ವಿದ್ಯುತ್ ಲೈನ್ ರಿಪೇರಿ ವೇಳೆ ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
ಭದ್ರಾವತಿ : ವಿದ್ಯುತ್ ಲೈನ್ ರಿಪೇರಿ ವೇಳೆ ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವನ್ನಪ್ಪಿರುವ ಘಟನೆ ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ..
ಮಲ್ಲಿಗೇನಹಳ್ಳಿ ಗಡಿ ಬಳಿ ಟ್ರಾನ್ಸ್‌ಫಾರ್ಮರ್ ದುರಸ್ತಿ ಮಾಡುವಾಗ ಈ ದುರಂತ ನಡೆದಿದೆ.. ಮೆಸ್ಕಾಂ ಆನವೇರಿ ಘಟಕದ ಲೈನ್ ಮ್ಯಾನ್ ಎಸ್.ಜೆ ಸಂಜಯ್ ದತ್ (33) ಸಾವನ್ನಪ್ಪಿದ್ದಾರೆ. ಲೈನ್ ಆಫ್ ಮಾಡಿ ಕಂಬ ಹತ್ತಿದ್ದರೂ ವಿದ್ಯುತ್ ದಿಢೀರ್ ಪ್ರವಹಿಸಿದೆ. ಹೊನ್ನಾಳಿ ತಾಲೂಕಿನ ಚಿಕ್ಕ ಬಾಸೂರು ತಾಂಡಾ ಮೂಲದ ಸಂಜಯ್‌ದತ್ ಸಾವನ್ನಪ್ಪಿದ್ದಾರೆ
ಮೃತ ಲೈನ್ ಮ್ಯಾನ್‌ಗೆ ಪತ್ನಿ, 3 ವರ್ಷದ ಮಗಳು, 1 ತಿಂಗಳ ಹೆಣ್ಣು ಮಗು ಇದೆ.. ಸಿಬ್ಬಂದಿಗೆ ಸುರಕ್ಷತಾ ಸಾಮಗ್ರಿ ನೀಡದೆ ನಿರ್ಲಕ್ಷ್ಯ ವಹಿಸಿದ ಆರೋಪ ಕೇಳಿ ಬಂದಿದೆ.. ಅಧಿಕಾರಿಗಳ ಅಧಿಕ ಒತ್ತಡ ಮತ್ತು ಮುನ್ನೆಚ್ಚರಿಕೆ ಕೊರತೆಯೇ ಘಟನೆಗೆ ಕಾರಣ ಎಂಬ ಮಾತು ಕೇಳಿ ಬಂದಿದೆ..ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..
Tags:
ಭದ್ರಾವತಿ ಸುದ್ದಿ