ಎಚ್ ಎಸ್ ಸುಂದರೇಶ್ ಅವರು ಮಧು ಬಂಗಾರಪ್ಪ ಅವರ ಬಗ್ಗೆ ಮಾಡಿದ ಆರೋಪ - ಜಿಲ್ಲಾ ಉಸ್ತುವಾರಿ ಸಚಿವರು ಸ್ಪಷ್ಟನೆ ಕೊಡಬೇಕು - ನವೀನ್ ಹೆದ್ದೂರು
ತೀರ್ಥಹಳ್ಳಿ : ಸುಂದರೇಶ್ ರವರು ಅವರ ಪಕ್ಷದ ಆಂತರಿಕ ಸಮಸ್ಯೆಗಳ ಕುರಿತು ಮಾತನಾಡಿರುವುದರ ಬಗ್ಗೆ ತಕರಾರಿಲ್ಲ, ಆದರೆ ತನ್ನ ಬಳಿ ಜಿಲ್ಲಾ ಉಸ್ತುವಾರಿ ಸಚಿವರು 25 ಲಕ್ಷ ಲಂಚ ಕೇಳಿದ್ದಾರೆ ಎನ್ನುವುದು ಗಂಭೀರ ಆರೋಪವಾಗಿದ್ದು, ಮಧು ಬಂಗಾರಪ್ಪನವರು ಸಾರ್ವಜನಿಕರಿಗೆ ಸ್ಪಷ್ಟನೆ ಕೊಡಲಿ ಎಂದು ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್ ಆಗ್ರಹಿಸಿದ್ದಾರೆ
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನ ಹಿರಿಯ ಮುಖಂಡ ಹಾಗೂ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ಅಧ್ಯಕ್ಷರಾಗಿರುವ ಹೆಚ್.ಎಸ್ ಸುಂದರೇಶ್ ಸ್ವಪಕ್ಷೀಯರ ವಿರುದ್ಧವೇ ಹೀನಮಾನವಾಗಿ ಬೈದಿದ್ದು, ಈಗ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಈ ಸುದ್ದಿ ಶಿವಮೊಗ್ಗ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದು, ಈ ಕುರಿತು ತೀರ್ಥಹಳ್ಳಿ ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ಸಿನ ಜಿಲ್ಲಾ ನಾಯಕತ್ವದ ವಯಕ್ತಿಕ ವಿಷಯಗಳು ಹಾಗೂ ಅವರ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಏನೇ ಇರಲಿ, ಆದರೆ ಎಚ್. ಎಸ್. ಸುಂದರೇಶ್ರವರು ಅವರ ಪಕ್ಷದ ಆಂತರಿಕ ಸಮಸ್ಯೆಗಳ ಕುರಿತು ಮಾತನಾಡಿರುವುದರ ಬಗ್ಗೆ ತಕರಾರಿಲ್ಲ, ಆದರೆ ತನ್ನ ಬಳಿ ಜಿಲ್ಲಾ ಉಸ್ತುವಾರಿ ಸಚಿವರು 25 ಲಕ್ಷ ಲಂಚ ಕೇಳಿದ್ದಾರೆ ಎನ್ನುವುದು ಗಂಭೀರ ಆರೋಪವಾಗಿದ್ದು, ಮಧು ಬಂಗಾರಪ್ಪನವರು ಸಾರ್ವಜನಿಕರಿಗೆ ಸ್ಪಷ್ಟನೆ ಕೊಡಲಿ ಎಂದು ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್ ಆಗ್ರಹಿಸಿದ್ದಾರೆ
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನ ಹಿರಿಯ ಮುಖಂಡ ಹಾಗೂ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ಅಧ್ಯಕ್ಷರಾಗಿರುವ ಹೆಚ್.ಎಸ್ ಸುಂದರೇಶ್ ಸ್ವಪಕ್ಷೀಯರ ವಿರುದ್ಧವೇ ಹೀನಮಾನವಾಗಿ ಬೈದಿದ್ದು, ಈಗ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಈ ಸುದ್ದಿ ಶಿವಮೊಗ್ಗ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದು, ಈ ಕುರಿತು ತೀರ್ಥಹಳ್ಳಿ ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ಸಿನ ಜಿಲ್ಲಾ ನಾಯಕತ್ವದ ವಯಕ್ತಿಕ ವಿಷಯಗಳು ಹಾಗೂ ಅವರ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಏನೇ ಇರಲಿ, ಆದರೆ ಎಚ್. ಎಸ್. ಸುಂದರೇಶ್ ರವರು ಸರ್ಕಾರದ ಸಚಿವ ಸಂಪುಟದ ಮಂತ್ರಿಯ ಮೇಲೆ ಗಂಭೀರ ಆರೋಪ ಮಾಡಿದ್ದು, ಈ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕೆಂದು ಒತ್ತಾಯಿಸಿದ್ದಾರೆ.
