ಚೆಸ್ ನಲ್ಲಿ ಸತತ 5 ನೇ ಬಾರಿ ಭಂಡಿಗಡಿಯ ಮಕ್ಕಳು ರಾಜ್ಯ ಮಟ್ಟಕ್ಕೆ ಆಯ್ಕೆ Chess

ಚೆಸ್ ನಲ್ಲಿ ಸತತ 5 ನೇ ಬಾರಿ ಭಂಡಿಗಡಿಯ ಮಕ್ಕಳು ರಾಜ್ಯ ಮಟ್ಟಕ್ಕೆ ಆಯ್ಕೆ

 
ಚೆಸ್‌ ನಲ್ಲಿ ಸತತ 5 ನೇ ಬಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಭಂಡಿಗಡಿಯ ಕುಮಾರಿ ಕೃತಿಕ ಹಾಗೂ ಕುಮಾರಿ ಮೆಹನಾಜ್ ಐತಿಹಾಸಿಕ ಸಾಧನೆಗೈದಿದ್ದಾರೆ. 

ಮಲೆನಾಡಿನ ಪುಟ್ಟ ಗ್ರಾಮವಾದ ಭಂಡಿಗಡಿಯಲ್ಲಿ ಯಾವುದೇ ಅತ್ಯುನ್ನತ ಮಟ್ಟದ ತರಬೇತಿಯ ಸೌಲಭ್ಯ ಇರದಿದ್ದರೂ ಸಹ ಪ್ರಾಥಮಿಕ ಹಂತದಲ್ಲಿ  ಭಂಡಿಗಡಿಯಂತಹ ಪುಟ್ಟ ಊರಿನಲ್ಲಿ ಚೆಸ್‌ ಆಟವನ್ನು ಆರಂಭಿಸಿ ಚೆಸ್ ನಲ್ಲಿ ನೂರಾರು ವಿದ್ಯಾರ್ಥಿಗಳನ್ನು ಜಿಲ್ಲೆ ಹಾಗು ರಾಜ್ಯ ಮಟ್ಟಕ್ಕೆ ಕೊಂಡೊಯ್ದ ಖ್ಯಾತಿಯ ದೈಹಿಕ ಶಿಕ್ಷಕರಾದ ನಾಗರಾಜ್ ಸರ್ ರವರಿಂದ ತರಬೇತಿ ಪಡೆದು ಭಂಡಿಗಡಿಯ ಪ್ರಾಥಮಿಕ ಶಾಲೆಯಿಂದ 2 ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ, ನಂತರ  ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರಾದ ಅನಿಲ್ ಸರ್ ರವರ ಮಾರ್ಗದರ್ಶನ ಹಾಗೂ ತರಬೇತಿ ಪಡೆದ ಈ ಮಕ್ಕಳು ಭಂಡಿಗಡಿಯ ಅತ್ಯುತ್ತಮ ಪ್ರತಿಭೆಯಾಗಿರುವ ಕುಮಾರ ಆದಿತ್ಯ ಶರ್ಮ ಇವರಿಂದ ನಿತ್ಯ ತರಬೇತಿ ಪಡೆಯುವುದರೊಂದಿಗೆ ತೀರ್ಥಹಳ್ಳಿಯ ನಿರಂತರ ಚೆಸ್ ತರಬೇತಿ ಕೇಂದ್ರದ ನಾಗರಾಜ್ ಸರ್ ರವರ ಸಲಹೆ ಹಾಗೂ ಪ್ರೊತ್ಸಾಹದಿಂದ ಈ ನಮ್ಮ ಹೆಮ್ಮೆಯ ಕೃತಿಕ ಹಾಗು ಮೆಹನಾಜ್ ಸತತ 5 ವರ್ಷಗಳಿಂದ ರಾಜ್ಯ ಮಟ್ಟವನ್ನು ಪ್ರವೇಶಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ.

