ತೀರ್ಥಹಳ್ಳಿಯಲ್ಲಿ ಇಂದು ಅತಿ ದೊಡ್ಡ ಗಣಪತಿ ವಿಸರ್ಜನಾ ಮೆರವಣಿಗೆ
ಯುವ - ಯುವತಿಯರ ಜಬರ್ದಸ್ತ್ ಡಾನ್ಸ್ ಮೂಲಕವೇ ಪ್ರಸಿದ್ಧಿ ಪಡೆದ ಏಕೈಕ ಗಣಪ
ತೀರ್ಥಹಳ್ಳಿ : ತಾಲೂಕಿನ ಅತಿ ದೊಡ್ಡ ಗಣಪತಿ ವಿಸರ್ಜನಾ ಮೆರವಣಿಗೆ ಇಂದು ನಡೆಯಲಿದೆ.. ಮೇಲಿನ ಕುರುವಳ್ಳಿಯ ಶ್ರೀವಿದ್ಯಾ ಗಣಪತಿ ಯುವಕ ಸಂಘದ ವಿಸರ್ಜನಾ ಮೆರವಣಿಗೆ ಅತ್ಯಂತ ವೈಭವದಿಂದ ಇಂದು ಜರುಗಲಿದೆ.. ಸಂಜೆ 3:30ಕ್ಕೆ ಆರಂಭವಾಗುವ ಮೆರವಣಿಗೆ ತಾಲೂಕಿನಲ್ಲೇ ಅತಿ ದೊಡ್ಡ ಗಣಪತಿ ವಿಸರ್ಜನಾ ಮೆರವಣಿಗೆ ಎಂಬ ಪ್ರಖ್ಯಾತಿಯನ್ನು ಪಡೆದಿದೆ..
ಯುವಕ- ಯುವತಿಯರ ಜಬರ್ದಸ್ತ್ ಡ್ಯಾನ್ಸ್ ಪ್ರಮುಖ ಆಕರ್ಷಣೆ
ಶ್ರೀ ವಿದ್ಯಾ ಗಣಪತಿ ಯುವಕ ಸಂಘದ ಈ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಯುವಕ ಯುವತಿಯರ ಡ್ಯಾನ್ಸ್ ಪ್ರಮುಖ ಆಕರ್ಷಣೆಯಾಗಿರಲಿದೆ.. ಡಿಜೆ ಸದ್ದಿಗೆ ಬೇಕಾಬಿಟ್ಟಿಯಾಗಿ ಕುಣಿಯುವ ಬದಲಾಗಿ ವಿಶೇಷವಾಗಿ ಡಾನ್ಸ್ ಮಾಡುವ ಮೂಲಕ ಈ ಯುವಕ ಯುವತಿಯರು ರಾಜ್ಯಾದ್ಯಂತ ಪ್ರಸಿದ್ಧಿಯನ್ನು ಪಡೆದಿದ್ದಾರೆ.. ಯುವಕ ಯುವತಿಯರ ಈ ಡಾನ್ಸ್ ನೋಡುವ ಸಲುವಾಗಿ ಸಾವಿರಾರು ಜನರು ಸೇರುತ್ತಾರೆ.. ಶಿವಮೊಗ್ಗ ಸುದ್ದಿ ಮಾಧ್ಯಮದಲ್ಲಿ ಪ್ರಸಾರವಾಗಿದ್ದ ಡಾನ್ಸ್ ವಿಡಿಯೋ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದೆ ಅದಕ್ಕೆ ಸಾಕ್ಷಿ...
ಮೇಲಿನಕುರುವಳ್ಳಿಯಿಂದ ಸಂಜೆ 3:30ಕ್ಕೆ ವಿಸರ್ಜನಾ ಮೆರವಣಿಗೆ ಪ್ರಾರಂಭವಾಗಲಿದ್ದು, ಆ ನಂತರ ತೀರ್ಥಹಳ್ಳಿಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮೇಲಿನಕುರುವಳ್ಳಿಯ ಹೆನ್ನಂಗಿ ಹಳ್ಳದಲ್ಲಿ ವಿಸರ್ಜನೆಯನ್ನು ಮಾಡಲಾಗುತ್ತದೆ.. ಈ ಅತಿ ದೊಡ್ಡ ವಿಸರ್ಜನಾ ಮೆರವಣಿಗೆಯಲ್ಲಿ ಮೇಲಿನ ಕುರುವಳ್ಳಿಯ ಸಮಸ್ತ ಗ್ರಾಮಸ್ಥರು ಭಾಗಿಯಾಗುವಂತೆ ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿಯ ಅಧ್ಯಕ್ಷರು, ಸದಸ್ಯರು ವಿನಂತಿಸಿದ್ದಾರೆ..
Tags:
ಗಣೇಶೋತ್ಸವ