ಹಾವು ಕಚ್ಚಿ ಆಟವಾಡುತ್ತಿದ್ದ ಎರಡು ವರ್ಷದ ಮಗು ಸಾವು..!!
ಸಾಗರ: ಹಾವು ಕಚ್ಚಿ ಎರಡು ವರ್ಷದ ಮಗು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಸಾಗರದ ಕಲಸಿ ಪೇಟೆಯಲ್ಲಿ ನಡೆದಿದೆ..
ಯುನೈ (2 ವರ್ಷ ) ಎಂಬ ಪುಟ್ಟ ಮಗು ಆಟವಾಡುತ್ತಿದ್ದ ವೇಳೆ ಹಾವು ಕಚ್ಚಿದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಮನೆಯಂಗಳದಲ್ಲಿ ನಲಿಯುತ್ತಾ, ಪುಟ್ಟ ಹೆಜ್ಜೆಗಳನ್ನಿಡುತ್ತಾ ಬದುಕು ಅರಳಿಸಬೇಕಿದ್ದ ಕಂದಮ್ಮ ಹೀಗೆ ಅಕಾಲಿಕವಾಗಿ ಸಾವಿಗೀಡಾಗಿರುವುದು ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ. ಮಗುವಿನ ಸಾವಿನ ಸುದ್ದಿ ತಿಳಿದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.
Tags:
ಸಾಗರ ಸುದ್ದಿ