ಈ ಮಕ್ಕಳ ಸಾಧನೆಗೆ ಸದಾ ಬೆನ್ನೆಲುಬಾಗಿ ನಿಂತಿರುವ ಅವರ ಪೋಷಕರ ತ್ಯಾಗ ಹಾಗೂ ಪ್ರೋತ್ಸಾಹ ಅತ್ಯಂತ ಶ್ಲಾಘನೀಯವಾಗಿದೆ. ಈ ನಮ್ಮ ಮಲೆನಾಡಿನ ಹೆಮ್ಮೆಯ ಮಕ್ಕಳು ರಾಜ್ಯಮಟ್ಟದಲ್ಲೂ ಗೆಲುವು ಸಾಧಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಚಿಕ್ಕಮಗಳೂರು ಜಿಲ್ಲೆಗೆ ಕೀರ್ತಿ ತರುವಂತಾಗಲಿ ಎಂದು ಆಶಿಸುತ್ತ ಈ ನಮ್ಮ ಹೆಮ್ಮೆಯ ಮಕ್ಕಳಿಗೆ ಹೃದಯಪೂರ್ವಕ ಅಭಿನಂದನೆಗಳು..


ಬಾಲಕಿಯರ ಖೋ ಖೋ ಮೈಸೂರು ವಿಭಾಗ ಮಟ್ಟಕ್ಕೆ ಕೊಪ್ಪ ತಾಲೂಕಿನ 4 ಮಕ್ಕಳು ಆಯ್ಕೆ

14 ವರ್ಷ ವಯೋಮಿತಿ ಒಳಗಿನ ಮೈಸೂರು ವಿಭಾಗ ಮಟ್ಟದ  ಖೋ ಖೋ ಪಂದ್ಯಾವಳಿಗೆ ಕೊಪ್ಪ ತಾಲೂಕಿನ 4 ಮಕ್ಕಳು ಆಯ್ಕೆಯಾಗಿದ್ದಾರೆ ಮೊನ್ನೆಯಷ್ಟೇ ಮೂಡಗೆರೆಯಲ್ಲಿ ನೆಡೆದ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಕೊಪ್ಪ ತಾಲೂಕಿನ ಭಂಡಿಗಡಿ ಪ್ರಾಥಮಿಕ ಶಾಲೆಯ ತಂಡ ಕೊಳೂರು ಶಾಲೆಯ ಮೂರು ಮಕ್ಕಳೊಂದಿಗೆ ಜಿಲ್ಲಾ ಮಟ್ಟದಲ್ಲಿ  ಕೊಪ್ಪ ತಾಲೂಕನ್ನು ಪ್ರತಿನಿಧಿಸಿ ಅತ್ಯುತ್ತಮ ಪ್ರದರ್ಶನ ತೋರಿ ದ್ವಿತೀಯ ಸ್ಥಾನ ಪಡೆದಿತ್ತು. ಈ ತಂಡದಲ್ಲಿನ ಮಕ್ಕಳಾದ  ಕುಮಾರಿ ಸನ್ಮಿತ, ಕುಮಾರಿ ಮೇಘನ, ಕುಮಾರಿ ಮಾನಸ ಹಾಗು ಕುಮಾರಿ ಅನುಕ್ಷ ಇವರು ಅತ್ಯದ್ಭುತ ಆಟದ ಪ್ರದರ್ಶನ ನೀಡಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿ ಮೈಸೂರಿನಲ್ಲಿ ನೆಡೆಯುವ 14 ವರ್ಷ ವಯೋಮಿತಿ ಒಳಗಿನ  ಮೈಸೂರು ವಿಭಾಗ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ.
ಈ ನಮ್ಮ ಹೆಮ್ಮೆಯ ಮಕ್ಕಳು ವಿಭಾಗ ಮಟ್ಟದಲ್ಲಿ ಜಯಶೀಲರಾಗಿ ಶಾಲೆಗೆ ಹಾಗೂ ಊರಿಗೆ ಕೀರ್ತಿತರುವಂತಾಗಲಿ ಎಂದು ಹಾರೈಸೋಣ..



Previous Post Next Post