ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದ ವಾಗ್ದೇವಿ ಕಾಲೇಜು ವಿದ್ಯಾರ್ಥಿಗಳು
ತೀರ್ಥಹಳ್ಳಿ : ಸೆಪ್ಟೆಂಬರ್ 1 ಮತ್ತು 2 ರಂದು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಸ.ಪ.ಪೂ ಕಾಲೇಜು ಮಾಳೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಬಾಲಕ-ಬಾಲಕಿಯರ ಕ್ರೀಡಾಕೂಟದಲ್ಲಿ ವಾಗ್ದೇವಿ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಅತ್ಯಂತ ರೋಚಕವಾಗಿ ಆಟವಾಡಿ ಎಲ್ಲಾ ಪ್ರಶಸ್ತಿಗಳನ್ನು ತಮ್ಮದ್ದಾಗಿಸಿಕೊಳ್ಳುವುದರ ಮೂಲಕ ಬಾಲಕಿಯರ ವೈಯಕ್ತಿಕ ಚಾಂಪಿಯನ್ ಶಿಪ್, ಬಾಲಕಿಯರ ಸಮಗ್ರ ಚಾಂಪಿಯನ್ ಶಿಪ್, ಬಾಲಕರ ಸಮಗ್ರ ಚಾಂಪಿಯನ್ ಶಿಪ್ ಹಾಗೂ ಸರ್ವ ಸಮಗ್ರ ಪ್ರಶಸ್ತಿಯನ್ನು ಪಡೆಯುವುದರ ಮೂಲಕ ಪೋಷಕರ ಮತ್ತು ತೀರ್ಥಹಳ್ಳಿ ಸಮಸ್ತ ಕ್ರೀಡಾಭಿಮಾನಗಳ ಮನಸ್ಸನ್ನು ಗೆದ್ದಿರುತ್ತಾರೆ.
ಇವರ ಈ ಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸದಸ್ಯರು,ಪೋಷಕರು ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿ ಮುಂಬರುವ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಶುಭಹಾರೈಸಿರುತ್ತಾರೆ.
ವಿಜೇತ ವಿದ್ಯಾರ್ಥಿಗಳ ವಿವರ -
ಬಾಲಕಿಯರ ಅಥ್ಲೆಟಿಕ್ಸ್
1. ಅಮೂಲ್ಯ. ಕೆ ಪಿ - ಲಾಂಗ್ ಜಂಪ್ , ಡಿಸ್ಕ್ ಥ್ರೋ & 100 ಮೀ - ಮೊದಲ ಸ್ಥಾನ .
2. ದೀಕ್ಷಾ - 200 ಮೀ -ಮೊದಲ ಸ್ಥಾನ , 800 ಮೀ -ದ್ವಿತೀಯ ಸ್ಥಾನ , ಕ್ರಾಸ್ ಕೌಂಟ್ರಿ - ಮೊದಲ ಸ್ಥಾನ
3. ಶ್ರಾವ್ಯ - ಶಾರ್ಟ್ ಪುಟ್ ಮೊದಲ ಸ್ಥಾನ, 3000ಮೀ ಮೊದಲ ಸ್ಥಾನ ಕ್ರಾಸ್ ಕೌಂಟ್ರಿ -5 ನೇ ಸ್ಥಾನ ಜಾವೆಲಿನ್ ಥ್ರೋ - ದ್ವಿತೀಯ ಸ್ಥಾನ .
4. ಅರ್ಚನಾ 1500 ಮೀ -ದ್ವಿತೀಯ , ಕ್ರಾಸ್ ಕೌಂಟ್ರಿ - ದ್ವಿತೀಯ ಸ್ಥಾನ .
5. ತನಿಷಾ - ಶಾರ್ಟ್ ಪುಟ್ - ದ್ವಿತೀಯ ಸ್ಥಾನ
6. ಶರಣ್ಯ 200 ಮೀ - ತೃತೀಯ ಸ್ಥಾನ .
7. ಅನಘ ಎಸ್ - ಹ್ಯಾಮ್ಮರ್ ಥ್ರೋ -ತೃತೀಯ ಸ್ಥಾನ .
