ಬಿಗ್ಬಾಸ್ಗೆ ಬಿಗ್ ಶಾಕ್ ! ಸೀಸನ್ 11 ನಿಲ್ಲಿಸುವಂತೆ ತುರ್ತು ನೋಟಿಸ್ ಜಾರಿ
ಶಿವಮೊಗ್ಗ ಜಿಲ್ಲೆಯ ನ್ಯಾಯಾಲಯದಿಂದ ನೋಟೀಸ್ ಜಾರಿ!
ಶಿವಮೊಗ್ಗ : ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ 11ನೇ ಸೀಸನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸಾಗರ ನ್ಯಾಯಾಲಯದಿಂದ ಕನ್ನಡ ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋಗೆ ತುರ್ತು ನೋಟಿಸ್ ಜಾರಿ ಮಾಡಲಾಗಿದೆ. ಸಾಗರದ ಪ್ರಧಾನ ವ್ಯವಹಾರ ನ್ಯಾಯಾಲಯದಿಂದ (Court) ನೋಟಿಸ್ ಜಾರಿ ಮಾಡಲಾಗಿದ್ದು, ಬಿಗ್ ಬಾಸ್ 11ನೇ ಸೀಸನ್ ಪ್ರಸಾರವನ್ನು ಕಾಯಂ ಅಗಿ ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಕೆಯಾಗಿದೆ.
ಸಾಗರದ ವಕೀಲ ಕೆ.ಎಲ್. ಭೋಜರಾಜ್ ಎಂಬವರು ಅರ್ಜಿ ಸಲ್ಲಿಸಿದ್ದಾರೆ. ವ್ಯವಹಾರ ಪ್ರಕ್ರಿಯಾ ಸಂಹಿತೆ ಆದೇಶ 39 ನಿಯಮ 1 ಮತ್ತು 2 ರೆಡ್ ವಿತ್ ಸೆಕ್ಷನ್ 151ರ ಪ್ರಕಾರ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯ ವಿಚಾರಣೆ ಕೈಗೊಂಡಿರುವ ಕೋರ್ಟ್ ಈ ಹಿನ್ನೆಲೆಯಲ್ಲಿ ಸಿವಿಲ್ ಕಾರ್ಯವಿಧಾನದ ಕೋಡ್ ಕಾಯಿದೆ U/sec.26, Order7 rule1 ಅಡಿಯಲ್ಲಿ ನೋಟಿಸ್ ಜಾರಿ ಮಾಡಿದೆ. ಕಲರ್ಸ್ ಕನ್ನಡ ವಾಹಿನಿಯ ನಿರ್ಮಾಪಕರು ಹಾಗೂ ಸಂಪಾದಕರಿಗೆ ತುರ್ತು ನೋಟಿಸ್ ಜಾರಿ ಮಾಡಲಾಗಿದೆ.
ಅಕ್ಟೋಬರ್ 28 ರಂದು ಅರ್ಜಿಯ ವಿಚಾರಣೆ ನಡೆಯಲಿದೆ. ಇಂದಿಗೆ 19 ದಿನ ಕಳೆದಿರುವ ಬಿಗ್ ಬಾಸ್ 11ನೇ ಸೀಸನ್ ಇಂಟ್ರೆಸ್ಟಿಂಗ್ ಆಗಿಯೇ ಮೂಡಿ ಬರುತ್ತಿದೆ. ಆದರೆ ಶೋನಲ್ಲಿ ಆರಂಭದಿಂದಲೇ ಜಗಳ ಶುರುವಾಗಿದೆ.
ಕಾರ್ಯಕ್ರಮದ ವಿರುದ್ಧ ಅನೇಕ ಆರೋಪಗಳೂ ಕೇಳಿ ಬಂದಿವೆ. ಕಳೆದ ವಾರ ‘ಬಿಗ್ ಬಾಸ್’ ಮನೆಯಲ್ಲಿ ಮಹಿಳಾ ಸ್ಪರ್ಧಿಗಳ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ವಕೀಲೆ ಮಹಿಳಾ ಆಯೋಗಕ್ಕೆ ಪತ್ರದ ಮೂಲಕ ದೂರು ನೀಡಿದ್ದರು. ಇದೇ ಶೋನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡು ನರಕ-ಸ್ವರ್ಗ ಎಂಬ ಪರಿಕಲ್ಪನೆಯನ್ನು ಅರ್ಧಕ್ಕೆ ನಿಲ್ಲಿಸಿ ಬಿಗ್ ಬಾಸ್ ಎಲ್ಲಾ ಸ್ಪರ್ಧಿಗಳಿಗೂ ಒಂದೇ ಮನೆಯಲ್ಲಿ ಇರುವ ಅವಕಾಶ ಕಲ್ಪಿಸಿಕೊಟ್ಟಿತ್ತು. ಬಿಗ್ಬಾಸ್ ಮನೆಯೊಳಗೆ ಡೇ ವನ್ನಿಂದಲೂ ಜಗಳ ಜೋರಾಗಿದೆ. ಲಾಯರ್ ಜಗದೀಶ್ ಅಂತೂ ಸಹ ಸ್ಪರ್ಧಿಗಳಿಗೆ ಅಗೌರವದಿಂದ ಮಾತನಾಡುವುದು ಕಾಮನ್ ಆಗಿದೆ. ಇತ್ತೀಚೆಗೆ ಹೆಣ್ಮಕ್ಕಳ ಮೇಲೆ ಅವಹೇಳನಾಕಾರಿ ಪದವನ್ನು ಕೂಡಾ ಬಳಸಿದ್ದು ಬಿಗ್ ಬಾಸ್ ಮನೆಯಿಂದ ಹೊರ ಕಳಿಸಿದ್ದಾರೆ ಎಂದು ಹೇಳಲಾಗಿದೆ ಅದು ನಿಜವೇ ಇಲ್ಲವೇ ಎಂಬುದಕ್ಕೆ ಇಂದು ಸ್ಪಷ್ಟನೇ ಸಿಗಲಿದೆ.