ನಾಳೆ ತೀರ್ಥಹಳ್ಳಿಯಲ್ಲಿ ದಸರಾ ಪೂರ್ವಭಾವಿ ಸಭೆ - ತಹಸೀಲ್ದಾರ್ ರಂಜಿತ್ Thirthahalli Dasara

ನಾಳೆ ದಸರಾ ಪೂರ್ವಭಾವಿ ಸಭೆ - ತಹಸೀಲ್ದಾರ್ ರಂಜಿತ್ 

ತೀರ್ಥಹಳ್ಳಿ : ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ತೀರ್ಥಹಳ್ಳಿಯಲ್ಲಿ ನಾಳೆ ಮಧ್ಯಾಹ್ನ 2 ಗಂಟೆಗೆ ಗೋಪಾಲಗೌಡ ರಂಗಮಂದಿರದಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರ ಅಧ್ಯಕ್ಷತೆಯಲ್ಲಿ ತಾಲೂಕು ದಂಡಾಧಿಕಾರಿಗಳಾದ ರಂಜಿತ್ ಅವರ ನೇತೃತ್ವದಲ್ಲಿ ದಸರಾ ಪೂರ್ವಭಾವಿ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ..

ಇತ್ತೀಚಿಗೆ ನಡೆಯುತ್ತಿರುವ ದಸರಾ ಮಹೋತ್ಸವ ಆ ಮಟ್ಟಿನ ವಿಜೃಂಭಣೆ ಇಲ್ಲದೆ ಇರುವುದರಿಂದ ಈ ಬಾರಿ ದಸರಾ ಮಹೋತ್ಸವದಲ್ಲಿ ಹಲವಾರು ಬದಲಾವಣೆ ಕಾಣಬಹುದಾ? ಎಂಬ ಚರ್ಚೆ ಈಗಾಗಲೇ ಶುರುವಾಗಿದೆ.. ಕಳೆದ ಬಾರಿ ಮಹಿಳಾ ದಸರಾ ಆಯೋಜನೆ ಮಾಡಿ ಅದರಲ್ಲಿ ಕೆಸರು ಗದ್ದೆ ಕ್ರೀಡಾಕೂಟವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ್ದ ಮಹಿಳೆಯರಿಗೆ ಈ ಬಾರಿ ಅಧ್ಯಕ್ಷ ಸ್ಥಾನ ಸಿಗುತ್ತಾ ಎಂಬ ಚರ್ಚೆ ಈಗಾಗಲೇ ಶುರುವಾಗಿದೆ..

ಪ್ರತಿಯೊಂದು ಬಾರಿ ಒಬ್ಬರೇ ಅಧ್ಯಕ್ಷರು, ಒಬ್ಬರೇ ಸಂಚಾಲಕರು ಎಂಬ ವಿಚಿತ್ರ ಕಾನೂನನ್ನ ಈ ಬಾರಿಯಾದರೂ ಬದಲಾವಣೆ ಮಾಡ್ತಾರ?  ಈ ಬಾರಿ ಓರ್ವ ಮಹಿಳೆಯರಿಗೆ ಸಂಚಾಲಕರ ಸ್ಥಾನ ಸಿಗುತ್ತಾ? ಎಂಬ ಎಲ್ಲಾ ಪ್ರಶ್ನೆಗಳಿಗೆ ಹಾಗೂ ಈ ಬಾರಿ ದಸರಾ ಯಾವ ರೀತಿ ಇರಲಿದೆ ಎಂಬುದರ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ನಾಳೆ ಗೋಪಾಲಗೌಡರಂಗ ಮಂದಿರದಲ್ಲಿ ಪೂರ್ವಭಾವಿ ಸಭೆಯನ್ನ ನಡೆಸಲಾಗುತ್ತಿದೆ ಎಂಬುದಾಗಿ ತಿಳಿಸಲಾಗಿದೆ..

ತೀರ್ಥಹಳ್ಳಿಯ ಪ್ರತಿಯೊಂದು ಸಂಘ ಸಂಸ್ಥೆಗಳು, ಅಧಿಕಾರಿಗಳು ಸಾರ್ವಜನಿಕರು ಅತಿಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲು ತಾಲೂಕು ದಂಡಾಧಿಕಾರಿಗಳು ಮನವಿ ಮಾಡಿದ್ದಾರೆ..
Previous Post Next Post