಉತ್ತಮ ಆಯೋಜನೆಯ ಬಗ್ಗೆ  ಸಮಸ್ತ ಶಿಕ್ಷಕರನ್ನು  ಪ್ರಶಂಸಿಸಿ ಅಭಿನಂದನೆ ತಿಳಿಸಿ ಮಕ್ಕಳಿಗೆ ಶುಭ ಹಾರೈಸಿ , ಕಾರ್ಯಕ್ರಮದ ಬಗ್ಗೆ ಪ್ರೋತ್ಸಾಹದ ಮಾತುಗಳನ್ನು ಆಡಿದರು. ಈ ಸಂದರ್ಭದಲ್ಲಿ  ಅಕ್ಷರ ದಾಸೋಹದ  ನಿರ್ದೇಶಕರಾದ ಪ್ರವೀಣ್, ಸಮನ್ವಯಾಧಿಕಾರಿ ಗಳಾದ ಮಂಜುನಾಥ್, ಶಿಕ್ಷಣ ಸಂಯೋಜಕರಾದ ಜ್ಯೋತಿ , ಪ್ರತಿಭಾ ಕಾರಂಜಿ  ನೋಡಲ್ ಅಧಿಕಾರಿ ನಾಗರಾಜ್ ಉಪಸ್ಥಿತರಿದ್ದರು. 
Previous Post Next Post