ಕೋಣಂದೂರಿನಲ್ಲಿ ನಡೆದ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ತಂಪು ಪಾನೀಯ ವಿತರಿಸಿದ ಮುಸ್ಲಿಂ ಸಮುದಾಯ
ತೀರ್ಥಹಳ್ಳಿ : ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಇದ್ದಂತಹ ಚಿಂತು ಬಾಂಧವರಿಗೆ ಮುಸ್ಲಿಂ ಸಮುದಾಯದಿಂದ ತಂಪು ಪಾನೀಯ ನೀಡಿ ಸೌಹಾರ್ತತೆ ಮೆರೆದ ಘಟನೆ ಕೋಣಂದೂರಿನಲ್ಲಿ ನಡೆದಿದೆ..
ಕೋಣಂದೂರಿನ ಸೊನಗಾರ ಕೇರಿಯ ಗಣಪತಿ ವಿಸರ್ಜನೆ ವೇಳೆ ಗಣಪತಿಯ ಸೇವಾ ಸಮಿತಿ ಹಾಗೂ ಜೊತೆ ಇದ್ದಂತಹ ಎಲ್ಲಾ ಹಿಂದೂ ಬಾಂಧವರಿಗೆ ಮುಸ್ಲಿಂ ಸಮುದಾಯದ ವತಿಯಿಂದ ತಂಪು ಪಾನೀಯವನ್ನು ನೀಡಿ ಸೌಹಾರ್ದತೆ ಮೆರೆಯಲಾಯಿತು.
ಅಲ್ಲದೆ ಗಣಪತಿ ಬರುವ ವೇಳೆ ಗಣಪತಿಗೆ ಹಾರವನ್ನು ನೀಡಿ, ನಮಸ್ಕರಿಸಿ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನ ಸಾರುವುದರ ಜೊತೆಗೆ ಧರ್ಮ ಬೇರೆಯಾದರೂ ದೇವರು ಒಂದೇ ಎಂಬ ಸಂದೇಶವನ್ನ ಸಾರಿ ಹಿಂದೂ ಮತ್ತು ಮುಸಲ್ಮಾನರು ಸೌಹಾರ್ದತೆಯನ್ನು ಮೆರೆದರು ..
Tags:
ಕೋಣಂದೂರು ಸುದ್ದಿ