ರಾಷ್ಟ್ರಕ್ಕಾಗಿ ನಾನು ಬದುಕಬೇಕು ಅನ್ನುವಂತಹ ಭಾವನೆ ನಮ್ಮ ಯುವಜನರಲ್ಲಿ ನಿರ್ಮಾಣ ಆಗಬೇಕು - ಆರಗ ಜ್ಞಾನೇಂದ್ರ
ತೀರ್ಥಹಳ್ಳಿ : ನೀವೆಲ್ಲಾ ನೋಡುತ್ತಿದ್ದೀರಾ, ತೀರ್ಥಹಳ್ಳಿಯನ್ನ ಅಭಿವೃದ್ಧಿಯನ್ನು ಮಾಡಿದ್ದೇವೆ. ಬಹಳ ಜನ ಹೇಳುತ್ತಾರೆ ಅವರು ಏನು ಮಾಡಿದ್ದಾರೆ ಅಂತಾ, ಆ ರೀತಿ ಹೇಳುವವರಿಗೆ ಕಣ್ಣಿಲ್ಲ, ಅವರಿಗೆ ಕಣ್ಣಾಸ್ಪತ್ರೆಗೆ ಕಳುಹಿಸಬೇಕು. ಕಣ್ಣು ಇಲ್ಲದವರಿಗೆ ಮಾತ್ರ ಇಲ್ಲಿನ ಅಭಿವೃದ್ಧಿ ಕಾಣೋದಿಲ್ಲ. ಕಣ್ಣಿದ್ದವರಿಗೆ ಯಾವ ಪಕ್ಷ ಆಗಿರಲಿ, ಯಾವ ಜಾತಿಯಾಗಿರಲಿ ಅವರಿಗೆ ಕೆಲಸ, ಆ ಅಭಿವೃದ್ಧಿ ಕಾಣುತ್ತದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು..
ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆಯ ಅಂಗವಾಗಿ ಸೇವಾ ಸಂಕಲ್ಪ ಅಭಿಯಾನದ ಪ್ರಯುಕ್ತ ನಡೆದ ಸೈಕಲ್ ಜಾಥಾದಲ್ಲಿ ಶಾಸಕ ಆರಗ ಜ್ಞಾನೇಂದ್ರ ಭಾಗಿಯಾಗಿ ಮಾತನಾಡಿದರು..
ನಮಗೆ ಅಧಿಕಾರ ಕೊಡುವುದು ಭಗವಂತ, ಈ ರಾಜ್ಯದ ಜನ ಈ ಕ್ಷೇತ್ರದ ಜನ ಅಧಿಕಾರ ಕೊಡುವುದು ಏನಾದರೂ ಒಂದು ಸ್ವಲ್ಪ ಅಭಿವೃದ್ಧಿ ಮಾಡುವ ಸಲುವಾಗಿ . ಭಾಷಣ ಮಾಡಲಿಕ್ಕೆ ಅಲ್ಲ, ಬೇರೆಯವರಿಗೆ ಹಿತವಾದ ಹೇಳಲಿಕ್ಕೆ ಅಲ್ಲ. ಜೀವನ ಸವಿಸಲಿಕ್ಕೆ ಅಲ್ಲ, ಅಭಿವೃದ್ಧಿಗಾಗಿ ಅಧಿಕಾರ, ಇದನ್ನು ಯೋಚನೆ ಮಾಡಿಕೊಂಡು ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಕೆಲಸ ಮಾಡಿದ್ದೇನೆ.. ರಾಷ್ಟ್ರಕ್ಕಾಗಿ ನಾನು ಬದುಕಬೇಕು ಅನ್ನುವಂತಹ ಭಾವನೆ ನಮ್ಮ ಯುವಜನರಲ್ಲಿ ನಿರ್ಮಾಣ ಆದರೆ, ಅಷ್ಟರಮಟ್ಟಿಗೆ ಈ ತಿಂಗಳು ನಾವು ಮಾಡಿರ್ತಕ್ಕಂತಹ ಸೇವಾ ಅಭಿಯಾನ ಸಾರ್ಥಕ ಅಂತ ನಾನು ಭಾವಿಸುತ್ತೇನೆ ಎಂದರು..
