ತಾಲ್ಲೂಕು ಪಂಚಾಯಿತಿ ಆಡಳಿತ ವಿರುದ್ಧ ಸಿಡಿದೆದ್ದ ಕೆಡಿಪಿ ಸದಸ್ಯ - ಸಭೆ ಬಹಿಷ್ಕರಿಸಿ ಹೊರನಡೆದ ಪೂರ್ಣೇಶ್ ಕೆಳಕೆರೆ
ಜಯಚಾಮರಾಜೇಂದ್ರ ಆಸ್ಪತ್ರೆಯ ವಿಚಾರವೇ ಹೈಲೆಟ್
ತೀರ್ಥಹಳ್ಳಿ : ಕೆಡಿಪಿ ಸಭೆಯ ನಿರ್ಣಯಕ್ಕೆ ಯಾವುದೇ ಬೆಲೆ ಇಲ್ಲ. ಸಭಾ ನಿರ್ಣಯದಂತೆ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಅಧಿಕಾರಿಗಳೇ ಸಭೆಗೆ ಬರೋಲ್ಲ, ನಾವೇಕೆ ಸಭೆಯಲ್ಲಿ ಭಾಗವಹಿಸಬೇಕು ಎಂದು ಕೆಡಿಪಿ ಸದಸ್ಯ ಪೂರ್ಣೇಶ್ ಕೆಳಕೆರೆ ಪ್ರಶ್ನಿಸಿದರು.
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹಲವಾರು ವಿಚಾರದ ವಿಷಯವಾಗಿ ವಾಕ್ಸಮರ ನಡೆಯಿತು..
ಆಗ ಶಾಸಕ, ಸಭೆಯ ಅಧ್ಯಕ್ಷ ಆರಗ ಜ್ಞಾನೇಂದ್ರ ಮಧ್ಯೆ ಪ್ರವೇಶಿಸಿ ಇದು ಪ್ರತಿಭಟನೆ ಅಲ್ಲ, ಅನುಪಾಲನ ವರದಿ ಮೇಲೆ ಚರ್ಚೆ ಮಾಡು ಎಂಬುದಾಗಿ ತಾಕೀತು ಮಾಡಿದರು. ಪ್ರತಿಯಾಗಿ ಪೂರ್ಣೇಶ್ ಸಭೆಯ ಸದಸ್ಯ ಕಾರ್ಯದರ್ಶಿ, ತಾಲ್ಲೂಕು ಪಂಚಾಯಿ ಇಓ ಶೈಲಾ ಅವರನ್ನು ಹೊರಗೆ ಕಳಿಸಬೇಕು ಎಂದು ಒತ್ತಾಯಿಸಿದರು. ಅದೆಲ್ಲ ಆಗಲ್ಲ ನೀನು ಸ್ವಲ್ಪ ಕುತ್ಕೋ ಎಂದು ಆರಗ ಗದರುವ ಧ್ವನಿಯಲ್ಲಿ ಹೇಳುತ್ತಿದ್ದಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೂರ್ಣೇಶ್ ಕೆಳಕೆರೆ ದಿಕ್ಕಾರ... ದಿಕ್ಕಾರ... ಇಓ ಮೇಡಂಗೆ ದಿಕ್ಕಾರ. ನಾನು ಸಭೆಯನ್ನು ಬಹಿಷ್ಕರಿಸುತ್ತಿದ್ದೇನೆ ಎಂಬುದಾಗಿ ಹೇಳಿ ಸಭೆಯಿಂದ ಹೊರ ನಡೆದರು.
ಕನ್ನಂಗಿಯಿಂದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದ 13 ವಾರದ ಗರ್ಭಿಣಿ ಸಾವು..! DHO ಗೆ ತರಾಟೆಗೆ ತೆಗೆದುಕೊಂಡ ಆರಗ ಜ್ಞಾನೇಂದ್ರ
ನಂತರ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾತನಾಡುತ್ತ 13 ವಾರದ ಗರ್ಭಿಣಿ ಮಹಿಳೆಯೊಬ್ಬರು ಇಂದು ಬೆಳಗ್ಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.. ಕನ್ನಂಗಿ ಆಸ್ಪತ್ರೆಯಿಂದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಎಂಬುದಾಗಿ ಹೇಳುತ್ತಿದ್ದಂತೆ ಶಾಸಕ ಆರಗ ಜ್ಞಾನೇಂದ್ರ DHO ಗೆ ತರಾಟೆಗೆ ತೆಗೆದುಕೊಂಡರು.. ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ಹೋಗಿ ಅದರ ಬಗ್ಗೆ ಮಾಹಿತಿ ಪಡೆದು ತಮಗೆ ಸಂಪೂರ್ಣ ಮಾಹಿತಿ ನೀಡುವಂತೆ ತಿಳಿಸಿದರು..
ಜೆಸಿ ಆಸ್ಪತ್ರೆಯಿಂದ ಖಾಸಗಿ ಲ್ಯಾಬ್ ಗೆ ಕಳುಹಿಸುತ್ತಿರುವ ಬಗ್ಗೆ ಸಭೆಯಲ್ಲಿ ಆಕ್ರೋಶ
ಇನ್ನು ಸಭೆಯಲ್ಲಿ ಜೆಸಿ ಆಸ್ಪತ್ರೆಯಿಂದ ಖಾಸಗಿ ಲ್ಯಾಬ್ ಗೆ ಪ್ರತಿಯೊಬ್ಬ ರೋಗಿಗಳನ್ನ ಕಳುಹಿಸಿಕೊಡುತ್ತಾರೆ. ಅಲ್ಲದೆ ಲ್ಯಾಬ್ ಗಳಲ್ಲಿ 2000 ದಿಂದ 5000 ರದವರೆಗೆ ಹಣ ಪಡೆಯುತ್ತಿದ್ದಾರೆ. ಅದರಲ್ಲಿ ವೈದ್ಯರಿಗೂ ಕಮಿಷನ್ ಎಂಬ ಮಾಹಿತಿ ಇದೆ. ಇದೆಲ್ಲವನ್ನು ಕೂಡಲೇ ಸರಿಪಡಿಸದೇ ಇದ್ದರೆ ಬೇರೆ ತರವೇ ಆಗುತ್ತದೆ. ಓಪಿಡಿಯಲ್ಲೂ ಹಣ ಕೇಳುತ್ತಾರೆ ಎಂಬ ಆರೋಪ ಬಂದಿದೆ. ಡ್ರಿಪ್ ಹಾಕಿದರೆ ನರ್ಸ್ ಗಳು 100 ರೂ ಹಣ ಕೇಳುತ್ತಾರೆ. ಇದನ್ನ ಈ ಕೊಡಲೇ ಸರಿಪಡಿಸದೆ ಇದ್ದರೆ ಸರ್ಕಾರಿ ಆಸ್ಪತ್ರೆ ಬದಲು ಅದು ನರ್ಸಿಂಗ್ ಹೋಂ ಆಗಿ ಹೋಗುತ್ತದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಹಣದ ಅವಶ್ಯಕತೆ ಇದ್ದರೆ ನಾನೇ ಭಿಕ್ಷೆ ಬೇಡಿ ತಂದು ಕೊಡುತ್ತೇನೆ.. ಯಾವುದೇ ವೈದ್ಯರು ಅಥವಾ ನರ್ಸ್ ಹಣ ಕೇಳಿದರೆ ಕೊಡಲೇ ನಮಗೆ ಮಾಹಿತಿ ನೀಡಿ ಎಂದರು..
Tags:
ಆರಗ ಜ್ಞಾನೇಂದ್ರ