ಆಯುರ್ವೇದ ಚಿಕಿತ್ಸೆ ಸ್ವಲ್ಪ ನಿಧಾನ ಆಗಬಹುದು ಆದರೆ ನಮ್ಮ ಆರೋಗ್ಯಕ್ಕೆ ಅದು ಬಹಳ ಒಳ್ಳೆಯದು - ಅರ್ ಎಂ ಮಂಜುನಾಥ್ ಗೌಡ
ತೀರ್ಥಹಳ್ಳಿ : ಆಯುರ್ವೇದ ಯಾವುದೇ ಅಡ್ಡ ಪರಿಣಾಮ ಇಲ್ಲದ ಪದ್ಧತಿ. ಯಾವುದೇ ಕಾಯಿಲೆಗಳಿಗೂ ಇಲ್ಲಿ ಚಿಕಿತ್ಸೆ ಇದೆ.. ಭಾರತದಲ್ಲೇ ಅದರ ಮೂಲ ಹುಟ್ಟಿರುವುದು.. ಇಂದಿಗೂ ಅದರ ಬಳಕೆ ಇದೆ.. ಆಯುರ್ವೇದ ಎಂದರೆ ಗಿಡ ಮೂಲಿಕೆ ಎಂದುಕೊಳ್ಳುತ್ತೇವೆ.. ಮಲೆನಾಡಿನಲ್ಲಿ ಸಿಗುವ ಎಷ್ಟೋ ಗಿಡ ಮೂಲಿಕೆಯಿಂದ ನಮ್ಮ ಆರೋಗ್ಯ ಸುಧಾರಿಸುತ್ತದೆ ಎಂಬುದಾಗಿ ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾದ ಅರ್ ಎಂ ಮಂಜುನಾಥ್ ಗೌಡ ಹೇಳಿದರು..
ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಶಿವಮೊಗ್ಗ ಹಾಗೂ ಜಿಲ್ಲಾ ಆಯುಷ್ ಇಲಾಖೆ ಹಾಗೂ ತಾಲೂಕು ಪಂಚಾಯತ್ ಇವರ ಸಹಯೋಗದಲ್ಲಿ ಆರೋಗ್ಯ ಶಿಬಿರ ಉದ್ಘಾಟನೆ ಮಾಡಿ ಮಾತನಾಡಿದರು..
ಕೆಸುವಿನ ಎಲ್ಲಾ ಪದಾರ್ಥ ತಿಂದರೂ ಸಹ ಆರೋಗ್ಯಕ್ಕೆ ಒಳ್ಳೆಯದು.. ನಮ್ಮ ಮಲೆನಾಡಿನಲ್ಲಿ ಸಿಗುವ ಎಷ್ಟೋ ಪದಾರ್ಥಗಳು ಬಹುತೇಕ ಆರೋಗ್ಯಕ್ಕೆ ಒಳ್ಳೆಯದು.. ವರ್ಷಕ್ಕೆ ಅಂತಹದ್ದು ಒಂದೆರಡು ಬಾರಿ ತಿಂದರೆ ಬಾರಿ ಒಳ್ಳೆಯದು.. ನಾವು ಅದನ್ನು ಬಿಟ್ಟು ಅಂಗಡಿ ಪದಾರ್ಥ ತಿನ್ನುವುದರಿಂದಲೇ ನಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಆಗಿರುವುದು, ಆಯುರ್ವೇದ ಚಿಕಿತ್ಸೆ ಸ್ವಲ್ಪ ನಿಧಾನ ಆಗಬಹುದು ಆದರೆ ನಮ್ಮ ಆರೋಗ್ಯಕ್ಕೆ ಅದು ಬಹಳ ಒಳ್ಳೆಯದು ಎಂದರು..
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ಶೈಲಾ, ರಾಘವೇಂದ್ರ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ, ಉಪಾಧ್ಯಕ್ಷೆ ಗೀತಾ ರಮೇಶ್, ಡಿವೈಎಸ್ ಪಿ ಡಾ. ಭಾನುಪ್ರಕಾಶ್ ಸೇರಿ ಹಲವರು ಉಪಸ್ಥಿತರಿದ್ದರು..
Tags:
ತೀರ್ಥಹಳ್ಳಿ ಸುದ್ದಿ