ದಸರಾ ಕಾರ್ಯಕ್ರಮಕ್ಕೆ ಗ್ರಾಮಪಂಚಾಯಿತಿಯಿಂದ ಆರ್ಥಿಕ ಸಹಾಯ ಕೇಳಿದ ಆರಗ ಜ್ಞಾನೇಂದ್ರ Araga Jnanendra

ದಸರಾ ಕಾರ್ಯಕ್ರಮಕ್ಕೆ ಗ್ರಾಮಪಂಚಾಯಿತಿಯಿಂದ ಆರ್ಥಿಕ ಸಹಾಯ ಕೇಳಿದ ಆರಗ ಜ್ಞಾನೇಂದ್ರ 

ತೀರ್ಥಹಳ್ಳಿ : ನಾಡಹಬ್ಬ ದಸರಾ ಮಹೋತ್ಸವಕ್ಕೆ ಈಗಾಗಲೇ ಕ್ಷಣಗಣನೆ ಆರಂಭವಾಗಿದ್ದು ಈ ಬಾರಿ ದಸರಾ ಸಂಚಾಲಕರಾಗಿ ಸೊಪ್ಪುಗುಡ್ಡೆ ರಾಘವೇಂದ್ರ ಅವರು ಆಯ್ಕೆಯಾಗಿದ್ದಾರೆ.. ಈ ಬಾರಿ ಸಹ ದಸರಾ ಅತ್ಯಂತ ವೈಭವದಿಂದ ನಡೆಯಲಿದ್ದು ದಸರಾ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಆಡಳಿತದ ವತಿಯಿಂದ ಆರ್ಥಿಕ ಸಹಾಯ ಮಾಡಿ ಎಂದು ಶಾಸಕ ಆರಗ ಜ್ಞಾನೇಂದ್ರ ಕೇಳಿದರು..

ಕೆಡಿಪಿ ಸಭೆಗೂ ಮುನ್ನ ದಸರಾ ಕಾರ್ಯಕ್ರಮದ ಸಭೆಯೊಂದನ್ನು ಅಧಿಕಾರಿಗಳ ಜೊತೆಗೆ ನಡೆಸಿ ಪ್ರತಿಯೊಂದು ಗ್ರಾಮ ಪಂಚಾಯಿತಿಯ ಆಡಳಿತದ ವತಿಯಿಂದ 5000 ರೂ ಹಣಗಳನ್ನ ನೀಡುವಂತೆ ಮನವಿ ಮಾಡಿದರು.. ಸರಿಸುಮಾರು 15ರಿಂದ 20 ಲಕ್ಷ ರೂ ವೆಚ್ಚದಲ್ಲಿ ದಸರಾ ಈ ಭಾರಿ ನಡೆಯಲಿದೆ.. ಹಾಗೆಯೇ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಸಹ 5,000 ಹಣಗಳನ್ನು ನೀಡುವಂತೆ ಸಭೆಯಲ್ಲಿ ಮನವಿ ಸಲ್ಲಿಸಲಾಯಿತು..

ನಮ್ಮೂರ ಈ ದಸರಾ ಹಬ್ಬವನ್ನು ಅತ್ಯಂತ ವೈಭವದಿಂದ ನಡೆಸಲು ಪ್ರತಿಯೊಬ್ಬರ ಸಹಾಯ ಅವಶ್ಯಕತೆಯಿದ್ದು ಪ್ರತಿಯೊಬ್ಬರೂ ಸಹಕರಿಸಿ ಪ್ರಸಾರವನ್ನ ಅತ್ಯಂತ ವೈಭವದಿಂದ ನಡೆಸೋಣ ಎಂದು ಹೇಳಿದರು..
Previous Post Next Post