ಮೋಟಾರ್ ಸೈಕಲ್ ಬೇಕಾದರೆ ಸೇರಿಸಬಹುದು, ಆದರೆ ಸೈಕಲ್ ಹೆಂಗೆ ಸೇರಿಸೋದು ಎಂಬುದಾಗಿ ಹೇಳಿದ್ದೆ, ಎಷ್ಟೋ ಜನರ ಬಳಿ ಸೈಕಲ್ ಇಲ್ಲ, ಅದರಲ್ಲೂ ಮೂಲೆ ಹಿಡಿದು ಹೋಗಿತ್ತು, ಈ ಕಾರ್ಯಕ್ರಮ ಅನೌನ್ಸ್ ಆದಮೇಲೆ ಏನೇನೋ ಮಾಡಿ ಮೂಲೆ ಹಾಕಿದ ಸೈಕಲ್‌ಗಳನ್ನು ರಿಪೇರಿ ಮಾಡಿಕೊಂಡು ಇವತ್ತು ತಂದಿದ್ದೀರಿ. ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರು ಸಾಲದು , ಎಷ್ಟು ಅಭಿನಂದನೆಗಳನ್ನು ಹೇಳಿದ್ರು ಸಾಲದು.ಕೇವಲ ತೀರ್ಥಹಳ್ಳಿ ಅಲ್ಲ, ಇಡೀ ರಾಷ್ಟ್ರದ ಮೂಲೆ ಮೂಲೆಗಳಲ್ಲಿ ಈ ಅಭಿಯಾನವನ್ನು ನಡೆಸಿದ್ದೇವೆ. ಕೋಟಿ ಕೋಟಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಇದರಲ್ಲಿ ಭಾಗವಹಿಸಿದ್ದಾರೆ. ಇಂದು ಈ ಅಭಿಯಾನದ ಕೊನೆಯ ದಿನ. ಆದರೆ ಕೊನೆಯ ದಿನ ಆಗಬಾರದು, ಇದು ಆರಂಭದ ದಿನ ಆಗಬೇಕು. ನಮ್ಮ ಬದುಕಿನಲ್ಲಿ ಪ್ರತಿದಿನವೂ ರಾಷ್ಟ್ರಕ್ಕಾಗಿ ನಾನು ಏನಾದರೂ ಮಾಡಬೇಕು ಎಂಬುದನ್ನು ಬೆಳಸಿಕೊಳ್ಳಬೇಕು ಎಂದರು..
ಮೋದಿಯವರ ಅಧಿಕಾರ ಅವಧಿ ಎಂದರೆ ದೇಶದ ಬದುಕನ್ನು ಬದಲಾಯಿಸಿರತಕ್ಕಂತದ್ದು. ನಮ್ಮ ಕಾಂಗ್ರೆಸ್ಸಿನ 62 ವರ್ಷದ ದುರಾಡಳಿತ, ಈ ದೇಶದ ಜನರ, ಕೆಲವರು ಧರ್ಮದವರನ್ನು ತುಷ್ಟೀಕರಣ ಮಾಡಿ ಈ ದೇಶವನ್ನ ಭಾರತ - ಪಾಕಿಸ್ತಾನ ಎಂದು
42ರಲ್ಲಿ ಭಾಗ ಮಾಡಿದರು..ಜನ ಒಬ್ಬರನ್ನು ನೋಡಿದರೆ ಇನ್ನೊಬ್ಬರು ಅನುಮಾನದಿಂದ ಬದುಕುವ ಹಾಗೆ ಆಯಿತು.
ಪಾಕಿಸ್ತಾನಿ ಪ್ರಚೋದಿತವಾಗಿರತಕ್ಕಂತಹ ಭಯೋತ್ಪಾದಕರು ಈ ರಾಷ್ಟ್ರದಲ್ಲಿ ಪಟಾಕಿಯನ್ನು ಹಾರಿಸಿದ ಹಾಗೆ ಮನಬಂದಂತೆ ಬಾಂಬುಗಳನ್ನು ಹಾರಿಸುತ್ತಿದ್ದರು. ಸಾವಿರಾರು ಜನ ಅಮಾಯಕರ ಹೆಣ ಉರುಳಿಸ್ತಿದ್ದರು. ಇಂತಹ ಸಂದರ್ಭದಲ್ಲಿ ಮೋದಿ ಅಧಿಕಾರ ವಹಿಸಿಕೊಂಡಿದ್ದಾರೆ. ಎಲ್ಲಿದಾವೆ ಇವತ್ತು ಬಾಂಬು? ಎಲ್ಲಿದ್ದಾರೆ ಇವತ್ತು ಭಯೋತ್ಪಾದಕರು? ಎಲ್ಲಿದ್ದಾರೆ ಇವತ್ತು ನಕ್ಸಲೈಟ್ಸ್?
ಈ ರಾಷ್ಟ್ರದ ಜನ ಶಾಂತಿಯಿಂದ ಸುವ್ಯವಸ್ಥೆಯಿಂದ ಬದುಕು ಹಾಗೆ ಮಾಡಿದ್ದಾರಲ್ಲ. ಇದಕ್ಕಾಗಿ ಮೋದಿ ಅವರಿಗೆ ಅಭಿನಂದನೆ ಎಂದರು.
Tags:
ಆರಗ ಜ್ಞಾನೇಂದ್ರ