ರಾಘವೇಂದ್ರ ಸ್ವಾಮಿ ಮಠದಲ್ಲಿ ನವೆಂಬರ್ 21 ರಂದು ಮೇಧಾ ದಕ್ಷಿಣಾಮೂರ್ತಿ ಹೋಮ - ಸಾಮೂಹಿಕ ದೀಪಾರಾಧನೆ raghavendra mata

ರಾಘವೇಂದ್ರ ಸ್ವಾಮಿ ಮಠದಲ್ಲಿ ನವೆಂಬರ್ 21 ರಂದು ಮೇಧಾ ದಕ್ಷಿಣಾಮೂರ್ತಿ ಹೋಮ -  ಸಾಮೂಹಿಕ ದೀಪಾರಾಧನೆ

ತೀರ್ಥಹಳ್ಳಿ : ಪಟ್ಟಣದ ರಥಬೀದಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನವೆಂಬರ್
21ರಂದು ರಾಘವೇಂದ್ರ ಸ್ವಾಮಿ ಮಠದಲ್ಲಿ ಬೆಳಗ್ಗೆ 9ಕ್ಕೆ ವೇದ ಬ್ರಹ್ಮ ಸುಬ್ರಹ್ಮಣ್ಯ ಭಟ್ ಬೊಮ್ಮಸಯ್ಯನ ಅಗ್ರಹಾರ ಇವರ ಪೌರೋಹಿತ್ಯದಲ್ಲಿ ಶ್ರೀ ಮೇಧಾ ದಕ್ಷಿಣಾಮೂರ್ತಿ ಹೋಮವನ್ನು ಜಗದ್ಗುರು ಶ್ರೀಮಾನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ವಿಜಯಧ್ವಜ ತೀರ್ಥ ಪೀಠದ ಶ್ರೀ ಶ್ರೀ ವಿದ್ಯೆಂದ್ರತೀರ್ಥ ಶ್ರೀಪಾದರು ಇವರ ದಿವ್ಯ ಉಪಸ್ಥಿತಿಯಲ್ಲಿ ನೆರವೇರಿಸಲಾಗುವುದು. 

ಸಮಸ್ತ ಭಕ್ತಾದಿಗಳ ಸಹಕಾರದೊಂದಿಗೆ ಸಂಜೆ 6ರಿಂದ ಸಾಮೂಹಿಕ ದೀಪಾರಾಧನೆ ಮತ್ತು ಪ್ರಾಕಾರೋತ್ಸವ ಸಂಜೆ 7ಕ್ಕೆ ಚಿತ್ರಾಪುರ ಮಠದ ಶ್ರೀ ಶ್ರೀ ವಿದ್ಯೆಂದ್ರ ತೀರ್ಥ ಶ್ರೀ ಪಾದರು ಇವರಿಂದ ಆಶೀರ್ವಚನ, ರಾತ್ರಿ 8ರಿಂದ ಸಾಫ್ಟ್‌ವೇರ್ ಇಂಜಿನಿಯರ್ ಗುರುಪ್ರಸಾದ ಅಜವಂದ್ಯ ಬೆಂಗಳೂರು ಹಾಗೂ ಸಂಗಡಿಗರಿಂದ ಭಕ್ತಿಗೀತೆ ಹಾಗೂ ದಾಸರ ಪದಗಳ ಗಾಯನ ಕಾರ್ಯಕ್ರಮ ನಡೆಯಲಿದೆ. 

ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಾಘವೇಂದ್ರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿಯವರು ವಿನಂತಿಸಿದ್ದಾರೆ.
Previous Post Next Post