ತನ್ನ ಬಳಿ ಸಚಿವ ಮಧು ಬಂಗಾರಪ್ಪನವರ ಅತ್ಯಾಪ್ತನೊಬ್ಬ ತಮ್ಮ ಸೂಡಾ ಕಚೇರಿಗೆ ಬಂದು 25 ಲಕ್ಷ ರೂಪಾಯಿ ಲಂಚ ಕೇಳಿದ್ದಾರೆ ಎಂದು ಸುಂದರೇಶ್ ರವರು ಹೇಳಿರುವುದು ಆಘಾತಕಾರಿಯಾಗಿದೆ. ಯಾರೋ ವಿರೋಧಪಕ್ಷದ ನಾಯಕರು ಇದನ್ನು ಹೇಳಿದ್ದರೆ ಹಗುರವಾಗಿ ಪರಿಗಣಿಸಬಹುದಿತ್ತು. ಆದರೆ ಶಿವಮೊಗ್ಗದಲ್ಲಿ ಕಾಂಗ್ರೆಸ್ಸನ್ನು ಕಟ್ಟಿ ಬೆಳೆಸಿದ, 40 ವರ್ಷಕ್ಕೂ ಹೆಚ್ಚಿನ ಕಾಲ ಆ ಪಕ್ಷಕ್ಕೆ ದುಡಿದಿರುವ ಹಿರಿಯ ನಾಯಕರೊಬ್ಬರು ತಮ್ಮದೇ ಪಕ್ಷದ ಸಚಿವರ ವಿರುದ್ಧ ಇಂತಹ ಗಂಭೀರ ಆರೋಪ ಮಾಡಿರುವುದನ್ನ ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಸ್ಪಷ್ಟನೆ ನೀಡಬೇಕು ಹಾಗೂ ನಿಜ ಸಂಗತಿಗಳು ಜಿಲ್ಲೆಯ ಜನರಿಗೆ ಗೊತ್ತಾಗಬೇಕು ಎಂದು ಹೆದ್ದೂರು ನವೀನ್ ಆಗ್ರಹಿಸಿದ್ದಾರೆ.
ಇದು ಸಾರ್ವಜನಿಕರ ಪ್ರಶ್ನೆಯಾಗಿದೆ. ಆದ್ದರಿಂದ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕು. ಜನರಿಗೆ ಸತ್ಯ ತಿಳಿಯುವ ಹಕ್ಕಿದೆ. ಸುಂದರೇಶ್ ರವರ ಪತ್ರಿಕಾಗೋಷ್ಠಿಯಿಂದ ಕೇವಲ ಕಾಂಗ್ರೆಸ್ಸಿನ ಒಳಗಿರುವ ಮುಸುಕಿನ ಗುದ್ದಾಟ, ಬಣ ರಾಜಕೀಯ, ನಾಯಕತ್ವದ ತಿಕ್ಕಾಟವಷ್ಟೇ ಬೀದಿಗೆ ಬರದೇ,ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವು ಹೊರಬಂದಿದೆ ಎಂದು ಹೆದ್ದೂರು ನವೀನ್ ಟೀಕಿಸಿದ್ದಾರೆ. ಆಗ್ರಹಿಸಿದ್ದಾರೆ.
ಇದು ಸಾರ್ವಜನಿಕರ ಪ್ರಶ್ನೆಯಾಗಿದೆ. ಆದ್ದರಿಂದ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕು. ಜನರಿಗೆ ಸತ್ಯ ತಿಳಿಯುವ ಹಕ್ಕಿದೆ. ಸುಂದರೇಶ್ ರವರ ಪತ್ರಿಕಾಗೋಷ್ಠಿಯಿಂದ ಕೇವಲ ಕಾಂಗ್ರೆಸ್ಸಿನ ಒಳಗಿರುವ ಮುಸುಕಿನ ಗುದ್ದಾಟ, ಬಣ ರಾಜಕೀಯ, ನಾಯಕತ್ವದ ತಿಕ್ಕಾಟವಷ್ಟೇ ಬೀದಿಗೆ ಬರದೇ,ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವು ಹೊರಬಂದಿದೆ ಎಂದು ಹೆದ್ದೂರು ನವೀನ್ ಟೀಕಿಸಿದ್ದಾರೆ.
Tags:
ತೀರ್ಥಹಳ್ಳಿ ಸುದ್ದಿ