8. ಬಿಂದು -100ಮೀ ತೃತೀಯ , jump ದ್ವಿತೀಯ ಸ್ಥಾನ
9. ರಚನಾ - ಹೈ ಜಂಪ್ - ಮೊದಲ ಸ್ಥಾನ
10. ಸಮೃದ್ಧಿ - ಕ್ರಾಸ್ ಕೌಂಟ್ರಿ - ತೃತೀಯ ಸ್ಥಾನ
ಬಾಲಕಿಯರ ಗುಂಪು ಆಟಗಳು
1. ಕಬಡ್ಡಿ - ಮೊದಲ ಸ್ಥಾನ
2. ಖೋ ಖೋ - ಮೊದಲ ಸ್ಥಾನ
3. ರಿಲೇ -4×100-ಮೊದಲ ಸ್ಥಾನ , 4×400-ದ್ವಿತೀಯ ಸ್ಥಾನ
4.ಥ್ರೋ ಬಾಲ್ - ದ್ವಿತೀಯ ಸ್ಥಾನ
5. ವಾಲಿಬಾಲ್ - ದ್ವಿತೀಯ ಸ್ಥಾನ
ಬಾಲಕರ ಅಥ್ಲೆಟಿಕ್ಸ್
1. ಧನುಷ್ - 1500m - ತೃತೀಯ ಸ್ಥಾನ
2. ಸಮರ್ಥ್ - ಶಾರ್ಟ್ ಪುಟ್ - ದ್ವಿತೀಯ , ಡಿಸ್ಕ್ ಥ್ರೋ - ದ್ವಿತೀಯ ಸ್ಥಾನ
3. ದುಷ್ಯಂತ - ಜಂಪ್ - ದ್ವಿತೀಯ ಸ್ಥಾನ , 400 ಮೀ - ತೃತೀಯ ಸ್ಥಾನ
4. ಪವನ್ - ಶಾರ್ಟ್ ಪುಟ್ - ತೃತೀಯ ಸ್ಥಾನ , ಡಿಸ್ಕ್ ಥ್ರೋ - ಮೊದಲ ಸ್ಥಾನ
5. ಮನೀಶ್ - ಹ್ಯಾಮರ್ ಥ್ರೋ - ದ್ವಿತೀಯ ಸ್ಥಾನ
6. ನಿಯಾಜ್ - ಹ್ಯಾಮರ್ ಥ್ರೋ - ಮೊದಲ ಸ್ಥಾನ
7. ಆಯುಷ್ M - 200 ಮೀ - ಮೊದಲ ಸ್ಥಾನ , ಹೈ ಜಂಪ್ - ಮೊದಲ ಸ್ಥಾನ
8. ಸಾರ್ಥಕ್ - ಹೈ ಜಂಪ್ - ದ್ವಿತೀಯ ಸ್ಥಾನ
9. ಶ್ರೇಯಸ್ - 800 ಮೀ -ತೃತೀಯ , ಕ್ರಾಸ್ ಕೌಂಟ್ರಿ - ದ್ವಿತೀಯ ಸ್ಥಾನ , 3000 ಮೀ
- ಮೊದಲ ಸ್ಥಾನ
10. ವಾಸು - ಕ್ರಾಸ್ ಕೌಂಟ್ರಿ - ತೃತೀಯ ಸ್ಥಾನ.
ಬಾಲಕರ ಗುಂಪು ಆಟಗಳು
1. ವಾಲಿಬಾಲ್ - ಮೊದಲ ಸ್ಥಾನ
2. ಥ್ರೋ ಬಾಲ್ - ಮೊದಲ ಸ್ಥಾನ
3. BBT - ದ್ವಿತೀಯ ಸ್ಥಾನ
4. ರಿಲೇ - 4×100-ಮೊದಲ ಸ್ಥಾನ , 4× 400- ಮೊದಲ ಸ್ಥಾನ
Tags:
ವಾಗ್ದೇವಿ ಸಂಸ್ಥೆ