ಬೈಕ್ ಕಳುವಿನ ಆರೋಪಿ ಅಂದರ್ ! Bike thift

ಬೈಕ್ ಕಳುವಿನ ಆರೋಪಿ ಅಂದರ್ !

ಹೊಸನಗರ: ತಾಲ್ಲೂಕಿನ ರಿಪ್ಪನ್ ಪೇಟೆಯ ಪೊಲೀಸ್ ಠಾಣಾ ವ್ಯಾಪ್ತಿಯ 9 ನೇ ಮೈಲುಗಲ್ಲಿನ ಬಳಿ ನಿಲ್ಲಿಸಿದ್ದ ಬಜಾಜ್ ಸಿಟಿ 100 ದ್ವಿಚಕ್ರವಾಹನ ಕಳ್ಳತನದ ಆರೋಪಿಯನ್ನ ಹೊಸನಗರ ಪೊಲೀಸರು ಪತ್ತೆಹಚ್ಚಿ, ಆರೋಪಿಗಳನ್ನ ಬಂಧಿಸಲಾಗಿದೆ. 





ಅ.15 ರಂದು ತಾಲೂಕಿನ ಹಾರೋಹಿತ್ತಲ ಗ್ರಾಮದ ಸುಧಾಕರ್ ಎಂಬುವರು ತಮ್ಮ ಬಜಾಜ್ ಸಿಟಿ 100 ದ್ವಿಚಕ್ರ ವಾಹನವನ್ನು 9ನೇ ಮೈಲುಗಲ್ಲಿನ ಹತ್ತಿರ ನಿಲ್ಲಿಸಿದ್ದ ವಾಹನ ಕಳವು ಮಾಡಲಾಗಿತ್ತು.

ಪ್ರಕರಣದಲ್ಲಿ ಕಳುವಾದ ದ್ವಿಚಕ್ರ ವಾಹನ ಮತ್ತು ಆರೋಪಿತರ ಪತ್ತೆಗಾಗಿ  ಎಸ್ಪಿ ಮಿಥುನ್ ಕುಮಾರ್ ಜಿ ಕೆ, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮಾರೆಡ್ಡಿ ಮತ್ತು  ಕಾರಿಯಪ್ಪ ಎ.ಜಿ,  ಮಾರ್ಗದರ್ಶದಲ್ಲಿ, ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ,  ಮತ್ತು ಹೊಸನಗರ ಸಿಪಿಐ ಗುರಣ್ಣ ಹೆಬ್ಬಾರ್  ಮೇಲ್ವಿಚಾರಣೆಯಲ್ಲಿ,   ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರವೀಣ್ ನೇತೃತ್ವದಲ್ಲಿ ಸಿಬ್ಬಂದಿಗಳಾದ  ಸಿ.ಹೆಚ್.ಸಿ ಚನ್ನಪ್ಪ ಮತ್ತು ಸಿಪಿಸಿ ಸಂತೋಷ್ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು. 

ತನಿಖಾ ತಂಡವು ಅ.17 ರಂದು ಆರೋಪಿತರಾದ  ಸಾದಿಕ್ ವುಲ್ಲಾ @ ಚಮಟಿ, 21 ವರ್ಷ, ಅಣ್ಣಾ ನಗರ ಶಿವಮೊಗ್ಗ  ಮತ್ತು ವಿವೇಕ್ @ ಸಿದ್ದು 23 ವರ್ಷ  ಅಣ್ಣ ನಗರ ಶಿವಮೊಗ್ಗ, ಇವರನ್ನು ಬಂಧಿಸಲಾಗಿದೆ. ಆರೋಪಿತರಿಂದ ಅಂದಾಜು ಮೌಲ್ಯ 25,000/- ರೂ.ಗಳ BAJAJ CT-100 ದ್ವಿಚಕ್ರವಾಹನವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. 




ಪ್ರಕರಣವನ್ನ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು.‌





Previous Post Next Post