ತೀರ್ಥಹಳ್ಳಿಯ ಅನ್ನಭಾಗ್ಯ ಗೋದಾಮಿನಿಂದ ಅಕ್ರಮವಾಗಿ ಅಕ್ಕಿ ಸಾಗಾಣಿಕೆ ಅರೋಪ- ಅಕ್ಕಿ ತುಂಬಿದ ಲಾರಿ ಪೊಲೀಸರ ವಶಕ್ಕೆ
ತೀರ್ಥಹಳ್ಳಿ : ಅನ್ನಭಾಗ್ಯ ಗೋದಾಮಿನಿಂದ ಅಕ್ರಮವಾಗಿ ಅಕ್ಕಿ ಸಾಗಾಣಿಕೆ ಅರೋಪ ಬಂದ ಹಿನ್ನಲೆಯಲ್ಲಿ ಅಕ್ಕಿ ತುಂಬಿದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿ ನಡೆದಿದೆ..
ತೀರ್ಥಹಳ್ಳಿಯ ಸುವರ್ಣ ಸಹಕಾರ ಭವನದ ಪಕ್ಕದಲ್ಲಿರುವ ಅನ್ನಭಾಗ್ಯ ಅಕ್ಕಿಯ ಗೋದಾಮಿನಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿತ್ತು. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಅಕ್ಕಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ..
ಭಾನುವಾರ ರಜೆ ದಿನ ಆದ ಕಾರಣ ಆಕ್ಕಿ ಸಾಗಾಟ ಮಾಡುವಂತಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದು ಖಾಸಗಿ ಲಾರಿಯಲ್ಲಿ ಅಕ್ಕಿ ಮೂಟೆಗಳನ್ನ ಸ್ಥಳಾಂತರ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಅರೋಪಿಸಿದ್ದಾರೆ.. ಈ ಹಿನ್ನಲೆಯಲ್ಲಿ ತೀರ್ಥಹಳ್ಳಿಯ 112 ಪೊಲೀಸರು ಆಗಮಿಸಿ ಅಕ್ಕಿ ಸಾಗಿಸಲು ಬಳಸಿದ್ದ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ..
Tags:
ತೀರ್ಥಹಳ್ಳಿ ಸುದ್ದಿ